ದಿವ್ಯಾ ಉರುಡುಗಗೆ ಮತ್ತೆ ಏನಾಯ್ತು..? ಗೆಟ್​​ವೆಲ್ ಸೂನ್ ಎಂದ ಫ್ಯಾನ್ಸ್​

ದಿವ್ಯಾ ಉರುಡುಗಗೆ ಮತ್ತೆ ಏನಾಯ್ತು..? ಗೆಟ್​​ವೆಲ್ ಸೂನ್ ಎಂದ ಫ್ಯಾನ್ಸ್​

ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸುದೀಪ್​ ಸದಸ್ಯರಿಗೆ ಬೆಂಡೆತ್ತಿದ್ರೆ, ಸೂಪರ್​ ಸಂಡೇ ವಿಥ್ ಸುದೀಪ್ ಕಾರ್ಯಕ್ರಮದಲ್ಲಿ ಎಲ್ಲರ ಕಾಲ್​ ಎಳೆದು ನಕ್ಕು ನಗಿಸ್ತಾರೆ. ಈಗ ನಗು ಅಳು ಮುಗಿದು ಮತ್ತೆ ಈ ವಾರ ಪ್ರಾರಂಭವಾಗಿದೆ.

ಇವತ್ತೀನ ಪ್ರೋಮೋ ನೋಡಿದ್ರೆ ಆಟದಲ್ಲಿ ಸಾಕಷ್ಟು ಏಳುಬೀಳು ಆದಂತಿದೆ. ಈ ವಾರದ ಕ್ಯಾಪ್ಟನ್​ಶಿಫ್​ ಆಯ್ಕೆಗೆ ಬಿಗ್​ ಬಾಸ್​ ಟಾಸ್ಕ್​ ನೀಡಿದ್ದು, ಎರಡು ತಂಡಗಳ ರಚನೆಯಾಗಿದೆ. ಒಂದು ಅರವಿಂದ್​ ಕೆಪಿ ನೇತೃತ್ವದ ಬ್ಲೂ ತಂಡ ಇನ್ನೊಂದು ಮಂಜು ಪಾವಗಡ ನೇತೃತ್ವದ ಗ್ರೀನ್​ ತಂಡ​. ಅರವಿಂದ್​ ಅವರ ತಂಡದಲ್ಲಿ ಪ್ರಿಯಾಂಕ ತಿಮ್ಮೇಶ್​, ಪ್ರಶಾಂತ್​, ಶುಭಾ ಪೂಂಜಾ, ಹಾಗೂ ಮಂಜು ಅವರ​ ತಂಡದಲ್ಲಿ ಚಕ್ರವರ್ತಿ ಚಂದ್ರಚೂಡ್​, ಶಮಂತ್​, ದಿವ್ಯಾ ಸುರೇಶ್​, ದಿವ್ಯಾ ಉರುಡುಗ ಇದ್ದಾರೆ.

blank

ಟಾಸ್ಕ್​ ಪ್ರಕಾರ ಜಾಕೆಟ್ ಧರಿಸಿರುವ ತಂಡದ ಸದಸ್ಯನಿಗೆ ಎದುರಾಳಿ ತಂಡ ಸ್ಟಾರ್​ ಅಂಟಿಸಬೇಕು. ಈ ಕಾದಾಟದಲ್ಲಿ ಮಂಜು ಅವರ ತಂಡದಲ್ಲಿದ್ದ ದಿವ್ಯಾ ಉರುಡುಗ ಎದುರಾಳಿ ತಂಡದಿಂದ ತಪ್ಪಿಸಿಕೊಳ್ಳಲು ಹೋಗಿ ಗ್ಲಾಸ್​ ವಾಲ್​ಗೆ ಡಿಕ್ಕಿ ಹೊಡೆಯುತ್ತಾರೆ.

ಇದ್ರಿಂದ ಅವರ ತೆಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ರಕ್ತ ಸ್ರಾವವಾಗುತ್ತಿರುವ ದೃಶ್ಯಗಳು ಕಂಡು ಬಂದಿವೆ. ಅವರಿಗೆ ಹೆಚ್ಚು ಪೆಟ್ಟಾದಂತೆ ಕಾಣುತ್ತಿದ್ದು, ಆಟ ಮುಂದುವರೆಸುತ್ತಾರಾ ಎಂಬ ಪ್ರಶ್ನೆಗಳು ಮೂಡುತ್ತಿವೆ. ಯಾಕಂದ್ರೆ ಮೊದಲ ಇನ್ನಿಂಗ್ಸ್​ನಲ್ಲಿ ಕೂಡಾ ಅವರು ಕಾಲಿಗೆ ಪೆಟ್ಟು ಮಾಡಿಕೊಂಡು ಬಿಗ್​ ಮನೆಯಿಂದ ಕೆಲ ದಿನಗಳ ಕಾಲ ಹೊರ ನಡೆದಿದ್ದರು. ಈಗ ಮತ್ತೆ ಅದೇ ರೀತಿಯ ಸಮಸ್ಯೆಯಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ಅವರ ಫ್ಯಾನ್ಸ್​ಗಳಲ್ಲಿ ಆತಂಕ ಮೂಡಿಸಿದೆ.

ಸೋಶಿಯಲ್​ ಮೀಡಿಯಾಗಳಲ್ಲಿ ದಿವ್ಯಾ ಗೆಟ್​ವೆಲ್​ ಸೂನ್​ ಎಂದು ದಿವ್ಯಾ ಪರ ಪ್ರಾರ್ಥನೆ ಮಾಡ್ತಿದ್ದಾರೆ. ಏನೋ ಆಗಿದೆ ಎಂಬುದನ್ನು ನೀವು ಇವತ್ತಿನ ಎಪಿಸೋಡ್​ನಲ್ಲಿ ನೋಡ್ಬಹುದು. ​ಎನಿ ವೇ ದಿವ್ಯಾ ಉರುಡುಗ ಅವರು ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಆಡುವಂತಾಗಲಿ ಎನ್ನುವುದು ನಮ್ಮ ಆಶಯ.

The post ದಿವ್ಯಾ ಉರುಡುಗಗೆ ಮತ್ತೆ ಏನಾಯ್ತು..? ಗೆಟ್​​ವೆಲ್ ಸೂನ್ ಎಂದ ಫ್ಯಾನ್ಸ್​ appeared first on News First Kannada.

Source: newsfirstlive.com

Source link