ಚಿಕಿತ್ಸೆ ಫಲಕಾರಿಯಾಗದೇ ಯೋಧ ಸಾವು – ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ

ಕೋಲಾರ: ಅನಾರೊಗ್ಯ ಪೀಡಿತ ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಹುಲ್ಕೂರು ಗ್ರಾಮದ 52 ವರ್ಷದ ಪ್ರಕಾಶ್ ಹೆಚ್.ಆರ್. ಮೃತ ಯೋಧ.

ಯೋಧ ಪ್ರಕಾಶ್ ಮೂರು ದಿನಗಳಿಂದ ಉಸಿರಾಟದ ತೊಂದರೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಜಯದೇಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದ 28 ವರ್ಷಗಳಿಂದ ಸಿ.ಆರ್.ಪಿ.ಎಪ್ ನಲ್ಲಿ ಕೆಲಸ ಮಾಡುತಿದ್ದ ಪ್ರಕಾಶ್ ಅವರು ಜಮ್ಮುಕಾಶ್ಮೀರ, ನಗಾತ್, ಅರುಣಾಚಲ ಪ್ರದೇಶ ಇನ್ನಿತರ ಸ್ಥಳಗಳಲ್ಲಿ ದೇಶ ಸೇವೆ ಸಲ್ಲಿಸಿದ್ದರು. ಯಲಹಂಕ ಸಿಆರ್.ಪಿ.ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇನ್ನೂ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನ ಸ್ವಗ್ರಾಮವಾದ ಹುಲ್ಕೂರು ಗ್ರಾಮದಲ್ಲಿ ನಡೆಸಲಾಗಿದೆ. ಯೋಧನ ಸಾವಿಗೆ ಕೋಲಾರ ಜಿಲ್ಲೆಯ ಜನ ಕಂಬನಿ ಮಿಡಿದಿದ್ದು, ಕೆಜಿಎಫ್ ಪೊಲಿಸರು ಗೌರವ ವಂದನೆ ಸಲ್ಲಿಸಿದರು.

The post ಚಿಕಿತ್ಸೆ ಫಲಕಾರಿಯಾಗದೇ ಯೋಧ ಸಾವು – ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ appeared first on Public TV.

Source: publictv.in

Source link