ಹೋರಾಟ ಮಾಡೋದಿದ್ರೆ ಗಂಡಸ್ತನದಿಂದ ಮಾಡೋಣ- ಮನೆ ಮೇಲೆ ಕಲ್ಲೆಸೆದವರಿಗೆ ರಾಕ್​ಲೈನ್ ತಿರುಗೇಟು

ಹೋರಾಟ ಮಾಡೋದಿದ್ರೆ ಗಂಡಸ್ತನದಿಂದ ಮಾಡೋಣ- ಮನೆ ಮೇಲೆ ಕಲ್ಲೆಸೆದವರಿಗೆ ರಾಕ್​ಲೈನ್ ತಿರುಗೇಟು

ಬೆಂಗಳೂರು: ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ರಾಕ್​ಲೈನ್​ ವೆಂಕಟೇಶ್ ಹೇಳಿಕೆ ಕೊಟ್ಟಿದ್ದಾರೆ.

ಇಂತಹ ಟೈಮ್​ನಲ್ಲಿ ನನ್ನ ಎದುರಿಸಬೇಕು ಅಂದ್ಕೊಂಡ್ರೆ ಅದು ಆಗಲ್ಲ, ಯಾರೋ ದುಷ್ಕರ್ಮಿಗಳು ಬಂದು ನಮ್ಮನೆಗೆ ಕಲ್ಲು ಎಸೆದಿದ್ದಾರೆ. ಏನೇ ಆದ್ರೂ ನಾನು ಅಂಬರೀಶ್ ಕುಟುಂಬಕ್ಕೆ ಸಪೋರ್ಟ್ ಮಾಡ್ತೀನಿ. ಈ ರೀತಿ ಗಲಾಟೆಗಳನ್ನ ಮಾಡಿಸಿ ನನ್ನ ಎದುರಿಸ್ತೀನಿ ಅಂದ್ಕೊಂಡ್ರೆ ಅದು ಆಗಲ್ಲ. ಅಂಬರೀಶ್ ಕುಟುಂಬದ ಹಿಂದೆ ನಾನು ಯಾವಾಗ್ಲೂ‌ ಇರ್ತೇನೆ. ಅಂಬರೀಶ್ ಕುಟುಂಬಕ್ಕಾಗಿ ನಾನು ಎಲ್ಲಾ ತ್ಯಾಗ ಮಾಡೋಕೂ ಸಿದ್ಧ ಅಂತ ಹೇಳಿದ್ದಾರೆ.

ಅವ್ರ ಫ್ಯಾಮಿಲಿಗಾಗಿ ನನ್ನ ಪ್ರಾಣ ಕೊಡೋಕೂ ಸಿದ್ದ, ಹಾಗಂತ ನಾನು ಹೆದ್ರುಕೊಂಡು ಹಿಂಜರಿಯಲ್ಲ, ನನಗೆ ಅಂಬರೀಶ್ ಕುಟುಂಬದ ಜೊತೆ ಒಳ್ಳೆ ಸ್ನೇಹ ಇದೆ. ನಾನ್ಯಾವತ್ತೂ ಹಿಂಜರಿಯಲ್ಲ, ಇಲ್ಲೀಗಲ್ ಮೈನಿಂಗ್ ವಿಷ್ಯಕ್ಕೆ ಸುಮಲತಾ ಅವ್ರು ಧ್ವನಿ ಎತ್ತಿದ್ದಾರೆ. ರಾಜಕೀಯವಾಗಿ ನಾನು ಮಾತನಾಡೋಕೆ ಹೋಗಲ್ಲ, ಹೋರಾಟ ಮಾಡೋಹಾಗಿದ್ರೆ ಗಂಡಸ್ತನದಿಂದ ಹೋರಾಡೋಣ ಅಂತ  ರಾಕ್​ಲೈನ್ ವೆಂಕಟೇಶ್ ಹೇಳಿದ್ದಾರೆ.

The post ಹೋರಾಟ ಮಾಡೋದಿದ್ರೆ ಗಂಡಸ್ತನದಿಂದ ಮಾಡೋಣ- ಮನೆ ಮೇಲೆ ಕಲ್ಲೆಸೆದವರಿಗೆ ರಾಕ್​ಲೈನ್ ತಿರುಗೇಟು appeared first on News First Kannada.

Source: newsfirstlive.com

Source link