ಗೆಳೆಯನ ಮಾತು ಕೇಳಿ ಕಣ್ಣೀರಿಟ್ಟ ಶಮಂತ್​; ರಘು ಪ್ರಕಾರ ಬಿಗ್​ಬಾಸ್​ ವಿನ್ನರ್ ಯಾರು?

ಗೆಳೆಯನ ಮಾತು ಕೇಳಿ ಕಣ್ಣೀರಿಟ್ಟ ಶಮಂತ್​; ರಘು ಪ್ರಕಾರ ಬಿಗ್​ಬಾಸ್​ ವಿನ್ನರ್ ಯಾರು?

ಬಿಗ್​​ ಬಾಸ್​ ಸೆಕೆಂಡ್​​ ಇನ್ನಿಂಗ್ಸ್​ನಲ್ಲಿ ಲೆಕ್ಕಾಚಾರಗಳೇ ತೆಲೆಕೆಳಗಾಗುತ್ತಿವೆ. ಈ ವಾರ ಅವರು ಹೋಗ್ತಾರೆ ಇವರು ಹೋಗ್ತಾರೆ ಅನ್ನುವಷ್ಟರಲ್ಲಿ ರಘು ಹೊರನಡೆದಿದ್ದಾರೆ.

ಹೌದು.. ಸೋಶಿಯಲ್ ಮಿಡಿಯಾದಲ್ಲಿ ಚಕ್ರವರ್ತಿ ಅವರು ಔಟ್​ ಅಗ್ಬೇಕು ಎನ್ನುವ ಕೂಗು ಜೋರಾಗಿಯೇ ಕೇಳುತಿತ್ತು, ಇತ್ತ ಪ್ರಿಯಾಂಕಾ ತಿಮ್ಮೇಶ್​ ಹೊರ ಬರಲಿದ್ದಾರೆ ಎಂಬ ಒಂದಷ್ಟು ಸುದ್ದಿಗಳಿಗೆ ನಿನ್ನೆಯ ಎಪಿಸೋಡ್​ ಫುಲ್​ ಸ್ಟಾಪ್​ ಇಟ್ಟಿದೆ. ಕಳೆದ ವಾರ ಅತ್ಯುತ್ತಮ ಗಿಟ್ಟಿಸಿಕೊಂಡಿದ್ದ ರಘು ವೈನ್​ಸ್ಟೋರ್​ ಈ ವಾರ ಬಿಗ್​ ಮನೆಯಿಂದ ಔಟ್​ ಆಗಿದ್ದಾರೆ.

blank

91 ದಿಗಳ ಬಿಗ್​​ಬಾಸ್​ ಜರ್ನಿಯನ್ನು ರಘು ಅವರು ಮುಗಿಸಿದ್ದಾರೆ. ಈ ಎಲಿಮಿನೇಷನ್​ ಅನ್ನು ಯಾರು ಊಹಿಸಿರಲಿಲ್ಲ. ಮನೆಯವರಿಗೆ ರಘು ಅವರ ಎಲಿಮಿನೇಷನ್​ ಶಾಕ್​ ನೀಡಿದ್ದು, ಮನೆಯವರೆಲ್ಲ ಕಣ್ಣೀರಿಟ್ಟರು.

ಬಿಗ್​​ಬಾಸ್​ ರಘು ಅವರಿಗೆ ಯಾರನ್ನು ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಉಳಿಸುತ್ತೀರಿ ಎಂದು ಕೇಳಿದ್ದಕ್ಕೆ ರಘು ಅವರು ಶಮಂತ್​ ಅವರ ಹೆಸರು ಹೇಳುತ್ತಾರೆ. ಶಮಂತ್​ ಪ್ರತಿಭಾವಂತ ಅವನು ನಾನು ಒಂದ ರೀತಿಯ ಜರ್ನಿಯಲ್ಲಿದ್ದೇವು. ಅವನು ಇನ್ಮುಂದೆ ಹೋಗಬೇಕು, ಅವನ ಬೆಳವಣಿಗೆ ನೋಡಲು ಇಚ್ಛಿಸುತ್ತೇನೆ ಎನ್ನುತ್ತಾರೆ. ಇದಕ್ಕೆ ಶಮಂತ್​ ಭಾವುಕರಾಗುತ್ತಾರೆ.

blank

ರಘುಗೆ ಎಲ್ಲಿ ಮಿಸ್ಟೇಕ್​ ಆಯ್ತು ಎಂದು ಸುದೀಪ್ ಅವರು ಕೇಳಿದಕ್ಕೆ ನಾನು ಮೊದಲ ಇನ್ನಿಂಗ್ಸ್​ನಲ್ಲಿ ತುಂಬಾ ವೀಕ್​ ಆಗಿ ಪರ್ಫಾರ್ಮೆನ್ಸ್ ಮಾಡಿದೆ. ಜನರಿಗೆ ಕನೆಕ್ಟ್​ ಆಗುವಲ್ಲಿ ಎಡವಿದೆ. ಅದೇ ನಂಗೆ ಹೊಡೆತ ಕೊಟ್ಟಿದ್ದು ಅನ್ಸುತ್ತೆ ಎಂದು ತಮ್ಮ ಮನದಾಳ ಬಿಚ್ಚಿಟ್ಟರು. ತುಂಬಾ ಎಮೋಷನಲ್ ಆಗಬಾರ್ದು. ಆತ್ಮವಿಶ್ವಾಸದಿಂದ ಇದ್ರೆ ಏನ್​ ಬೇಕಾದ್ರೂ ಎದುರಿಸಬಹುದು ಎನ್ನುತ್ತಾರೆ. ಟಾಪ್​ 5 ನಲ್ಲಿ ಮಂಜು, ಅರವಿಂದ್​, ವೈಷ್ಣವಿ ಹಾಗೂ ಪ್ರಶಾಂತ್​, ಶಮಂತ್​ ಇರಬೇಕು. ಟಾಪ್​ 2ನಲ್ಲಿ ಯಾರು ಇರಬೇಕು ಎಂಬ ಪ್ರಶ್ನೆಗೆ ಮಂಜು ಮತ್ತು ವೈಷ್ಣವಿ ಇರಬೇಕು, ಬಟ್​ ವೈಷ್ಣವಿ ವಿನ್​ ಆಗ್ತಾರೆ ಅನ್ಸುತ್ತೆ ಎನ್ನುತ್ತಾರೆ.

The post ಗೆಳೆಯನ ಮಾತು ಕೇಳಿ ಕಣ್ಣೀರಿಟ್ಟ ಶಮಂತ್​; ರಘು ಪ್ರಕಾರ ಬಿಗ್​ಬಾಸ್​ ವಿನ್ನರ್ ಯಾರು? appeared first on News First Kannada.

Source: newsfirstlive.com

Source link