ಟೆಸ್ಟ್​ಗೂ ಮುನ್ನ ಕೌಂಟಿಯಲ್ಲಿ ಅಶ್ವಿನ್ ಕಣಕ್ಕೆ -ಆತಂಕದಲ್ಲಿದ್ದ ವಿರಾಟ್​ ಪಡೆಗೆ ಸಿಕ್ತು ಬೂಸ್ಟ್

ಟೆಸ್ಟ್​ಗೂ ಮುನ್ನ ಕೌಂಟಿಯಲ್ಲಿ ಅಶ್ವಿನ್ ಕಣಕ್ಕೆ -ಆತಂಕದಲ್ಲಿದ್ದ ವಿರಾಟ್​ ಪಡೆಗೆ ಸಿಕ್ತು ಬೂಸ್ಟ್

ನಿನ್ನೆಯಿಂದ ಆರಂಭವಾಗಿರುವ ಸೋಮರ್​ಸೆಟ್​​, ಸರ್ರೆ ನಡುವಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಸ್ಪಿನ್ನರ್​​​ ರವಿಚಂದ್ರನ್​ ಅಶ್ವಿನ್​ ಕಣಕ್ಕಿಳಿದಿದ್ದಾರೆ. ಇಂಗ್ಲೆಂಡ್​ ಎದುರಿನ ಟೆಸ್ಟ್​​ ಸರಣಿಗೂ ಮುನ್ನ ಅಶ್ವಿನ್​, ಕೌಂಟಿ ಅಖಾಡಕ್ಕಿಳಿದಿರೋದು ಇದು ಟೀಮ್ ಇಂಡಿಯಾಕ್ಕೆ ಪ್ಲಸ್ ಆಗಲಿದೆ ಎನ್ನಲಾಗಿದೆ.

ಪೂರ್ವಾಭ್ಯಾಸ ಇಲ್ಲದೆ, ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ 2 ವರ್ಷಗಳ ಕನಸು ನುಚ್ಚುನೂರು ಮಾಡಿಕೊಂಡಿದ್ದ ಟೀಮ್ ಇಂಡಿಯಾ, ಈಗ ಇಂಗ್ಲೆಂಡ್ ಸರಣಿಗೆ ಪಂದ್ಯಕ್ಕಾಗಿ ಸಜ್ಜಾಗ್ತಿದೆ. ಇದಕ್ಕಾಗಿ ಟೀಮ್ ಇಂಡಿಯಾ ಈಗಾಗಲೇ 2 ಅಭ್ಯಾಸ ಪಂದ್ಯಗಳನ್ನಾಡಲು ಮುಂದಾಗ್ತಿದೆ. ಆದ್ರೆ, ಡೆಲ್ಟಾ ಹೆಮ್ಮಾರಿಗೆ ಅಭ್ಯಾಸ ಪಂದ್ಯವೂ ಬಲಿಯಾಗೋ ಸಾಧ್ಯತೆ ದಟ್ಟವಾಗಿದೆ.

blank

ಯೆಸ್​, ಒಂದೆಡೆ ಅಭ್ಯಾಸ ಪಂದ್ಯಗಳು ನಡೆಯುತ್ತಾ ಇಲ್ವಾ? ಅನ್ನೋ ಅನುಮಾನ ಮ್ಯಾನೇಜ್​ಮೆಂಟ್​​ ಅನ್ನ ಕಾಡ್ತಿದೆ. ಇದರ ನಡುವೆಯೇ ಅಶ್ವಿನ್,​ ಕೌಂಟಿ ಅಖಾಡಕ್ಕಿಳಿದಿದ್ದಾರೆ. ಇದು ತಂಡಕ್ಕೆ ಕೊಂಚ ರಿಲೀಫ್​​ ನೀಡಿದೆ. ಟೀಮ್ ಇಂಡಿಯಾ ಉಳಿದ ಆಟಗಾರರು ರಜೆ ದಿನಗಳಲ್ಲಿ ಎಂಜಾಯ್ ಮಾಡ್ತಿದ್ರೆ, ಆ್ಯಷ್​​ ಕೌಂಟಿ ಅಖಾಡಕ್ಕಿಳಿದಿದ್ದಾರೆ.

ಸರ್ರೆ ಪರ ಕಣಕ್ಕಿಳಿದ ಕೇರಂ ಸ್ಪೆಷಲಿಸ್ಟ್ ಅಶ್ವಿನ್!
ನಿನ್ನೆಯಿಂದ ಆರಂಭವಾಗಿರುವ ಕೌಂಟಿ ಚಾಂಪಿಯನ್​ ಶಿಪ್​ ಪಂದ್ಯದಲ್ಲಿ ಸರ್ರೆ ತಂಡದ ಪರ ಅಶ್ವಿನ್​ ಕಣಕ್ಕಿಳಿದಿದ್ದಾರೆ. ಸಾಮರ್​ಸೆಟ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರುವ ಅಶ್ವಿನ್, ಸೂಪರ್​ ಸ್ಪೆಲ್ ಮೂಲಕ ಗಮನ ಸೆಳೆದಿದ್ದಾರೆ. ಇದನ್ನ ಇಂಗ್ಲೆಂಡ್​​​ ವಿರುದ್ಧದ ಟೆಸ್ಟ್​​ ಸರಣಿಗೆ ಪೂರ್ವಾಭಾವಿ ಸಿದ್ಧತೆ ಎಂದೇ ಹೇಳಲಾಗ್ತಿದೆ.

ಸರಣಿ ಆರಂಭಕ್ಕೂ ಮುನ್ನ ಅಶ್ವಿನ್​​ರ ಈ ನಡೆ ನಿಜಕ್ಕೂ ಟೀಮ್ ಇಂಡಿಯಾಕ್ಕೆ ನೆರವಾಗಲಿದೆ. ಬ್ಯಾಟಿಂಗ್, ಬೌಲಿಂಗ್​ ಎರಡರಲ್ಲೂ ನೆರವಾಗಬಲ್ಲ ಅಶ್ವಿನ್, ಭಾರತದ ಸಕ್ಸಸ್​ ಕೀ. ಅಭ್ಯಾಸ ಕೊರತೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೋಲಿಗೆ ಕಾರಣವಾಯ್ತು ಅನ್ನೋದನ್ನ ಸ್ವತಃ ವಿರಾಟ್​​ ಕೊಹ್ಲಿಯೇ ಹೇಳಿಕೊಂಡಿದ್ರು. ಹೀಗಾಗಿ ಇಂಗ್ಲೆಂಡ್​​ ಎದುರಿನ ಸರಣಿಗೂ ಮುನ್ನ ಅಶ್ವಿನ್​ ಕೌಂಟಿ ಅಖಾಡಕ್ಕಿಳಿದಿರೋದು ಟೀಮ್ ಇಂಡಿಯಾಕ್ಕೆ ನೆರವಾಗುತ್ತೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

The post ಟೆಸ್ಟ್​ಗೂ ಮುನ್ನ ಕೌಂಟಿಯಲ್ಲಿ ಅಶ್ವಿನ್ ಕಣಕ್ಕೆ -ಆತಂಕದಲ್ಲಿದ್ದ ವಿರಾಟ್​ ಪಡೆಗೆ ಸಿಕ್ತು ಬೂಸ್ಟ್ appeared first on News First Kannada.

Source: newsfirstlive.com

Source link