ತಮಿಳುನಾಡು ರಾಜಕೀಯಕ್ಕೆ ಗುಡ್​​ ಬೈ.. ಪಕ್ಷ ವಿಸರ್ಜಿಸಿದ ರಜಿನಿಕಾಂತ್​​​

ತಮಿಳುನಾಡು ರಾಜಕೀಯಕ್ಕೆ ಗುಡ್​​ ಬೈ.. ಪಕ್ಷ ವಿಸರ್ಜಿಸಿದ ರಜಿನಿಕಾಂತ್​​​

ಚೆನ್ನೈ: ತಮಿಳುನಾಡು ರಾಜಕೀಯಕ್ಕೆ ಸೂಪರ್​ ಸ್ಟಾರ್​ ರಜನೀಕಾಂತ್​​ ಗುಡ್​ ಬೈ ಹೇಳಿದ್ದಾರೆ. ಇದೇ ಕೊನೆ ಇನ್ನೆಂದಿಗೂ ರಾಜಕೀಯಕ್ಕೆ ಬರೋದಿಲ್ಲ ಎಂದು ರಜನೀಕಾಂತ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಮತ್ತೆ ಸೂಪರ್​ ಸ್ಟಾರ್​​​ ರಜನೀಕಾಂತ್​​ ರಾಜಕೀಯಕ್ಕೆ ಬರುತ್ತಾರಾ? ಎಂಬ ಇಡೀ ಚರ್ಚೆಗೆ ತೆರೆ ಎಳೆದಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ರಜನೀಕಾಂತ್​​.. ನನ್ನ ಆರೋಗ್ಯದ ದೃಷ್ಟಿಯಿಂದ ರಾಜಕೀಯಕ್ಕೆ ಮರುಪ್ರವೇಶ ಮಾಡುವ ನಿರ್ಧಾರ ಬದಲಿಸಿದ್ದೇನೆ. ಹೀಗಾಗಿ ಸದ್ಯದಲ್ಲೇ ರಜನಿ ಮಕ್ಕಳ್ ಮಂಡ್ರಮ್​​ ಪಕ್ಷವನ್ನು ವಿಸರ್ಜಿಸಲಾಗುವುದು. ಮುಂದೆ ಇದು ರಜನೀಕಾಂತ್​​​ ರಾಸಿಗರ್​​ ನರ್ಪಾಣಿ ಮಂಡ್ರಮ್​​ ಫ್ಯಾನ್ಸ್ ಕ್ಲಬ್​ ಆಗಿ ಮುಂದುವರಿಯಲಿದೆ ಎಂದರು.

blank

ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ ಬಳಿಕವೇ ಈ ನಿರ್ಧಾರಕ್ಕೆ ಬಂದಿದ್ದೇನೆ. ಅನಿವಾರ್ಯ ಕಾರಣಾಂತರಗಳಿಂದ ರಾಜಕೀಯ ಪ್ರವೇಶ ಮಾಡಲಾಗುತ್ತಿಲ್ಲ. ಮುಂದೆಯೂ ಇಂತಹ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ನಾನು ರಾಜಕೀಯಕ್ಕೆ ಮತ್ತೆ ಬರುತ್ತೇನೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇದನ್ನು ಬಗೆಹರಿಸುವುದು ನನ್ನ ಕರ್ತವ್ಯವಾಗಿತ್ತು ಎಂದಿದ್ದಾರೆ ರಜನೀಕಾಂತ್​.

blank

ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಮೂಡಿಸಲು ಸೂಪರ್​​​ ಸ್ಟಾರ್​​​ ರಜನೀಕಾಂತ್​ ಮುಂದಾಗಿದ್ದರು. ನಟ ಕಮಲ್​ ಹಾಸನ್​​​ ಮಕ್ಕಳ ಮಕ್ಕಳ್ ನಿಧಿ ಮಯ್ಯಂ ಪಕ್ಷ ಸ್ಥಾಪಿಸಿದ ಸಮಯದಲ್ಲೇ ರಜನೀಕಾಂತ್​​ ಕೂಡ ಹೊಸ ಪಾರ್ಟಿಯೊಂದು ಘೋಷಿಸುವುದಾಗಿ ಹೇಳಿದ್ದರು.

The post ತಮಿಳುನಾಡು ರಾಜಕೀಯಕ್ಕೆ ಗುಡ್​​ ಬೈ.. ಪಕ್ಷ ವಿಸರ್ಜಿಸಿದ ರಜಿನಿಕಾಂತ್​​​ appeared first on News First Kannada.

Source: newsfirstlive.com

Source link