ದರ್ಶನ್ ಹೆಸರಲ್ಲಿ ವಂಚನೆ ಕೇಸ್​; ಆರೋಪಿ ಮಹಿಳೆಯನ್ನ ಬಿಟ್ಟು ಕಳುಹಿಸಿದ ಪೊಲೀಸರು

ದರ್ಶನ್ ಹೆಸರಲ್ಲಿ ವಂಚನೆ ಕೇಸ್​; ಆರೋಪಿ ಮಹಿಳೆಯನ್ನ ಬಿಟ್ಟು ಕಳುಹಿಸಿದ ಪೊಲೀಸರು

ಚಾಮರಾಜನಗರ: ನಟ ದರ್ಶನ್ ಹೆಸರಲ್ಲಿ ಮಹಿಳೆಯೊಬ್ಬರು ವಂಚಿಸಿದ್ದಾರೆ ಎನ್ನಲಾಗಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ವಶಕ್ಕೆ ಪಡೆದಿರುವ ಆರೋಪಿತ ಅರುಣಾ ಕುಮಾರಿಯನ್ನ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

ಆರೋಪ ಪ್ರಕರಣ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಮಹಿಳೆ ಅರುಣಾ ಕುಮಾರಿಯನ್ನ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಅವರಿಗೆ ನೋಟಿಸ್​ ನೀಡಿ ಪೊಲೀಸರು ಬಿಟ್ಟುಕಳುಹಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಇದರ ಹಿಂದೆ ಯಾರಿದ್ರೂ ಬಿಡೋದಿಲ್ಲ.. ರೆಕ್ಕೆಯಲ್ಲ ನಾನು ತಲೆಯನ್ನೇ ಕಟ್ ಮಾಡುವವನು -ದರ್ಶನ್​

ವಿಚಾರಣೆಗೆ ಕರೆದಾಗ ಬರಬೇಕು ಅಂತಾ ಸೂಚಿಸಿ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಮೈಸೂರಿನ ಎಸಿಪಿ ಕಚೇರಿಯಲ್ಲಿ ಆರೋಪಿಯ ವಿಚಾರಣೆ ನಡೆದಿತ್ತು. ವಿಚಾರಣೆ ವೇಳೆ ಬ್ಯಾಂಕ್ ಅಧಿಕಾರಿ ಅಂತ ಹೇಳಿಕೊಂಡು ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾಳೆ ಅಂತಾ ಹೇಳಲಾಗಿದೆ.

ಇದನ್ನೂ ಓದಿ: ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ; ಮಹಿಳೆ ವಿರುದ್ಧ ಜಯನಗರದಲ್ಲಿ ನಿರ್ಮಾಪಕ ಉಮಾಪತಿ ದೂರು

ಇದನ್ನೂ ಓದಿ: ನನ್ನ, ದರ್ಶನ್ ಹಾಗೂ ಹರ್ಷಾ ಸಹಿಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿತ್ತು- ಉಮಾಪತಿ ಗೌಡ

The post ದರ್ಶನ್ ಹೆಸರಲ್ಲಿ ವಂಚನೆ ಕೇಸ್​; ಆರೋಪಿ ಮಹಿಳೆಯನ್ನ ಬಿಟ್ಟು ಕಳುಹಿಸಿದ ಪೊಲೀಸರು appeared first on News First Kannada.

Source: newsfirstlive.com

Source link