ಟಿ20 ವಿಶ್ವಕಪ್​​ನಲ್ಲಿ ಯಾರಾಗ್ತಾರೆ ಮ್ಯಾಚ್ ವಿನ್ನರ್? ಮೂರು ಹೆಸರು ಕೊಟ್ಟ ಯುವಿ

ಟಿ20 ವಿಶ್ವಕಪ್​​ನಲ್ಲಿ ಯಾರಾಗ್ತಾರೆ ಮ್ಯಾಚ್ ವಿನ್ನರ್? ಮೂರು ಹೆಸರು ಕೊಟ್ಟ ಯುವಿ

ಲಂಕಾ ಪ್ರವಾಸ ವಿಶ್ವಕಪ್​ ಸರಣಿಯ ಪೂರ್ವಾಭಾವಿ ಎಂದು ಹೇಳಲಾಗ್ತಿದೆ. ಹೀಗಾಗಿ ಅಕ್ಟೋಬರ್​ನಲ್ಲಿ ನಡೆಯಲಿರೋ ಟಿ20 ವಿಶ್ವಕಪ್​ ಕುರಿತು ಚರ್ಚೆಗಳು ಗರಿಗರಿಗೆದರಿವೆ. ಮಹತ್ವದ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಈ ಮೂವರು ಇಂಪಾರ್ಟೆಂಟ್ ರೋಲ್ ಪ್ಲೇ ಮಾಡ್ತಾರೆ ಅಂತಾ ಯುವರಾಜ್​ ಸಿಂಗ್​ ಹೇಳಿದ್ದಾರೆ. ಯುವಿ ಹೇಳಿದ ಬೆಸ್ಟ್​​ ತ್ರೀ ಕಾಂಬಿನೇಷನ್​ ಯಾವುದು?

2021ರ ಟಿ20 ವಿಶ್ವಕಪ್​​ ಟೂರ್ನಿಗೆ ವಿಶ್ವ ಕ್ರಿಕೆಟ್​ ಲೋಕದಲ್ಲಿ ಸಿದ್ಧತೆಗಳು ಜೋರಾಗಿ ನಡೀತಿವೆ. ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ತಂಡಗಳು, ದ್ವಿಪಕ್ಷೀಯ ಸರಣಿಗಳನ್ನಾಡುತ್ತಾ ಭರ್ಜರಿ ತಯಾರಿ ಆರಂಭಿಸಿವೆ. ಇದರಿಂದ ವಿಭಿನ್ನ ಮಾದರಿಯ ಸರಣಿಗಳನ್ನಾಡುತ್ತಿರುವ ಟೀಮ್ ಇಂಡಿಯಾ ಕೂಡ ಹೊರತಾಗಿಲ್ಲ. ಆದ್ರೆ, ಯುವರಾಜ್ ಸಿಂಗ್, ಎಮ್​.ಎಸ್.ಧೋನಿ ಬಳಿಕ ಪರಿಪಕ್ವ ಮ್ಯಾಚ್ ವಿನ್ನರ್​ಗಳನ್ನ ಕಾಣದ ಟೀಮ್ ಇಂಡಿಯಾಕ್ಕೆ ಟಿ20 ವಿಶ್ವಕಪ್​ ದೊಡ್ಡ ಸವಾಲೇ ಆಗಿದೆ.

blank

ಮೂವರ ಕೈಯಲ್ಲಿದೆಯಂತೆ ಟಿ20 ವಿಶ್ವಕಪ್ ಗೆಲುವಿನ ಕೀ!
ಸದ್ಯ ಯುವ ಹಾಗೂ ಅನುಭವಿ ಆಟಗಾರರನ್ನ ಒಳಗೊಂಡ ಟೀಮ್ ಇಂಡಿಯಾ, ಸಖತ್ ಸ್ಟ್ರಾಂಗ್ ಆಗಿದೆ. ಹೀಗಾಗಿಯೇ ವಿಶ್ವಕಪ್​ ಗೆಲ್ಲೋ ಫೇವರಿಟ್​ ತಂಡವಾಗಿ ಗುರುತಿಸಿಕೊಂಡಿದೆ. ಆದ್ರೆ, ಮಧ್ಯಮ ಕ್ರಮಾಂಕದ ಅಸ್ಥಿರ ಪ್ರದರ್ಶನ ಟೀಮ್ ಇಂಡಿಯಾಕ್ಕೆ ಹಿನ್ನಡೆಯಾಗಿದೆ. ಇದು ವಿಶ್ವಕಪ್​​​ನಲ್ಲಿ ನಿರ್ಣಾಯಕವಾಗಲಿದೆ. ಈ ಬಗ್ಗೆ ಮಾತನಾಡಿರುವ ಯುವರಾಜ್​ ಸಿಂಗ್, ಈ ಮೂವರು ಆಟಗಾರರು ಸರಿಯಾದ ಪ್ರದರ್ಶನ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

blank

‘ರಿಷಭ್​, ಹಾರ್ದಿಕ್​, ಜಡೇಜಾ ಆಡಬೇಕು’

‘ಟೀಮ್ ಇಂಡಿಯಾ ಮಿಡಲ್ ಆರ್ಡರ್​ನಲ್ಲಿ ಉತ್ತಮ ಹಿಟ್ಟರ್‌ಗಳನ್ನ ಹೊಂದಿದೆ. ಟಿ20 ಫಾರ್ಮೆಟ್​​ನಲ್ಲಿ ರಿಷಭ್ ಪಂತ್, ಹಾರ್ದಿಕ್ ಹೆಚ್ಚು ಸಮಯ ಕಳೆದರೆ, ಅಸಾಧಾರಣ ಜೋಡಿಯಾಗುತ್ತಾರೆ. ಇವರ ನಂತರ ಜಡೇಜಾ ಬರುತ್ತಾರೆ. ಆದ್ದರಿಂದ ಈ ಮೂವರು ಆಟಗಾರರು ಪಂದ್ಯವನ್ನ ಯಾವಾಗ ಬೇಕಾದರೂ ಚೇಂಜ್ ಮಾಡಬಹುದು. ಸದ್ಯ ಜಡೇಜಾ ಶಾರ್ಟ್​ ಫಾರ್ಮೆಟ್​ನಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದಾರೆ. ನನ್ನ ಹಾಗೂ ಧೋನಿಯಂತೆ ಬಲ-ಎಡಗೈ ಕಾಂಬಿನೇಷನ್​ ಯಾವಾಗಲೂ ಅಪಾಯಕಾರಿ. ಹೀಗಾಗಿ ನಾನು ರಿಷಭ್, ಹಾರ್ದಿಕ್ ಹಾಗೂ ಜಡೇಜಾರನ್ನ 5, 6, 7ನೇ ಕ್ರಮಾಂಕದಲ್ಲಿ ಆಡುವುದನ್ನ ನೋಡಲು ಬಯಸುತ್ತೇನೆ’.

ಯುವರಾಜ್ ಸಿಂಗ್, ಮಾಜಿ ಆಟಗಾರ

blank

ಹೌದು..! ಯುವರಾಜ್ ಸಿಂಗ್ ಹೇಳಿದಂತೆ, ಲೆಫ್ಟ್​ ಆ್ಯಂಡ್ ರೈಟ್​ ಕಾಂಬಿನೇಷನ್​​ ಹೆಚ್ಚು ಅಪಾಯಕಾರಿ. ವಿಶ್ವ ಕ್ರಿಕೆಟ್​ನಲ್ಲಿ ಇದು ಫ್ರೂವ್ ಕೂಡ ಆಗಿದೆ. ಇನ್ನೂ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್​ನಲ್ಲಿ ಈ ಲೆಫ್ಟ್ ಆ್ಯಂಡ್ ರೈಟ್ ಕಾಂಬಿನೇಷನ್ ಟೀಮ್ ಇಂಡಿಯಾಕ್ಕೆ ಗೆಲುವಿಗೆ ಕಾರಣ ಅನ್ನೊದನ್ನ ಮರೆಯುವಂತಿಲ್ಲ. ಹೀಗಾಗಿ ಈ ಮೂವರೇ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಮೇನ್ ರೋಲ್ ಪ್ಲೇ ಮಾಡಬೇಕಾಗುತ್ತೆ.

ಈಗಾಗಲೇ ಬಿಗ್ ಹಿಟ್ಟರ್​​​ಗಳಾಗಿ ಖ್ಯಾತಿ ಪಡೆದಿರೋ ಪಂತ್​, ಹಾರ್ದಿಕ್​, ಜಡೇಜಾ ಲೋವರ್​ ಆರ್ಡರ್​ನಲ್ಲಿ ಗೇಮ್​ ಚೇಂಜರ್​​ಗಳಾಗಿ ರೂಪುಗೊಂಡಿದ್ದಾರೆ. ಇದೇ ಕನ್ಸಿಸ್ಟೆನ್ಸಿಯನ್ನ ಮುಂದುವರೆಸಿದ್ರೆ, 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಹಕಾರಿಯಾಗಲಿದೆ ಅನ್ನೋದ್ರಲ್ಲಿ ಅನುಮಾವೇ ಇಲ್ಲ.

blank

The post ಟಿ20 ವಿಶ್ವಕಪ್​​ನಲ್ಲಿ ಯಾರಾಗ್ತಾರೆ ಮ್ಯಾಚ್ ವಿನ್ನರ್? ಮೂರು ಹೆಸರು ಕೊಟ್ಟ ಯುವಿ appeared first on News First Kannada.

Source: newsfirstlive.com

Source link