ದರ್ಶನ್ ಮತ್ತು ನಾನು ಗಂಡ ಹೆಂಡತಿಯಲ್ಲ..- ನಿರ್ಮಾಪಕ ಉಮಾಪತಿ

ದರ್ಶನ್ ಮತ್ತು ನಾನು ಗಂಡ ಹೆಂಡತಿಯಲ್ಲ..- ನಿರ್ಮಾಪಕ ಉಮಾಪತಿ

ದರ್ಶನ್ ಅವರ ಹೆಸರಿನಲ್ಲಿ ವಂಚನೆ ಪ್ರಯತ್ನ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಉಮಾಪತಿ ಕಂಪ್ಲೀಟ್ ಮಾಹಿತಿ ನೀಡಿದ್ದಾರೆ.

ನಾನು ತುಂಬಾ ಹೇಳಿದ್ರೆ ಪೊಲೀಸರ ತನಿಖೆ ದಿಕ್ಕು ತಪ್ಪಿಸಿದಂತಾಗುತ್ತೆ. ಕಳೆದ ತಿಂಗಳು ಮನವಿ ಪತ್ರ ನೀಡಿದ್ದೆ.. ಪೊಲೀಸರು ಕರೆಸಿ ಇಲ್ಲಿ ಗೊಂದಲವಾಗ್ತಿದೆ ಎಂದಿದ್ದರು. ಎಫ್​ಐಆರ್ ಮಾಡಿದ್ರೆ ವಾಸಿ ಎಂದು ಮೈಸೂರಿನಲ್ಲಿ ಕಂಪ್ಲೆಂಟ್ ದಾಖಲಿಸಿದ್ದಾರೆ.

ದರ್ಶನ್ ನನಗೆ ಕಿವಿಯಲ್ಲಿ ತನಿಖೆಯಾಗೋವರ್ಗೂ ಏನೂ ಹೇಳೋಕೆ ಹೋಗಬೇಡಿ ಎಂದರು

ಅವತ್ತು ದರ್ಶನ್ ನನಗೆ ಕಿವಿಯಲ್ಲಿ ತನಿಖೆಯಾಗೋವರ್ಗೂ ಏನೂ ಹೇಳೋಕೆ ಹೋಗಬೇಡಿ ಎಂದರು. ದರ್ಶನ್ ನಾನು ಗಂಡ ಹೆಂಡತಿಯಲ್ಲ.. ನಮಗೂ ಅವರಿಗೂ ಬೇರೆ ಬೇರೆ ಕೆಲಸಗಳಿವೆ.. ಕಳಂಕ ಅಂತ ಬಂದ ಮೇಲೆ ಎಲ್ಲರಿಗೂ ಒಂದೇ.. 25 ಕೋಟಿ ದೊಡ್ಡ ಅಮೌಂಟಾ ಚಿಕ್ಕ ಅಮೌಂಟಾ ಅದು ನನಗೆ ಬಿಟ್ಟಿದ್ದು.. ಎಲ್ಲ ಸಿನಿಮಾಗಳಿಗೂ ದರ್ಶನ್ ನನಗೆ ಬೆನ್ನು ತಟ್ಟಿದ್ದಾರೆ. ಸಿನಿಮಾ ನನಗೆ ಬ್ಯುಸಿನೆಸ್ ಅಷ್ಟೇ.. ಜೀವನವಲ್ಲ.. ದರ್ಶನ್ ಅವರನ್ನ ದೂರ ಮಾಡುವ ಚೀಪ್ ಕ್ಯಾರಕ್ಟರ್ ನನ್ನದಲ್ಲ. ಆರೋಪ ಸಾಬೀತಾದ ಮೇಲೆ ಎಲ್ಲ ಗೊತ್ತಾಗುತ್ತೆ.

ಇದರಲ್ಲಿ ಹರ್ಷ ಹೆಸರು ಕೇಳಿಬಂತು

ಮಾರ್ಚ್ 31ರಂದು ನನಗೆ ಪ್ರಾಪರ್ಟಿ ತಗೊಂಡ್ರೆ ರಿಯಾಯಿತಿ ಸಿಗ್ತಿತ್ತು.. ಆಗ ಒಂದಷ್ಟು ಪ್ರಾಪರ್ಟಿ ವಿಚಾರ ನಡೀತಿತ್ತು. ಈ ಸಮಯದಲ್ಲಿ ಅರುಣಾಕುಮಾರಿ ನಂಗೆ ಫೋನ್ ಮಾಡಿ ಹೀಗಿದೆ ಎಂದರು. ಅಣ್ಣನಿಗೆ ಫೋನ್ ಮಾಡಿ ವಿಚಾರ ಹೇಳಿದಾಗ ಓಕೆ ಅಂದ್ರು. ಇದೆಲ್ಲ ಆದ್ಮೇಲೆ ಮೇ ತಿಂಗಳಲ್ಲಿ ನೀವು ದರ್ಶನ್ ಏನಾದ್ರೂ ಲೋನ್ ಅಪ್ಲೈ ಮಾಡಿದ್ದೀರಾ ಎಂದರು. ದರ್ಶನ್ ಅವರು ನನಗೆ ಗೊತ್ತಿಲ್ಲ ಎಂದರು.. ಇದರಲ್ಲಿ ಹರ್ಷ ಅವರ ಹೆಸರು ಕೇಳಿಬಂತು.. ಇದೆಲ್ಲಾ ತನಿಖೆ ಆದ್ಮೇಲೆ ಗೊತ್ತಾಗುತ್ತೆ. ದರ್ಶನ್ ಅರುಣಾ ಕುಮಾರಿ ಮತ್ತು ನಾನು ಕಾನ್ಫರೆನ್ಸ್ ಕಾಲ್​ನಲ್ಲಿ ಮಾತಾಡಿದ್ವಿ ಎಂದಿದ್ದಾರೆ.

The post ದರ್ಶನ್ ಮತ್ತು ನಾನು ಗಂಡ ಹೆಂಡತಿಯಲ್ಲ..- ನಿರ್ಮಾಪಕ ಉಮಾಪತಿ appeared first on News First Kannada.

Source: newsfirstlive.com

Source link