‘ನೀವೂ ಕಳ್ಳರೇ.. ನಾವೂ ಕಳ್ಳರೇ’ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಹಿಳಾ ಅಧಿಕಾರಿ ಎತ್ತಂಗಡಿ

‘ನೀವೂ ಕಳ್ಳರೇ.. ನಾವೂ ಕಳ್ಳರೇ’ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಹಿಳಾ ಅಧಿಕಾರಿ ಎತ್ತಂಗಡಿ

ರಾಯಚೂರು: ಸಿಂಧನೂರಿನ ವಕೀಲ ಸಂತೋಷ್ ಪಾಟೀಲ್ ತಮ್ಮ ಜಮೀನಿನ ವಿಚಾರವಾಗಿ ಮಾರ್ಟ್​​ಗೇಜ್​ಗಾಗಿ ಸಬ್​​ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ದಾಖಲೆ ನೀಡಲು ಮಹಿಳಾ ಸಬ್​ ರಿಜಿಸ್ಟ್ರಾರ್ ಲಕ್ಷ್ಮೀ ತುಳಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು. ಅಲ್ಲದೇ ವಕೀಲರಿಗೆ ನೀವೂ ಕಳ್ಳರೇ.. ನಾವೂ ಕಳ್ಳರೇ ಎಂದು ಸಂಭೋದಿಸಿದ್ದರು ಎಂದು ಆರೋಪಿಸಲಾಗಿತ್ತು.

ಇದೀಗ ಕಳ್ಳತನದ ಮಾತನಾಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಮಹಿಳಾ ಸಬ್​ ರಿಜಿಸ್ಟ್ರಾರ್ ಲಕ್ಷ್ಮೀ ತುಳಸಿ ಅವರನ್ನ ಕೊಪ್ಪಳಕ್ಕೆ ವರ್ಗಾವಣೆ ಮಾಡಲಾಗಿದೆ. ನೋಂದಣಿ ಮಹಾ ಪರಿವೀಕ್ಷಕಕರು ಮತ್ತು ಮುದ್ರಾಂಕಗಳ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಕೊಪ್ಪಳ ಜಿಲ್ಲಾ ನೋಂದಣಾಧಿಕಾರಿ ಕಚೇರಿಯ Non-Executive ಹುದ್ದೆಗೆ ಅವರನ್ನ ನಿಯೋಜನೆ ಮಾಡಲಾಗಿದೆ.

The post ‘ನೀವೂ ಕಳ್ಳರೇ.. ನಾವೂ ಕಳ್ಳರೇ’ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಹಿಳಾ ಅಧಿಕಾರಿ ಎತ್ತಂಗಡಿ appeared first on News First Kannada.

Source: newsfirstlive.com

Source link