ಅದೇನು ಸುಪ್ರೀಂಕೋರ್ಟ್​ ಜಡ್ಜ್​​ಮೆಂಟಾ? ತನಿಖೆಯಾಗಲಿ -ಉಮಾಪತಿ ತಿರುಗೇಟು

ಅದೇನು ಸುಪ್ರೀಂಕೋರ್ಟ್​ ಜಡ್ಜ್​​ಮೆಂಟಾ? ತನಿಖೆಯಾಗಲಿ -ಉಮಾಪತಿ ತಿರುಗೇಟು

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್​ ದರ್ಶನ್ ಹೆಸರಿನಲ್ಲಿ ಶ್ಯೂರಿಟಿ ದೋಖಾ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಗಳ ಜೊತೆ ಮತ್ತೆ ನಿರ್ಮಾಪಕ ಉಮಾಪತಿ ಮಾತನಾಡಿದರು.

ಈ ವೇಳೆ ದರ್ಶನ್ ಅವರ ‘ಉಮಾಪತಿ ಅವರೇ ಕ್ಲಾರಿಟಿ ಕೊಡಬೇಕು’ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿದ ಉಮಾಪತಿ.. ಪ್ರಕರಣ ಸಂಬಂಧ ದೂರು ನೀಡಾಗಿದೆ. ಅವರ ಮಾತಿಗೆ ಬೆಲೆ ಕೊಟ್ಟೇ ನಾನು ಜಯನಗರ ಠಾಣೆಯಲ್ಲಿ ದೂರು ನೀಡಿದ್ದೇನೆ. ತನಿಖೆ ಶುರುವಾಗಿದೆ ಎಂದರು.

ಇದೇ ವೇಳೆ ರಾಕೇಶ್ ಶರ್ಮಾ, ರಾಕೇಶ್ ಪಾಪಣ್ಣ ಮತ್ತು ಹರ್ಷಾ ಅವರಿಗೆ ಈ ಪ್ರಕರಣದಲ್ಲಿ ದರ್ಶನ್ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಅಂತಾ ಮಾಧ್ಯಮಗಳು ಕೇಳಿದಾಗ.. ಪ್ರಕರಣ ಸಂಬಂಧ ಜನ ಸಾವಿರ ಹೇಳಬಹುದು.. ನಾವು ಎಲ್ಲಿ ಕಂಪ್ಲೇಟ್ ಕೊಟ್ಟಿದ್ದೀವಿ.. ಎಲ್ಲಿ? ಪೊಲೀಸ್ ಸ್ಟೇಷನ್​ನಲ್ಲಿ.. ನಾನೀಗ ಒಂದು ಸ್ಟೇಟ್ಮೆಂಟ್ ಕೊಡ್ತೀನಿ. ಅದು ಸುಪ್ರೀಂಕೋರ್ಟ್​ ಜಡ್ಜ್​​ಮೆಂಟಾ? ಅಥವಾ ಪೊಲೀಸ್ ಇಲಾಖೆಯ ತೀರ್ಮಾನ ಸಾರ್? ದರ್ಶನ್ ಅವರು ಜವಾಬ್ದಾರಿಯಿಂದ ಆ ಮಾತನ್ನ ಹೇಳಿದ್ದಾರೆ. ನಾನು ಹೇಳ್ತಿರೋದೇನು? ದೂರು ನೀಡಿದ್ದ್ದೀವಿ ತಾನೆ. ಕೋಳಿ ಮೊಟ್ಟೆ ಇಡುತ್ತಿದೆ ತಾನೆ.. ಯಾಕೆ ಕೈಹಾಕಿ ತೆಗೀಬೇಕು? ಸ್ವಲ್ಪದಿನ ಕಾಯಬೇಕು ಎಂದು ಹೇಳಿದ್ರು.

The post ಅದೇನು ಸುಪ್ರೀಂಕೋರ್ಟ್​ ಜಡ್ಜ್​​ಮೆಂಟಾ? ತನಿಖೆಯಾಗಲಿ -ಉಮಾಪತಿ ತಿರುಗೇಟು appeared first on News First Kannada.

Source: newsfirstlive.com

Source link