ದರ್ಶನ್ ಹೆಸರಲ್ಲಿ ಶ್ಯೂರಿಟಿ ದೋಖಾ ಆರೋಪ; ದಾಸ ಹೇಳ್ತಿರೋದೇನು? #liveupdate

ದರ್ಶನ್ ಹೆಸರಲ್ಲಿ ಶ್ಯೂರಿಟಿ ದೋಖಾ ಆರೋಪ; ದಾಸ ಹೇಳ್ತಿರೋದೇನು? #liveupdate

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ ಶ್ಯೂರಿಟಿ ವಂಚನೆ ಆರೋಪ ಕೇಳಿಬಂದಿದೆ. ಈ ಸಂಬಂಧ ಮೈಸೂರಲ್ಲಿ ದರ್ಶನ್ ಅವರು ಸುದ್ದಿಗೋಷ್ಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಿದ್ದಾರೆ. ಅದರ ಡೀಟೇಲ್ಸ್​ ಇಲ್ಲಿದೆ.

ದರ್ಶನ್ ಸುದ್ದಿಗೋಷ್ಠಿಯ ಪ್ರಮುಖಾಂಶಗಳು

  • ಜೂನ್ 6 ರಂದು ಒಂದು ಕಾಲ್​ ಮಾಡಿದ್ರು, ಶ್ರೀನಿವಾಸ್​ ಅವರು ಕರೆ ಮಾಡಿ ಅರುಣಾ ಕುಮಾರಿ ಅವರು ಫೋನ್​ ಕಾಲ್​ ಮಾಡಿ ಕನ್ಫರೆನ್ಸ್​ ಹಾಕಿ ಮಾತನಾಡಿದ್ದರು
  • ಆಗ ಮಹಿಳೆ ನನ್ನ ಸ್ನೇಹಿತರು 25 ಕೋಟಿ ರೂಪಾಯಿಗೆ ಶ್ಯೂರಿಟಿ ಹಾಕಿ ಅರ್ಜಿ ಹಾಕಿದ್ದಾರೆ ಎಂದು ಹೇಳಿದರು
  • ಹರ್ಷ ಜಾಗ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದರು. ಬೆಂಗಳೂರಿನಲ್ಲಿ ಜೂನ್ 16 ನಿರ್ಮಾಪಕರು ಮಹಿಳೆಯನ್ನು ಕರೆದುಕೊಂಡು ಹರ್ಷ ಮೇಲಂಟಾ, ವಿನಯ್, ಸುಧಾಖರ್ ಪೂಜಾರಿ, ಅನ್ಸಿಲ್​​ ಅಂತಾ ಹೆಸರು ಹೇಳಿದ್ದರು
  • ನಿಮ್ಮ ತೋಟ ನೋಡಬೇಕು ಅಂತಾ ಬಂದರು. ನನ್ನ ತೋಟ ಹೆಂಡತಿ ಹೆಸರಲ್ಲಿದೆ. ನಿಮಗೆ ಶ್ಯೂರಿಟಿ ಬೇಕು ಅಂದ್ರೆ ನಿಮಗೆ ತೋಟ ಯಾಕೆ ಅಂತಾ ಕೇಳಿದೆ, ಅದಕ್ಕೆ ಇಲ್ಲ ನೋಡಬೇಕು ಅಂತಾ ಅರುಣಾಕುಮಾರಿ ಹೇಳಿದರು

ದರ್ಶನ್ ಆಪ್ತ ರಾಕೇಶ್ ಪಾಪಣ್ಣ ಹೇಳಿಕೆ 

  • ಅರುಣಾ ಕುಮಾರಿ ಸೇರಿ ಇಬ್ಬರು ತೋಟಕ್ಕೆ ಬಂದರು, ಬಂದು ತೋಟ ನೋಡಲು ಶುರು ಮಾಡಿದರು
  • ಇದೇ ವೇಳೆ ಹರ್ಷಾ ಅವರು ಬಂದಿರೋದನ್ನ ನೋಡಿ, ಅರುಣಾ ಕುಮಾರಿ ಶಾಕ್ ಆದರು

The post ದರ್ಶನ್ ಹೆಸರಲ್ಲಿ ಶ್ಯೂರಿಟಿ ದೋಖಾ ಆರೋಪ; ದಾಸ ಹೇಳ್ತಿರೋದೇನು? #liveupdate appeared first on News First Kannada.

Source: newsfirstlive.com

Source link