ತನಿಖೆ ನಂತರವೇ ಸತ್ಯಾಂಶ ಹೊರಬೀಳುತ್ತೆ.. 2-3 ದಿನದಲ್ಲಿ ಕ್ಲಾರಿಟಿ ಸಿಗಬಹುದು- ಉಮಾಪತಿ

ತನಿಖೆ ನಂತರವೇ ಸತ್ಯಾಂಶ ಹೊರಬೀಳುತ್ತೆ.. 2-3 ದಿನದಲ್ಲಿ ಕ್ಲಾರಿಟಿ ಸಿಗಬಹುದು- ಉಮಾಪತಿ

ನಾನು ಕಂಪ್ಲೆಂಟ್ ಕೊಟ್ಟಿರೋದು ಜಯನಗರದಲ್ಲಿ.. ಪೊಲೀಸರು ಅವರನ್ನ ಕರೆದು ವಿಚಾರಣೆ ಮಾಡ್ತಾರೆ.. ನಾನಂತೂ ಕಾನೂನು ಹೋರಾಟ ಮುಂದುವರೆಸ್ತೇನೆ.. ಇಲ್ಲಿ ದರ್ಶನ್ ಅವರೂ ಯಾರನ್ನೂ ಬ್ಲೇಮ್ ಮಾಡಿಲ್ಲ.. ನನಗೆ ಅನುಮಾನ ಇರೋದರಿಂದಲೇ ದೂರು ನೀಡಿದ್ದೇನೆ. ದರ್ಶನ್ ಸರ್ ​ಗೋಸ್ಕರ ನಾನು ವಿಷಯ ತಿಳಿಸಿದ್ದೇನೆ.

ನನಗೆ ಅರುಣ್​ ಕುಮಾರಿ ಕಾಂಟ್ಯಾಕ್ಟ್ ಮಾಡಿ ಪ್ರಾಪರ್ಟಿ ಇದೆ ತಗೊಳ್ತೀರ ಎಂದು ಕೇಳಿದ್ರು.. ಇದಾದ ಮೇಲೆ ಯಾವುದಾದರೂ ಲೋನ್​ಗೆ ಶ್ಯೂರಿಟಿ ಹಾಕಿದ್ದೀರ ಎಂದು ಕೇಳಿದ್ರು.. ಇಲ್ಲ ಎಂದೆ. ಇದೆಲ್ಲ ಆದ ಮೇಲೆ ನಾವೆಲ್ಲಾ ಕೂತು ಡಿಸ್ಕಸ್ ಮಾಡಿ ಜಯನಗರ ಪೊಲೀಸ್ ಸ್ಟೇಷನ್​ಗೆ ಕಂಪ್ಲೆಂಟ್ ಕೊಟ್ಟೆ. ಆಮೇಲೆ ಮೈಸೂರಲ್ಲೂ ಅವರು ಕಂಪ್ಲೇಂಟ್ ಕೊಟ್ಟಿದ್ದಾರೆ. ಅಲ್ಲಿ ಇನ್ವೆಸ್ಟಿಗೇಷನ್ ನಡೆಯುತ್ತಿದ್ದುದರಿಂದ ಇಲ್ಲಿ ಎಫ್​ಐಆರ್ ಮಾಡೋಕೆ ಬರಲ್ಲ.. ಇನ್ವೆಸ್ಟಿಗೇಷನ್ ವೇಳೆ ಇವರ ಹಸ್ಬೆಂಡ್ ಕೂಡ ಅಲ್ಲೇ ಕೆಲಸ ಮಾಡೋದು ಅನ್ನೋದು ಗೊತ್ತಾಗಿದೆ. ಹೀಗೆ ಒಂದೊಂದೇ ಟರ್ನ್ ತೆಗೆದುಕೊಂಡಿದೆ.

ಜಯನಗರದಲ್ಲಿ ಹರ್ಷ ಅವರು ಲೋನ್​ಗೆ ಅಪ್ಲೈ ಮಾಡಿದ್ರು ಅಂತ ಸ್ಟೇಟ್​​ಮೆಂಟ್ ಕೊಟ್ಟಿದ್ದಾರೆ. ಮೈಸೂರಲ್ಲಿ ಉಮಾಪತಿಯವರು ಮಾಡಿದ್ರು ಅಂತ ಕೊಡ್ತಾರೆ. ಇದೆಲ್ಲ ಕನ್​ಕ್ಲೂಷನ್ ಆಗ್ಬೇಕು.. ಪೊಲೀಸ್ ಇನ್ವೆಸ್ಟಿಗೇಷನ್ ನಂತರ ಕ್ಲಾರಿಟಿ ಸಿಗಲಿದೆ.. ಕೆಲವೇ ದಿನಗಳಲ್ಲಿ ಕ್ಲಾರಿಟಿ ಕೊಡ್ತೇವೆ ಎಂದಿದ್ದಾರೆ.

The post ತನಿಖೆ ನಂತರವೇ ಸತ್ಯಾಂಶ ಹೊರಬೀಳುತ್ತೆ.. 2-3 ದಿನದಲ್ಲಿ ಕ್ಲಾರಿಟಿ ಸಿಗಬಹುದು- ಉಮಾಪತಿ appeared first on News First Kannada.

Source: newsfirstlive.com

Source link