ಶ್ಯೂರಿಟಿ ದೋಖಾ ಆರೋಪ: ‘ನಮಗೆ ಕೆಲವರ ಮೇಲೆ ಅನುಮಾನ ಇದೆ’ ಎಂದ ದರ್ಶನ್ ಆಪ್ತ

ಶ್ಯೂರಿಟಿ ದೋಖಾ ಆರೋಪ: ‘ನಮಗೆ ಕೆಲವರ ಮೇಲೆ ಅನುಮಾನ ಇದೆ’ ಎಂದ ದರ್ಶನ್ ಆಪ್ತ

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ ಶ್ಯೂರಿಟಿ ದೋಖಾ ಆರೋಪ ಪ್ರಕರಣದಲ್ಲಿ ಯಾರೋ ದೊಡ್ಡವರು ಇದ್ದಾರೆ, ಆದರೆ ಈಗ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ ಅಂತಾ ದರ್ಶನ್ ಅವರ ಆಪ್ತ ರಾಕೇಶ್ ಪಾಪಣ್ಣ ಹೇಳಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ರಾಕೇಶ್ ಪಾಪಣ್ಣ.. ಈ ಪ್ರಕರಣದಲ್ಲಿ ಏನೋ ಮೋಸ ಮಾಡುವ ಹುನ್ನಾರ ನಡೆದಿದೆ. ಒಂದಿಷ್ಟು ಜನರ ಮೇಲೆ ಅನುಮಾನ ಇದೆ, ಆದರೆ ಈ ಸಂದರ್ಭದಲ್ಲಿ ನಾವು ಯಾರ ಹೆಸರನ್ನೂ ಹೇಳಲ್ಲ, ತನಿಖೆಯಿಂದ ಗೊತ್ತಾಗಲಿದೆ ಎಂದರು.

ಅರುಣಾ ಕುಮಾರಿ ಅನ್ನೋರು ಜೂನ್ 16 ರಂದು ತಮ್ಮ ಇಬ್ಬರು ಸ್ಟಾಫ್​​ಗಳನ್ನ ಕರೆದುಕೊಂಡು ದರ್ಶನ್ ಫಾರ್ಮ್​ ಹೌಸ್​ಗೆ ಬಂದಿದ್ದರು. ಈ ವೇಳೆ ನಾವು ಹೋಗಿದ್ವಿ, ನಾವು ತಾವು ಯಾರು ಎಂದು ವಿಚಾರಿಸಿದಾಗ ಬೆಂಗಳೂರಿನ ಸೌಥ್​ ಎಂಡ್​ ಸರ್ಕಲ್​ ಬಳಿಯಿರುವ ಕೆನರಾ ಬ್ಯಾಂಕ್ ಮ್ಯಾನೇಜರ್​ ಎಂದು ಹೇಳಿದ್ದಾರೆ.

ನಮ್ಮನ್ನ ನೋಡಿದ ಆ ತಂಡ ಸ್ವಲ್ಪ ಗಾಬರಿಯಾದರು. ಬಳಿ ನಮಗೆ ಕೆಲಸ ಇದೆ ಎಂದು ಹೊರಟು ಹೋದರು. ಈ ಸಂದರ್ಭದಲ್ಲಿ ನಮಗೆ ಅವರ ಐಡಿ ಕೇಳಲು ಆಗಿರಲಿಲ್ಲ. ನಂತರ ನಾವು ಬೆಂಗಳೂರಿಗೆ ಹೋಗಿ ವಿಚಾರಿಸಿದಾಗ ಆ ಬ್ಯಾಂಕ್​ನ ಬ್ರ್ಯಾಂಚ್​​ನಲ್ಲಿ ಅರುಣಾ ಕುಮಾರಿ ಅನ್ನುವ ಯಾವುದೇ ಬ್ರ್ಯಾಂಚ್​ ಇರಲಿಲ್ಲ. ಹೀಗಾಗಿ ಜೂನ್ 17 ರಂದು ದೂರು ನೀಡಿ ಬಂದಿದ್ದೇವೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ. ಪೊಲೀಸ್ ಡಿಪಾರ್ಟ್​​ಮೆಂಟ್​​ನಿಂದ ಸತ್ಯ ಹೊರ ಬರಲಿದೆ ಅಂತಾ ದರ್ಶನ್ ಅವರ ಆಪ್ತ ರಾಕೇಶ್ ಪಾಪಣ್ಣ ಹೇಳಿದ್ದಾರೆ.

The post ಶ್ಯೂರಿಟಿ ದೋಖಾ ಆರೋಪ: ‘ನಮಗೆ ಕೆಲವರ ಮೇಲೆ ಅನುಮಾನ ಇದೆ’ ಎಂದ ದರ್ಶನ್ ಆಪ್ತ appeared first on News First Kannada.

Source: newsfirstlive.com

Source link