’ಸುಮಲತಾ ರೈಟೋ, ಜೆಡಿಎಸ್ ರೈಟೋ ಗೊತ್ತಿಲ್ಲ.. ನ್ಯಾಯ ಇರೋ ಕಡೆ ನಮ್ಮ ಬೆಂಬಲ’- ಸಿದ್ದರಾಮಯ್ಯ

’ಸುಮಲತಾ ರೈಟೋ, ಜೆಡಿಎಸ್ ರೈಟೋ ಗೊತ್ತಿಲ್ಲ.. ನ್ಯಾಯ ಇರೋ ಕಡೆ ನಮ್ಮ ಬೆಂಬಲ’- ಸಿದ್ದರಾಮಯ್ಯ

ಬಾಗಲಕೋಟೆ: ಮಂಡ್ಯಕ್ಕೆ ಭೇಟಿ ನೀಡುವಂತೆ ಸುಮಲತಾ ಆಹ್ವಾನಿಸಿರುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಬದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಒಂದು ಸಾರಿ ಬರ್ತೀನಮ್ಮ ಅಂತಾ ಹೇಳಿದ್ದೀನಿ, ಯಾವಾಗ ಅಂತಾ ತೀರ್ಮಾನ ಮಾಡಿಲ್ಲ. ಟಾಕ್ ವಾರ್ ನಿಲ್ಲುತ್ತಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಟ್ಟಿದ್ದು.. ಅದು ನನಗೆ ಸಂಬಂಧಾನಾ? ನನಗೆ ಸಂಬಂಧ ಏನಯ್ಯ ಅಂತಾ ಪ್ರಶ್ನಿಸಿದ್ದಾರೆ. ಅಕ್ರಮವಾಗಿ ಮೈನಿಂಗ್ ನಡೆಯುತ್ತಿದ್ರೆ, ಅದನ್ನ ನಿಲ್ಲಿಸುವಂತಹ ಜವಾಬ್ದಾರಿ ಸರ್ಕಾರದ್ದು ಕ್ರಮ ತೆಗೆದುಕೊಳ್ಳುವಂತಹದ್ದು ಸರ್ಕಾರದ್ದು. ಸುಮಲತಾ ಅವ್ರು ಲೋಕಸಭಾ ಸದಸ್ಯರು, ಅವ್ರು ಕಂಪ್ಲೆಂಟ್ ಮಾಡ್ತಿದಾರೆ. ಸರ್ಕಾರ ಅದನ್ನ ಗಂಭೀರವಾಗಿ ಪರಿಗಣಿಸಬೇಕು. ಅಲ್ಲಿ ಅಕ್ರಮ ಮೈನಿಂಗ್, ಕ್ರಷರ್‌ ನಡೀತಿದ್ದಾವಾ? ನಡೆಯುತ್ತಿದ್ರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಲ್ವ? ಅಂತ ಕೇಳಿದ್ದಾರೆ.

ಸುಮಲತಾಗೆ ನಿಮ್ಮ ಬೆಂಬಲ ಇದೆಯಾ ಎನ್ನುವ ಪ್ರಶ್ನೆಯಿದೆ. ನನಗೆ ಸುಮಲತಾ ರೈಟೋ, ಜೆಡಿಎಸ್ ನವ್ರು ರೈಟೋ ಏನೂ ಗೊತ್ತಿಲ್ಲ. ನ್ಯಾಯ ಇರೋ ಕಡೆ ನಮ್ಮ ಬೆಂಬಲ ಅಂತ ಹೇಳಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತು ಮುಗಿಸಿದ್ದಾರೆ.

The post ’ಸುಮಲತಾ ರೈಟೋ, ಜೆಡಿಎಸ್ ರೈಟೋ ಗೊತ್ತಿಲ್ಲ.. ನ್ಯಾಯ ಇರೋ ಕಡೆ ನಮ್ಮ ಬೆಂಬಲ’- ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link