ವಿಟಿಯು ಫಸ್ಟ್​ ಸೆಮಿಸ್ಟರ್ ಎಕ್ಸಾಂ ಟೈಮ್​ ಟೇಬಲ್​​ ಪ್ರಕಟ

ವಿಟಿಯು ಫಸ್ಟ್​ ಸೆಮಿಸ್ಟರ್ ಎಕ್ಸಾಂ ಟೈಮ್​ ಟೇಬಲ್​​ ಪ್ರಕಟ

ಬೆಂಗಳೂರು: ಮಾರಕ ಕೋವಿಡ್​​-19 ಎರಡನೇ ಅಲೆಯಿಂದಾಗಿ ಮುಂದೂಡಲಾಗಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಬಾಕಿ ಉಳಿದ ಮೊದಲ ಸೆಮಿಸ್ಟರ್ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗಿದೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ನಿಗದಿಯಾಗಿದ್ದ ಪರೀಕ್ಷೆ ಕೊರೊನಾ ವೈರಸ್​​ ಕಾರಣಕ್ಕೆ ಮುಂದೂಡಲಾಗಿತ್ತು. ಆದರೀಗ, ಕೊರೊನಾ ತುಸು ಸುಧಾರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಿಟಿಯು ತನ್ನ ಪರಿಷ್ಕೃತ ವೇಳಾಪಟ್ಟಿ ಪ್ರಕಟ ಮಾಡಿದೆ.

ಜುಲೈ 27 ರಿಂದ ಪ್ರಾರಂಭವಾಗಲಿರುವ ಪ್ರಥಮ ಸೆಮಿಸ್ಟರ್ ಪರೀಕ್ಷೆ ಆಗಸ್ಟ್​ 3ನೇ ತಾರೀಕಿನವರೆಗೂ ನಡೆಯಲಿದೆ. ಆಗಸ್ಟ್​ 4 ರಿಂದ 13ರವರೆಗೂ ವೈವಾ ಮತ್ತು ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ.

The post ವಿಟಿಯು ಫಸ್ಟ್​ ಸೆಮಿಸ್ಟರ್ ಎಕ್ಸಾಂ ಟೈಮ್​ ಟೇಬಲ್​​ ಪ್ರಕಟ appeared first on News First Kannada.

Source: newsfirstlive.com

Source link