ರಿಲ್ಯಾಕ್ಸ್ ಮೂಡ್​ನಲ್ಲಿ ಎಂ.ಎಸ್​. ಧೋನಿ; ತೋಟದಲ್ಲಿ ರೌಂಡ್ಸ್ ಹಾಕಿದ ತಲೈವಾ

ರಿಲ್ಯಾಕ್ಸ್ ಮೂಡ್​ನಲ್ಲಿ ಎಂ.ಎಸ್​. ಧೋನಿ; ತೋಟದಲ್ಲಿ ರೌಂಡ್ಸ್ ಹಾಕಿದ ತಲೈವಾ

ಕೊರೊನಾದಿಂದ 14ನೇ ಐಪಿಎಲ್​ ರದ್ದಾಗಿರುವ ಹಿನ್ನೆಲೆ ಸಿಎಸ್​ಕೆ ಕ್ಯಾಪ್ಟನ್​ ಎಂ.ಎಸ್​.ಧೋನಿ ಫುಲ್​ ರಿಲ್ಯಾಕ್ಸ್​​ಗೆ ಜಾರಿದ್ದಾರೆ. ರಾಂಚಿಯ ಮನೆಯಲ್ಲಿ ಕುಟುಂಬದೊಂದಿಗೆ ತಂಗಿರುವ ಮಿಸ್ಟರ್​​ ಕೂಲ್,​ ತಮ್ಮ ತೋಟಕ್ಕೆ ಭೇಟಿ ನೀಡಿ ಫುಲ್​​ ರೌಂಡ್ಸ್​​ ಹಾಕಿದ್ದಾರೆ.

ಧೋನಿಯ 43 ಎಕರೆ ಫಾರ್ಮ್​​ಹೌಸ್‌ನಲ್ಲಿ ವಿವಿಧ ತರಕಾರಿ ಹಾಗೂ ಹೂ-ಹಣ್ಣುಗಳನ್ನ ಬೆಳೆದಿದ್ದು, ಕೆಲ ಹಣ್ಣುಗಳ ರುಚಿ ಸವಿದಿದ್ದಾರೆ. ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ 14ನೇ ಆವೃತ್ತಿಯ ಐಪಿಎಲ್ ಅರ್ಧಕ್ಕೆ​ ಸ್ಥಗಿತಗೊಂಡಿದೆ. ಟೂರ್ನಿಯ ಮುಂದುವರಿದ ಭಾಗವನ್ನು ಸೆಪ್ಟೆಂಬರ್​​​ನಲ್ಲಿ ಯುಎಇನಲ್ಲಿ ನಡೆಸೋಕೆ ಬಿಸಿಸಿಐ ಸಿದ್ಧತೆ ನಡೆಸ್ತಿದೆ. ಕಳೆದ ವರ್ಷ ತೀರಾ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್​ ಕಿಂಗ್ಸ್, ಈ ಬಾರಿ ಭರ್ಜರಿ ಕಮ್​​ಬ್ಯಾಕ್​ ಮಾಡಿದೆ.

 

View this post on Instagram

 

A post shared by M S Dhoni (@mahi7781)

The post ರಿಲ್ಯಾಕ್ಸ್ ಮೂಡ್​ನಲ್ಲಿ ಎಂ.ಎಸ್​. ಧೋನಿ; ತೋಟದಲ್ಲಿ ರೌಂಡ್ಸ್ ಹಾಕಿದ ತಲೈವಾ appeared first on News First Kannada.

Source: newsfirstlive.com

Source link