ದರ್ಶನ್ & ಉಮಾಪತಿಯನ್ನ ಆರೋಪಿ ಅರುಣಾ ಕುಮಾರಿ ಸಂಪರ್ಕಿಸಿದ್ದು ಹೇಗೆ..?

ದರ್ಶನ್ & ಉಮಾಪತಿಯನ್ನ ಆರೋಪಿ ಅರುಣಾ ಕುಮಾರಿ ಸಂಪರ್ಕಿಸಿದ್ದು ಹೇಗೆ..?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ ಶ್ಯೂರಿಟಿ ದೋಖಾ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಉಮಾಪತಿ ಗೌಡ ಹೆಸರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನ್ಯೂಸ್​ಫಸ್ಟ್​ ಜೊತೆ ಮಾನಾಡಿದ ಉಮಾಪತಿ, ತಮಗೆ ಆರೋಪಿ ಅರುಣಾ ಕುಮಾರಿ ಹೇಗೆ ಸಂಪರ್ಕ ಮಾಡಿದರು ಅನ್ನೋದ್ರ ಬಗ್ಗೆ ಮಾಹಿತಿ ನೀಡಿದರು.

ಇಲ್ಲಿ ಯಾವುದೇ ದಾಖಲೆಗಳು ಫೋರ್ಜರಿ ಆಗಿಲ್ಲ. ಅರುಣಾ ಕುಮಾರಿ ಬಂದು ನನ್ನ ಮತ್ತು ದರ್ಶನ್ ಸರ್​ ಅವರ ಶ್ಯೂರಿಟಿ ತೆಗೆದುಕೊಳ್ತಿದ್ದೇವೆ ಅಂತಾ ಹೇಳಿದ ಮೇಲೆ ನಾವು ವಿಚಾರಿಸಿದ್ವಿ. ದರ್ಶನ್ ಸರ್​​ಗೆ ಸಂಬಂಧಿಸಿದ ಒಂದಿಷ್ಟು ಡಾಕ್ಯುಮೆಂಟ್ಸ್​ ಇದೆ ಎಂದು ಅರುಣಾ ಕುಮಾರಿ ಹೇಳಿದ್ದರು. ಆದರೆ ಅವರು ಆ ಡಾಕ್ಯುಮೆಂಟ್​​ಗಳನ್ನ ನಮಗೆ ಕೊಟ್ಟಿರಲಿಲ್ಲ. ಹೀಗಾಗಿ ನಮಗೆ ಡೌಟ್ ಬರುತ್ತೆ, ಕೂಡಲೇ ನಾನು ದರ್ಶನ್ ಜೊತೆ ಮಾತನಾಡಿದೆ. ಬಳಿಕ ಜೂನ್ 17 ರಂದು ಜಯನಗರ ಠಾಣೆಗೆ ಮನವಿ ಪತ್ರ ನೀಡಿ ಬಂದೆ. ಅದಕ್ಕೆ ಅವರು ಎಫ್​ಐಆರ್ ಮಾಡಿದ ಮೇಲೆಯೇ ನಾವು ತನಿಖೆಯನ್ನ ಮುಂದುವರಿಸಬೇಕಾಗುತ್ತೆ ಎಂದರು. ನನ್ನ ಮನವಿಯಂತೆ ಇನ್ಸ್​ಪೆಕ್ಟರ್ ಸುದರ್ಶನ್ ಅವರು ಸ್ಟೇಟ್​ಮೆಂಟ್ ಪಡೆದುಕೊಂಡರು.

ಶ್ಯೂರಿಟಿಗೆ ಸಹಿ ಹಾಕಿರೋದನ್ನ ನಮಗೆ ತೋರಿಸಿಲ್ಲ
ಅರುಣ್ ಕುಮಾರ್ ನಮ್ಮ ಬಳಿ ಡಾಕ್ಯೂಮೆಂಟ್ಸ್​ ನೇರವಾಗಿ ತೆಗೆದುಕೊಂಡು ಬಂದರೆ ನಮಗೆ ಯಾವುದೇ ಅನುಮಾನ ಬರುತ್ತಿರಲಿಲ್ಲ. ನಾವು ಡಾಕ್ಯುಮೆಂಟ್ಸ್​ ಬಗ್ಗೆ ಕೇಳಿದಾಗ ಇವರು ಬ್ಯಾಂಕ್ ಅಲ್ಲಿದೆ ಅಂತಾ ಕಥೆ ಹೇಳಿದರು. ಆಗಲೇ ನಮಗೆ ಡೌಟ್ ಬಂದಿರೋದು. ಶ್ಯೂರಿಟಿಗೆ ಸಹಿ ಹಾಕಿರೋದನ್ನ ನಮಗೆ ತೋರಿಸಿಲ್ಲ.

ಕೆನರಾ ಬ್ಯಾಂಕಿನಲ್ಲಿ ನಮ್ಮ ಅಣ್ಣನ ಅಕೌಂಟ್ ಇರುತ್ತದೆ, ಬ್ಯಾಂಕ್ ಆಪ್ಷನ್​ನಲ್ಲಿ ನಮ್ಮ ಇನ್ವೆಸ್ಟ್​ಮೆಂಟ್​ಗೆ ಅಂತಾ ನಾವು ಪ್ರಾಪರ್ಟಿ ತೆಗೆದುಕೊಳ್ತೀವಿ. ಅದರ ಮೂಲಕವಾಗಿ ನಮ್ಮನ್ನ ಇವರು ಸಂಪರ್ಕಿಸುತ್ತಾರೆ.

ಅರುಣ್ ಕುಮಾರಿ ಅವರೇ ನೇರವಾಗಿ ಬಂದು ನನ್ನನ್ನ ಸಂಪರ್ಕ ಮಾಡಿದರು. ಹರ್ಷ ಅವರು ನಿಮ್ಮ ಮತ್ತು ದರ್ಶನ್ ಹೆಸರಲ್ಲಿ ಲೋನ್ ಮಾಡಿದ್ದಾರೆ ಎಂದು ಅರುಣಾ ಕುಮಾರಿ ಮೂಲಕ ತಿಳಿಯಿತು. ಕೂಡಲೇ ನಾನು ಹರ್ಷಾ ಜೊತೆ ಮಾತನಾಡಿ, ದರ್ಶನ್ ಅವರನ್ನ ಸಂಪರ್ಕಿಸಲು ಪ್ರಯತ್ನಿಸಿದೆ. ಅದಕ್ಕೆ ದರ್ಶನ್ ಅವರು, ನಿಜನಾ? ಸುಳ್ಳಾ? ಅನ್ನೋದು ನಮಗೆ ಗೊತ್ತಿಲ್ಲ. ಹೀಗಾಗಿ ನಾವು ಸದ್ಯ ಮಾತನಾಡೋದು ಬೇಡ ಅಂದರು.

ಅದರಂತೆ ನಾವು ಜೂನ್ 17 ರಂದು ದೂರು ಮನವಿ ನೀಡಿ ಬಂದೆ. ಹರ್ಷ ಅವರು ಕೂಡ ಮೈಸೂರಿನಲ್ಲಿ ದೂರು ದಾಖಲು ಮಾಡಿದ್ದಾರೆ. ಇದರಲ್ಲಿ ನನ್ನ ಹೆಸರು ಕೇಳಿಬಂದಿದೆ. ಆದರೆ ನನಗೆ ಇದರಿಂದ ಯಾವುದೇ ಲಾಭವಿಲ್ಲ. ನಾನು ಮತ್ತು ದರ್ಶನ್ ಸರ್ ಶ್ಯೂರಿಟಿ ಹಾಕುತ್ತಿದ್ದೇವೆ ಅನ್ನೋದಕ್ಕೆ ನಾವಿಲ್ಲಿ ತಲೆ ಹಾಕಿದ್ದೇವೆ. ಇದರಿಂದ ನನಗೆ ಏನ್ ಪ್ರಯೋಜನ ಇಲ್ಲ. ನಾನು ನನ್ನ ಇಮೇಜ್ ಬಿಲ್ಡ್​ ಮಾಡಿಕೊಂಡಿದ್ದೇನೆ ಎಂದರು. ಅರುಣಾ ಕುಮಾರಿ ಹೇಳಿರುವ ಹರ್ಷಾ ಅವರು ನನಗೆ ಕಳೆದ ಎರಡು ವರ್ಷಗಳಿಂದ ಪರಿಚಯ. ನನಗೆ ಯಾರ ಮೇಲೂ ಅನುಮಾನ ಇಲ್ಲ ಅಂತಾ ಇದೇ ವೇಳೆ ತಿಳಿಸಿದರು.

The post ದರ್ಶನ್ & ಉಮಾಪತಿಯನ್ನ ಆರೋಪಿ ಅರುಣಾ ಕುಮಾರಿ ಸಂಪರ್ಕಿಸಿದ್ದು ಹೇಗೆ..? appeared first on News First Kannada.

Source: newsfirstlive.com

Source link