ಬೆಂಗಳೂರು: ನಟ ದರ್ಶನ್ ಆಸ್ತಿ‌ಪತ್ರ ಫೋರ್ಜರಿ, ಕೆನರಾ ಬ್ಯಾಂಕ್ ಹೆಸರು ಬಳಸಿ ಬ್ಲಾಕ್ ಮೇಲೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್ ಫಸ್ಟ್​ಗೆ ಕೆನರಾ ಬ್ಯಾಂಕ್ ಡೆಪ್ಯುಟಿ ಜನರಲ್ ಮ್ಯಾನೇಜರ್ ಬೋರಯ್ಯ ಮಾಹಿತಿ ನೀಡಿದ್ದಾರೆ.

ಅರುಣ್ ಕುಮಾರಿ ಎಂಬ ಸಿಬ್ಬಂದಿ ನಮ್ಮ ಬ್ರ್ಯಾಂಚ್​​ನಲ್ಲಿ ಇಲ್ಲ. 25 ಕೋಟಿ  ರೂಪಾಯಿಗೆ ಸಂಬಂಧಿಸಿದಂತೆ ಯಾವುದೇ ಲೋನ್ ಬೇಡಿಕೆ‌‌ ಇಲ್ಲ. ನನಗೆ ಜೂನ್ 17 ರಂದು ಹರ್ಷ ಎಂಬುವವರು ಸಂಜೆ ಕರೆ ಮಾಡಿದ್ರು. ಆಗ ನಮ್ಮಲ್ಲಿ ಅರುಣಾ ಕುಮಾರಿ ಎಂಬ ಸಿಬ್ಬಂದಿ ಇಲ್ಲ ಅಂತಾ ಹೇಳಿದೆ.  ಅಲ್ಲದೇ, ಮೈಸೂರಿನಿಂದ ಪೊಲೀಸರು ಸಹ ಕಾಂಟ್ಯಾಕ್ಟ್ ಮಾಡಿದ್ರು. ಅವರು ಅರುಣಾ ಕುಮಾರಿ ಬಗ್ಗೆ ಮಾಹಿತಿ ಕೇಳಿದ್ರು. ಅವರು ಯಾರೂ ಅನ್ನೋದೆ ಗೊತ್ತಿಲ್ಲ, ಲೋನ್ ಸೆಕ್ಷನ್ನಲ್ಲಿ ಅಂಥವರು ಯಾರೂ ಇಲ್ಲ ಅಂದಿದ್ದೀವಿ ಅಂತ ಹೇಳಿದ್ರು.

 

The post ನಮ್ಮ ಬ್ರ್ಯಾಂಚ್​ನಲ್ಲಿ ಅರಣಾ ಕುಮಾರಿ ಹೆಸರಿನವರು ಯಾರೂ ಕೆಲ್ಸ ಮಾಡಲ್ಲ -ಕೆನರಾ ಬ್ಯಾಂಕ್​ GM appeared first on News First Kannada.

Source: newsfirstlive.com

Source link