ಡೋಂಗಿ ಬಾಬಾನಿಗೆ ಬೀದಿಯಲ್ಲಿ ಅಟ್ಟಾಡಿಸಿ ಗೂಸಾ ಕೊಟ್ಟ ಮಹಿಳೆ

ಡೋಂಗಿ ಬಾಬಾನಿಗೆ ಬೀದಿಯಲ್ಲಿ ಅಟ್ಟಾಡಿಸಿ ಗೂಸಾ ಕೊಟ್ಟ ಮಹಿಳೆ

ಗದಗ: ಕುದಿಯೋ ಎಣ್ಣೆ ಹಾಗೂ ಸುಡು ಸುಡು ತುಪ್ಪದಲ್ಲಿ ಕೈ ಹಾಕಿ ಜನರನ್ನು ನಂಬಿಸಿ ವಂಚನೆ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಮಹಿಳೆಯೊಬ್ಬರು ಗೂಸಾ ಕೊಟ್ಟ ಘಟನೆ ಗದಗದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ನಡೆದಿದೆ.

ಆಸೀಫ್ ಜಾಗಿರದಾರ ಎಂಬತ ತನ್ನ ಮೇಲೆ ಮೈಮೇಲೆ ದೇವರು ಬಂದಂತೆ ನಟಿಸಿ ಜನರನ್ನ ನಂಬಿಸುತ್ತಿದ್ದ ನಕಲಿ ಬಾಬಾ ಆಗಿದ್ದ, ತನ್ನ ಬಳಿ ಬಂದವರಿಗೆ ನಿಂಬೆಹಣ್ಣು, ಬೂದಿ ಕೊಟ್ಟು ಜನರಿಗೆ ವಂಚನೆ ಮಾಡುತ್ತಿದ್ದ. ಮೂಲತಃ ಬಿಜಾಪುರ ಜಿಲ್ಲೆಯವನಾದ ಆಸೀಫ್ ಜಾಗಿರದಾರ, ಪತ್ನಿಯ ಮನೆಯಲ್ಲಿ ವಾಸವಿದ್ದ, ತನ್ನ ಬಳಿ ಬರುವ ಜನರಿಗೆ ಮೈಂಡ್ ವಾಶ್ ಮಾಡಿ ಹಣ ಲೂಟಿ ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

blank

ತನ್ನ ಮೇಲೆ ದೇವರ ಬಂದಂತೆ ನಟನೆ ಮಾಡಿ ಪೂಜೆ ಮಾಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ತನ್ನ ಬಳಿ ಬರುವ ಹಲವು ಮಹಿಳೆಯರ ಬಳಿ ಹಣ ಪಡೆದುಕೊಂಡಿದ್ದನಂತೆ. ಅಲ್ಲದೇ ಜನರನ್ನು ನಂಬಿಸಲು ಸುಡುವ ಎಣ್ಣೆಯಲ್ಲಿ ಕೈ ಹಾಕಿ ಬಿಸಿ‌ ಬಿಸಿ ಬಜಿ ತೆಗೆದು ಪವಾಡವೆಂಬಂತೆ ಜನರನ್ನು ನಂಬಿಸುತ್ತಿದ್ದ. ಈತನನ್ನು ನಂಬಿದ ಜನರೂ ಸಹ ಬಾಬಾ ಕೇಳಿದಷ್ಟೇ ಹಣ‌ ನೀಡಿ ವಂಚನೆಗೆ ಬಲಿಯಾಗಿದ್ದರಂತೆ.

blank

ಸದ್ಯ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಯೊಬ್ಬರಿಗೆ ತಡರಾತ್ರಿ ಕರೆಮಾಡಿ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎನ್ನಲಾಗಿದೆ. ಡೋಂಗಿ ಬಾಬಾನ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ಮಹಿಳೆ ತನ್ನ ಕುಟುಂಬಸ್ಥರು, ಸ್ಥಳೀಯರೊಂದಿಗೆ ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಹೇಳಿದ್ದಾರೆ. ನಾನು ಮಾಡಿದ್ದು ಮೋಸ, ತಪ್ಪಾಗಿದೆ ಕ್ಷಮಿಸಿ ಅಂತಾ ಬೇಡಿಕೊಂಡ್ರೂ ಜನರು ಧರ್ಮದೇಟು ಕೊಟ್ಟಿದ್ದಾರೆ. ಗದಗ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

blank

The post ಡೋಂಗಿ ಬಾಬಾನಿಗೆ ಬೀದಿಯಲ್ಲಿ ಅಟ್ಟಾಡಿಸಿ ಗೂಸಾ ಕೊಟ್ಟ ಮಹಿಳೆ appeared first on News First Kannada.

Source: newsfirstlive.com

Source link