ಜೈಲಿನಲ್ಲೂ ಮಾರಕಾಸ್ತ್ರ ಇಟ್ಕೊಂಡು ರೌಡಿಸಂ; ಬಾಂಬೆ ಸಲಿಂ ವಿರುದ್ಧ ದಾಖಲಾಯ್ತು FIR

ಜೈಲಿನಲ್ಲೂ ಮಾರಕಾಸ್ತ್ರ ಇಟ್ಕೊಂಡು ರೌಡಿಸಂ; ಬಾಂಬೆ ಸಲಿಂ ವಿರುದ್ಧ ದಾಖಲಾಯ್ತು FIR

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟೋರಿಯಸ್ ರೌಡಿಶೀಟರ್ ಬಾಂಬೇ ಸಲಿಂ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಇತ್ತೀಚೆಗೆ ಕಮಿಷನರ್ ಕಮಲ್​ ಪಂತ್ ಸೂಚನೆಯಂತೆ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ಮಾಡಿದ್ದರು. ಜೈಲಿನ ಎಲ್ಲಾ ಬ್ಯಾರಕ್​​ಗಳನ್ನ ಪರಿಶೀಲನೆ ನಡೆಸಿದಾಗ ಚಾಕು, ಚೂರಿ ಸೇರಿದಂತೆ ಮಾರಕಾಸ್ತ್ರ, ಮಾದಕವಸ್ತುಗಳು, ಮೊಬೈಲ್ಸ್​ ಪತ್ತೆಯಾಗಿದ್ದವು.

blank
ಬಾಂಬೆ ಸಲಿಂ

ಅದರಲ್ಲೂ ಬಾಂಬೆ ಸಲೀಂ ವಿರುದ್ಧ ಜೈಲಿನಲಿದ್ದುಕೊಂಡೆ ಅಕ್ರಮ‌ ದಂಧೆಯಲ್ಲಿ ತೊಡಗಿರುವ ಆರೋಪ ಕೇಳಿಬಂದಿತ್ತು. ಜೈಲಿನಲ್ಲಿರುವ ಕ್ರಿಮಿನಲ್​​ಗೆ ಮಾರಾಕಾಸ್ತ್ರಗಳ ಅಗತ್ಯ ಯಾಕೆ? ಮಾರಾಕಾಸ್ತ್ರಗಳನ್ನ ರೌಡಿಶೀಟರ್​ಗೆ ಸಪ್ಲೈ ಮಾಡಿದ್ದಾದ್ರೂ ಯಾರು? ಅನ್ನೋ ಪ್ರಶ್ನೆ ಶುರುವಾಗಿತ್ತು. ಅಲ್ಲದೇ ಈ ಬಗ್ಗೆ ತನಿಖೆ ನಡೆಸುವಂತೆ ಸಿಸಿಬಿ ಇನ್ಸ್​​ಪೆಕ್ಟರ್ ದೀಪಕ್ ದೂರು ನೀಡಿದ್ದರು.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ.. ಮಾರಕಾಸ್ತ್ರಗಳ ಕಂಡು ದಂಗಾದ ಸಿಸಿಬಿ

ಜೈಲಿನಲ್ಲಿ ಸಿಕ್ಕ ಮಾದಕವಸ್ತು, ಮಾರಾಕಾಸ್ತ್ರಗಳ ಬಗ್ಗೆ ತನಿಖೆಗೊಳಪಡಿಸುವಂತೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರೌಡಿ ಶೀಟರ್ ಬಾಂಬೆ ಸಲಿಂ ಮೇಲೆ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: 2 ಸಾವಿರಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ರೇಡ್.. ಪೊಲೀಸರಿಗೆ ಸಿಕ್ಕ ಆಯುಧಗಳಿವು..

The post ಜೈಲಿನಲ್ಲೂ ಮಾರಕಾಸ್ತ್ರ ಇಟ್ಕೊಂಡು ರೌಡಿಸಂ; ಬಾಂಬೆ ಸಲಿಂ ವಿರುದ್ಧ ದಾಖಲಾಯ್ತು FIR appeared first on News First Kannada.

Source: newsfirstlive.com

Source link