ಬ್ರಿಟಿಷರಿಗೆ ಮತ್ತೆ ನಿರಾಸೆ; ಕೈಗೆ ಬಂದ ತುತ್ತು ಬಾಯಿಗೆ ಬರಲೇ ಇಲ್ಲ..!

ಬ್ರಿಟಿಷರಿಗೆ ಮತ್ತೆ ನಿರಾಸೆ; ಕೈಗೆ ಬಂದ ತುತ್ತು ಬಾಯಿಗೆ ಬರಲೇ ಇಲ್ಲ..!

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಿದೆಯಲ್ಲ? ಅದು ಇಂಗ್ಲೆಂಡ್ ಫುಟ್ಬಾಲ್ ತಂಡಕ್ಕೆ ಪಟ್ಟಾಗಿ Suit ಆಗುತ್ತೆ..
ಮ್ಯಾಚ್ ಶುರು ಆದ ನಾಲ್ಕೇ ನಿಮಿಷಕ್ಕೆ ಮಿಸೈಲ್ ವೇಗದಲ್ಲಿ ಗೋಲ್ ಬಾರಿಸಿ ದಾಖಲೆ ಬರೆದ ಹ್ಯಾರಿ ಕೇನ್ ಪಡೆ ಪೆನಾಲ್ಟಿಸ್
ಎಂಬ ಯಕಃಶ್ಚಿತ್ ಹೋರಾಟದಲ್ಲಿ ಎಡವಿ ಯುರೋ ಕಿರೀಟವನ್ನ ಇಟಲಿಯ ತಲೆಗೆ ಕೈಯಾರೆ ಹಾಕಿದೆ..
ಬಹುಶಃ ಈ ಸೋಲು ಇಂಗ್ಲೆಂಡ್ ಮದ್ದಾನೆಗಳಿಗೆ ಮುಂದಿನ ಮಹಾಕದನದವರೆಗೂ ಕಾಡಿದರೆ ಸಂಶಯವಿಲ್ಲ..ಯುರೋ ಟೂರ್ನಿಯಲ್ಲಿ ಇಟಲಿ ಎದುರು ಇಂಗ್ಲೆಂಡ್ ಗೆದ್ದಿರೋ ಉದಾಹರಣೆಯಿಲ್ಲ.. ನಿನ್ನೆ ಇತಿಹಾಸವನ್ನು ಬದಲಾಯಿಸಿ ಮನೆಯ ಮೈದಾನದಲ್ಲೇ ವಿಜಯಪತಾಕೆ ಹಾರಿಸುವ ಎಲ್ಲಾ ಅವಕಾಶಗಳಿದ್ದರೂ ಆಟಗಾರರ ಅವಸರದ ಅಬ್ಬರಕ್ಕೆ ದಕ್ಕಿದ್ದು ಸೋಲಿನ ಆಘಾತ..
https://twitter.com/FootballJOE/status/1414375895800983553?s=20
ಮೂರು ದಶಕಗಳ ಕನಸನ್ನು ಗಟ್ಟಿಯಾಗಿಸಿಕೊಂಡೆ ಬಂದಿದ್ದ ಇಟಲಿಗೆ ಸಿಕ್ಕಿದ್ದು ಗೆಲುವಿನ ಸಿಹಿ ಊಟ.. ಮಾರ್ಕಸ್ ಱಶ್​ಫೋರ್ಡ್, ಜೆಡಾನ್ ಸ್ಯಾಂಚೊ, ಬುಕಾಯೋ, ಸಾಕಾ ಪೆನಾಲ್ಟೀಸ್​ ಪರೀಕ್ಷೆಯಲ್ಲಿ ಸೋತರು..ಅವರು ಸೋತರು ಎನ್ನುವುದಕ್ಕಿಂತ ಹೆಚ್ಚಾಗಿ ಹಕ್ಕಿಯನ್ನೇ ನಾಚಿಸುವಂತೆ ಹಾರಿ ಚೆಂಡು ಗುರಿ ತಲುಪದಂತೆ ತಡೆಗೋಡೆ ನಿರ್ಮಿಸಿ ತಂಡಕ್ಕೆ ಇಂಗ್ಲೆಂಡ್ ಕೈಲಿದ್ದ ಗೆಲುವಿನ ತುತ್ತು ತಿನ್ನಿಸಿದ್ದು ಇಟಲಿಯ ಅಸಾಮಾನ್ಯ ಗೋಲ್ ಕೀಪರ್ ಜಿಯಾನ್​ಲುಯ್ಗಿ ದೊನ್ನರುಮ್ಮ.. ಅವರೇ ಈಗ Player Of the Tournament.. ಇಲ್ಲಿ ಚೆಂಡು ಚಂಚಲವಾಯಿತೋ ಅಥವಾ ಇಟಲಿಯ ಕೋಚ್ ಎಂಬ ಹಿರಿತನದ ಶಕ್ತಿ ಹ್ಯಾರಿ ಪಡೆಯ ಕಟ್ಟಿ ಹಾಕಿತೋ ಗೊತ್ತಿಲ್ಲ ಎರಡು ಬಲಿಷ್ಠ ತಂಡಗಳ ಮಧ್ಯ ಅಂತಿಮ ಕ್ಷಣದಲ್ಲಿ ಅದೃಷ್ಟಲಕ್ಷ್ಮಿ ಆಟವಾಡಿದ್ದಂತೂ ಸತ್ಯ…
ವಿಶೇಷ ಬರಹ: ಸುಧಾಕರ್ ಎಸ್, ನ್ಯೂಸ್ ಡೆಸ್ಕ್

The post ಬ್ರಿಟಿಷರಿಗೆ ಮತ್ತೆ ನಿರಾಸೆ; ಕೈಗೆ ಬಂದ ತುತ್ತು ಬಾಯಿಗೆ ಬರಲೇ ಇಲ್ಲ..! appeared first on News First Kannada.

Source: newsfirstlive.com

Source link