ಮಹಿಳೆ ಬಗ್ಗೆ ಶಾಕಿಂಗ್ ಸತ್ಯ ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮಹಿಳೆ ಬಗ್ಗೆ ಶಾಕಿಂಗ್ ಸತ್ಯ ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮೈಸೂರು: 25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಸುದ್ದಿಗೋಷ್ಠಿ ನಡೆಸಿ ಕಳೆದ ಎರಡು ತಿಂಗಳಿನಿಂದ ನಡೆದಿದ್ದೇನು ಎಂಬುವುದನ್ನು ರಿಲೀವ್​ ಮಾಡಿದ್ದು, ಆರೋಪಿ ಮಹಿಳೆಯೇ ಪ್ರಕರಣದ ಸತ್ಯಾಂಶ ಏನು ಎಂಬುವುದನ್ನು ಬಾಯ್ಬಿಡಬೇಕು ಎಂದು ಹೇಳಿದ್ದಾರೆ.

ಜೂನ್ 6 ರಂದು ಒಂದು ಕಾಲ್​ ಮಾಡಿದ್ರು, ಉಮಾಪತಿ ಶ್ರೀನಿವಾಸ್​ ಅವರು ಕರೆ ಮಾಡಿ ಅರುಣಾ ಕುಮಾರಿ ಅವರೊಂದಿಗೆ ಕಾನ್ಫರೆನ್ಸ್​ ಹಾಕಿ ಮಾತನಾಡಿಸಿದ್ದರು. ಆಗ ಮಹಿಳೆ ನನ್ನ ಸ್ನೇಹಿತರು 25 ಕೋಟಿ ರೂಪಾಯಿಗೆ ಶ್ಯೂರಿಟಿ ಹಾಕಿ ಅರ್ಜಿ ಹಾಕಿದ್ದಾರೆ ಎಂದು ಹೇಳಿದರು. ಆಗ ಹರ್ಷ ಜಾಗ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದರು ಎಂಬುವುದು ನೆನಪಾಯಿತು. ಬೆಂಗಳೂರಿನಲ್ಲಿ ಜೂನ್ 16 ನಿರ್ಮಾಪಕರು ಮಹಿಳೆಯನ್ನು ಕರೆದುಕೊಂಡು ಹರ್ಷ, ವಿನಯ್, ಸುಧಾಕರ್ ಪೂಜಾರಿ, ಅನ್ಸಿಲ್ ಅವರು ಅರ್ಜಿ ಹಾಕಿದ್ದಾರೆ ಅಂತಾ ಹೆಸರು ಹೇಳಿದ್ದರು.

blank

ಅರುಣಾ ಕುಮಾರಿ ಹತ್ರ ಇರೋದು ಆಧಾರ್ ಕಾರ್ಡ್​ ಮಾತ್ರ….

ಆದರೆ ಆಗ ಆಧಾರ್ ಕಾರ್ಡ್​ ದಾಖಲೆ ಮಾತ್ರ ನೀಡಿದ್ದರು. ಆಗ ನಾನೇ ಅವರನ್ನು ಫೋನ್​​ನಲ್ಲೇ ಕರೆ ಮಾಡಿ ಮಾಹಿತಿ ಪಡೆದುಕೊಂಡೆ. ಆದರೆ ಯಾರು ಲೋನ್​​ಗೆ ಅರ್ಜಿ ಹಾಕಿರಲಿಲ್ಲ. ಶರ್ಮಾ ಬ್ಯಾಂಕ್​​ನಲ್ಲೇ ಕೆಲಸ ಮಾಡುತ್ತಿದ್ದಾರೆ. ನಾನು ಎರಡು ವರ್ಷಗಳ ಹಿಂದೆ ಜಮೀನು ಖರೀದಿ ಮಾಡಲು ಬ್ಯಾಂಕ್​ ದಾಖಲೆ ನೀಡಿದ್ದೆ. ಅಲ್ಲಿಂದ ನೋಟಿಸ್ ಬಂದಿರಬಹುದು ಎಂದು ಅಲ್ಲಿಯೂ ವಿಚಾರಿಸಿದೆ. ಎಲ್ಲೂ ನಮ್ಮಿಂದ ಲೋನ್​ ಹಾಕಿಲ್ಲ ಎಂಬುವುದು ಖಚಿತವಾಗಿತ್ತು.

ತೋಟದ ಮನೆಗೆ ಬಂದು ರಾಕೇಶ್​ರನ್ನು ನೋಡಿ ಶಾಕ್ ಆಗಿದ್ರು 

ಆಗ ಅವರು ನನ್ನ ತೋಟದ ಮನೆ ನೋಡಬೇಕು ಎಂದರು. ನಾನು ಆಗ ಅರುಣಾ ಕುಮಾರಿ ಅವರನ್ನು ಇನ್ನಿಬ್ಬರು ಹುಡುಗರಿಗೆ ತೋಟಕ್ಕೆ ಕಳುಹಿಸಿಕೊಟ್ಟಿದೆ. ಆಗ ರಾಕೇಶ್​, ಹರ್ಷ ಕೂಡ ತೋಟಕ್ಕೆ ಬಂದರು. ಆಗ ಇಬ್ಬರನ್ನು ನೋಡಿ ಮಹಿಳೆ ಶಾಕ್​ ಆಗಿ ಯಾರಿಗೋ ಕಾಲ್​ ಮಾಡಿ ಮಾತನಾಡಿದ್ದರು. ಆಗಲೂ ಇವರು ಬ್ಯಾಂಕ್​ಗೆ ಬಂದು ಅರ್ಜಿ ಸಲ್ಲಿಕೆ ಮಾಡಿದ್ದರೂ ಎಂದು ಹೇಳಿದವರು ಆಗ ಇವರಲ್ಲ ಎಂದರು. ಆದರೆ ರಾಕೇಶ್​ ಅವರನ್ನು ಮಾತ್ರ ಗುರುತು ಹಿಡಿದರು. ಆಗ ವಿಚಾರಿಸಿದಕ್ಕೆ 45 ಲಕ್ಷ ರೂಪಾಯಿ ಲಂಚ ಕೊಡುತ್ತೇನೆ ಎಂದು ಆಮಿಷ ಹೇಳಿದ್ದರು ಎಂದು ಆರೋಪ ಮಾಡಿದ್ದರು. ಆ ಬಳಿಕ ಅಲ್ಲಿಂದ ತೆರಳಿದ್ದರು. ಆ ವೇಳೆ ಐಡಿ ಕೇಳಿದರೆ ಮನೆಯಲ್ಲೇ ಇದೆ ಎಂದು ಹೇಳಿದ್ದರು.

ಅರುಣಾ ಶರ್ಮಾ ಪಿಯುಸಿ ಕೂಡ ಪಾಸ್ ಮಾಡಿಲ್ಲ….

ಆಗ ಶರ್ಮಾ ಕೆಲಸ ಮಾಡುವ ಯೂನಿಯನ್​ನಲ್ಲಿ ಕುಮಾರ್ ಹೆಸರು ಎಂಬವರು ಇದ್ದಾರೆ. ಅವರ ಪತ್ನಿ ಎಂಬುವುದು ಸ್ಪಷ್ಟವಾಗಿದೆ. ಅವರೇ ಹೇಳುವ ಪ್ರಕಾರ ಇಬ್ಬರು 9 ವರ್ಷಗಳಿಂದ ದೂರ ಇದ್ದಾರೆ. ಅರುಣಾ ಕುಮಾರಿ ಪಿಯುಸಿ ಪಾಸ್ ಮಾಡಿಯೇ ಇಲ್ಲ ಎಂಬುವುದು ಸ್ಪಷ್ಟವಾಗಿತ್ತು.

blank

ಇದೆಲ್ಲಾ ಆದ ಮೇಲೆ ಬ್ಯಾಂಕ್​ಗೆ ಹೋಗಿ ಕೇಳಿದರೆ ಅಂತಹ ಸಿಬ್ಬಂದಿಯೇ ಇಲ್ಲ ಎಂದು ಹೇಳಿದ್ದರು. ಆದಾದ ಮೇಲೆ ನಿರ್ಮಾಪಕರನ್ನು ಕರೆದು ಆಫೀಸ್​ನಲ್ಲಿ ಮಾತನಾಡಿದ್ದೇವು. ಆಗ ಇನ್ಸ್​ ಪೆಕ್ಟರ್​ ಅವರೊಂದಿಗೆ ಮಾತುಕತೆ ನಡೆಸಿ, ಬೆಂಗಳೂರು, ಮೈಸೂರಿನಲ್ಲಿ ದೂರು ನೀಡಲು ನಿರ್ಧರಿಸಿದ್ದೇವು. ಅದರಂತೆ ದೂರು ನೀಡಿದ್ದೇವು. ಏಕೆಂದರೆ ಅವರು ನಿರ್ಮಾಪಕರು, ಇವರು ನನ್ನ ಸ್ನೇಹಿತರು ಅವರಿಗೂ ಇವರಿಗೂ ಯಾವುದೇ ಸಂಬಂಧ ಇರಲಿಲ್ಲ.

 

The post ಮಹಿಳೆ ಬಗ್ಗೆ ಶಾಕಿಂಗ್ ಸತ್ಯ ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ appeared first on News First Kannada.

Source: newsfirstlive.com

Source link