ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ 11 ಮಂದಿ ಸಿಡಿಲಿಗೆ ಬಲಿ- ನಿನ್ನೆ ಒಂದೇ ದಿನ 68 ಮಂದಿ ದುರ್ಮರಣ

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ 11 ಮಂದಿ ಸಿಡಿಲಿಗೆ ಬಲಿ- ನಿನ್ನೆ ಒಂದೇ ದಿನ 68 ಮಂದಿ ದುರ್ಮರಣ

ನವದೆಹಲಿ: ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಸಿಡಿಲು ಸಾವಿನ ಕೇಕೆ ಹಾಕಿದ್ದು, ನಿನ್ನೆ ಒಂದೇ ದಿನ 68 ಜನರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ 41, ರಾಜಸ್ಥಾನದಲ್ಲಿ 20, ಮಧ್ಯಪ್ರದೇಶದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ.

ಒಂದೇ ದಿನ ಈ ಮೂರು ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು 68 ಜನ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಸಿಡಿಲು ಬಡಿದು ಅತಿಹೆಚ್ಚು ಅಂದ್ರೆ 14 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಕಾನ್ಪುರ್ 6​, ಫತೇಪುರ್​ನಲ್ಲಿ ತಲಾ 5, ಕೌಶಂಬಿಯಲ್ಲಿ ನಾಲ್ವರು ಸಾವು ಮೃತಪಟ್ಟಿದ್ದಾರೆ.

ಫಿರೋಜಾಬಾದ್ 3, ಉನ್ನಾವ್, ಹಮೀರ್​ಪುರ್​ನಲ್ಲಿ ಇಬ್ಬರು ಮರಣ ಹೊಂದಿದ್ರೆ, ಸೋನಭದ್ರ 2, ಪ್ರತಾಪ್​ಗಢ್, ಹರ್ದೋಯಿ, ಮಿರ್ಜಾಪುರ್​ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಇನ್ನು 22 ಜನರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗ್ತಿದೆ.

ಮಧ್ಯಪ್ರದೇಶದ ಶಿಯೋಪುರ್, ಗ್ವಾಲಿಯರ್​ನಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಶಿವಪುರಿ, ಅನುಪ್​ಪುರ್, ಬೈತುಲ್​ನಲ್ಲಿ ತಲಾ ಒಬ್ಬ ಮೃತಪಟ್ಟಿದ್ದಾರೆ.

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಎರಗಿದ ಯಮ
ಜೈಪುರ್​ನಲ್ಲಿ​ 11, ಧೌಲ್​ಪುರ್​ನಲ್ಲಿ 3, ಕೋಟಾದಲ್ಲಿ 4 ಸಾವನ್ನಪ್ಪಿದ್ದಾರೆ. ಝಾಲವಾಡ್, ಬಾರಾನಲ್ಲಿ ತಲಾ ಒಬ್ಬ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸಿಡಿಲಿಗೆ ಮೃತಪಟ್ಟ 20 ಜನರ ಪೈಕಿ ಏಳು ಜನ ಮಕ್ಕಳಿದ್ದಾರೆ ಅಂತಾ ವರದಿಯಾಗಿದೆ.

ಜೈಪುರದ ಹೊರವಲಯದ ಆಮೇರ್​ ಕೋಟೆ ವೀಕ್ಷಿಸಲು ಪ್ರವಾಸಿಗರು ಬಂದಿದ್ದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಸಿಡಿಲು ಬಡಿದು 11 ಜನರು ಸಾವನ್ನಪ್ಪಿದ್ದಾರೆ. ಒಟ್ಟು 17 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಮೃತರ ಕುಟುಂಬಕ್ಕೆ ರಾಜಸ್ಥಾನ ಸರ್ಕಾರದಿಂದ ₹5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಸಿಡಿಲು ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

The post ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ 11 ಮಂದಿ ಸಿಡಿಲಿಗೆ ಬಲಿ- ನಿನ್ನೆ ಒಂದೇ ದಿನ 68 ಮಂದಿ ದುರ್ಮರಣ appeared first on News First Kannada.

Source: newsfirstlive.com

Source link