ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್​​ ನಿವಾಸದ ಮೇಲೆ ಕಲ್ಲೆಸೆದ ಕಿಡಿಗೇಡಿಗಳು

ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್​​ ನಿವಾಸದ ಮೇಲೆ ಕಲ್ಲೆಸೆದ ಕಿಡಿಗೇಡಿಗಳು

ಬೆಂಗಳೂರು: ರಾಜ್ಯದಲ್ಲಿ ಮಾಜಿ ಸಿಎಂ ಹೆಚ್​​​.ಡಿ ಕುಮಾರಸ್ವಾಮಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ನಡುವಿನ ಮಾತಿನ ಸಮರ ಸದ್ಯ ತಣ್ಣಗಾಗಿದೆ. ಈ ನಡುವೆಯೇ ನಿರ್ಮಾಪಕ ರಾಕ್​​​ಲೈನ್ ವೆಂಕಟೇಶ್​ ನಿವಾಸ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ನಿನ್ನೆ ನಡುರಾತ್ರಿ ಟೂ ವೀಲರ್​​ನಲ್ಲಿ ಬಂದು ಕಲ್ಲು, ಬಾಟೆಲ್​​ಗಳನ್ನು ದುಷ್ಕರ್ಮಿಗಳು ಎಸೆದಿದ್ದು, ರಾತ್ರಿ 2:45ರ ವೇಳೆಯಲ್ಲಿ ದುಷ್ಕೃತ್ಯ ನಡೆದಿದೆ.

blank

ಕೆಆರ್​​ಎಸ್ ಬಿರುಕು ಬಿಟ್ಟಿದೆ ಎಂದು ಸುಮಲತಾ ಅವರು ನೀಡಿದ್ದ ಹೇಳಿಕೆ ಕುರಿತಂತೆ ಕುಮಾರಸ್ವಾಮಿ ಮಾಡಿದ್ದ ಟೀಕೆಯ ಬಳಿಕ ಮಾತಿನ ವಾಗ್ದಾಳಿ ನಡೆದಿತ್ತು. ಈ ನಡುವೆ ನಿರ್ಮಾಪಕರ ರಾಕ್​​ಲೈನ್​ ವೆಂಕಟೇಶ್​ ಅವರು ಕೂಡ ಕುಮಾರಸ್ವಾಮಿ ಟೀಕೆಗಳ ವಿರುದ್ಧ ಅಸಮಾಧಾನ ಹೊರ ಹಾಕಿ, ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು.

ಇತ್ತ ಕುಮಾರಸ್ವಾಮಿ ಅವರ ವಿರುದ್ಧ ರಾಕ್​​ಲೈನ್ ವೆಂಕಟೇಶ್​ ಅವರು ಮಾತನಾಡುತ್ತಿದ್ದಂತೆ ಆಕ್ರೋಶಗೊಂಡ ಜೆಡಿಎಸ್​ ಕಾರ್ಯಕರ್ತರು, ಅವರ ನಿವಾಸ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರನ್ನು ವಶಕ್ಕೆ ಪಡೆದ ಪೊಲೀಸರು, ಮನೆಯ ಬಳಿಕ ಭದ್ರತೆಯ ವ್ಯವಸ್ಥೆಯನ್ನು ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ರಾಕ್​ಲೈನ್ ವೆಂಕಟೇಶ್​ ಅವರು ಕುಮಾರಸ್ವಾಮಿ ಅವರಿಗೆ ನೋವಾಗಿದ್ದರೇ ಕ್ಷಮೆ ಕೇಳುವುದಾಗಿಯೂ ಹೇಳಿದ್ದರು. ಇದಾದ ಜೆಡಿಎಸ್ ವರಿಷ್ಠರು ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದರು. ಇತ್ತ ಸುಮಲತಾ ಅವರು ಕೂಡ ಇಂತಹ ಬೆಳವಣಿಗೆಗಳಿಂದ ಅಂಬಿ ಅಭಿಮಾನಿಗಳಿಗೆ ನೋವುಂಟಾಗಿದೆ ಎಂದು ತಿಳಿಸಿ, ತಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದ್ದರು.

ಸದ್ಯ ಕಲ್ಲು ತೂರಾಟದ ಕುರಿತು ಮಾಹಿತಿ ಪಡೆದಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರೀಶಲನೆ ನಡೆಸಿದ್ದು, ದುಷ್ಕರ್ಮಿಗಳನ್ನು ಬಂಧಿಸುವ ಕಾರ್ಯಕ್ಕೆ ಮುಂದಾಗಿದೆ.

blank

The post ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್​​ ನಿವಾಸದ ಮೇಲೆ ಕಲ್ಲೆಸೆದ ಕಿಡಿಗೇಡಿಗಳು appeared first on News First Kannada.

Source: newsfirstlive.com

Source link