ಸುಮಲತಾರ ಕಾಲಿಗೆ ಚಪ್ಪಲಿಯನ್ನೂ ಹಾಕಿದ್ದೀನಿ- ರಾಕ್​ಲೈನ್ ವೆಂಕಟೇಶ್

ಸುಮಲತಾರ ಕಾಲಿಗೆ ಚಪ್ಪಲಿಯನ್ನೂ ಹಾಕಿದ್ದೀನಿ- ರಾಕ್​ಲೈನ್ ವೆಂಕಟೇಶ್

ಬೆಂಗಳೂರು: ಸುಮಲತಾರ ಕಾಲಿಗೆ ಚಪ್ಪಲಿಯನ್ನೂ ಹಾಕಿದ್ದೀನಿ.. ಅಂಬರೀಶ್ ಕುಟುಂಬಕ್ಕೋಸ್ಕರ ನಾನು ಏನ್ಬೇಕಾದ್ರೂ‌ ಮಾಡ್ತೀನಿ ಎಂದು ನ್ಯೂಸ್​ಫಸ್ಟ್​ಗೆ ರಾಕ್​ಲೈನ್ ವೆಂಕಟೇಶ್ ಹೇಳಿಕೆ ನೀಡಿದ್ದಾರೆ.

ಸುಮಲತಾರನ್ನ ಒಬ್ಬೊಬ್ರೇ ಎಲ್ಲೂ ಹೋಗೋಕೆ ಬಿಡಲ್ಲ.. ಯಾವಾಗ್ಲೂ ಅವ್ರ ಜೊತೆ ಇರ್ತೀವಿ.. ನಾನು, ಅವ್ರಣ್ಣನ‌ ಮಗ, ದೊಡ್ಡಣ್ಣ, ಈತರ ನಾಲ್ಕೈದು ಜನ ಇದ್ದೇ ಇರ್ತೀವಿ.. ಫ್ಲೈಟ್ ಹತ್ತುವಾಗ ಇಳಿಯುವಾಗ ಸುಮಲತಾರ ಕೈ ಹಿಡ್ಕೊಂಡೆ ಹತ್ತಿಸಿದ್ದೀನಿ.. ಅಷ್ಟೇ ಯಾಕೆ ದೇವಸ್ಥಾನದ ಹತ್ರ ಅವ್ರ ಚಪ್ಲಿ ಬಿಚ್ಚಿ ಹಾಕಿದೀನಿ ಕೂಡ ಎಂದರು.

ಅಂಬರೀಶ್ ಕುಟುಂಬಕ್ಕೆ ನಾನ್ಯಾವಾಗ್ಲೂ ಜೊತೆಯಾಗಿರ್ತೀನಿ.. ನನಗೂ ಮಂಡ್ಯಗೂ ರಾಜಕೀಯವಾಗಿ ಏನೂ ಸಂಬಂಧ ಇಲ್ಲ. ನನಗೂ ‌ಮಂಡ್ಯಗೂ ಏನು ಸಂಬಂಧ ಅಂತಾ ಕೇಳ್ತಾರೆ.. ರಾಜಕೀಯವಾಗಿ ನನಗೂ ಮಂಡ್ಯಕ್ಕೂ ಏನೂ ಸಂಬಂಧ ಇಲ್ಲ. ಮಂಡ್ಯದಿಂದ ಇವ್ನು ಏನೋ ಎತ್ಕೊಂಡ್ ಹೋಗ್ತಾನೆ ಅಂತಾ ಭಯ ಬಿದ್ದಿದ್ದಾರೆ.. ಶುಗರ್ ಫ್ಯಾಕ್ಟರಿ ಕೊಂಡುಕೊಳ್ತಾನೆ ಅಂತಾ ಭಯ ಬಿದ್ದಿದ್ದಾರೆ.. ಆದ್ರೆ ನಾನು ಅದೆಲ್ಲಾ‌ ಮಾಡಲ್ಲ.. ಮಂಡ್ಯಗೆ ಹೊದ್ರೆ ಅಲ್ಲಿಂದ ಒಂದು ಹನಿ ಕೇಕ್ ತಗೊಂಡ್ ಬರ್ತೀನಿ.. ಸಕ್ಕರೆ ಬೆಲ್ಲ ತಗೊಂಡ್ ಬರ್ತೀನಿ ಎಂದಿದ್ದಾರೆ.

The post ಸುಮಲತಾರ ಕಾಲಿಗೆ ಚಪ್ಪಲಿಯನ್ನೂ ಹಾಕಿದ್ದೀನಿ- ರಾಕ್​ಲೈನ್ ವೆಂಕಟೇಶ್ appeared first on News First Kannada.

Source: newsfirstlive.com

Source link