ಕಾಂಗ್ರೆಸ್​ನತ್ತ ಮಹಿಳೆಯರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಮಾಸ್ಟರ್​ ಪ್ಲಾನ್​​

ಕಾಂಗ್ರೆಸ್​ನತ್ತ ಮಹಿಳೆಯರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಮಾಸ್ಟರ್​ ಪ್ಲಾನ್​​

ಬೆಂಗಳೂರು: 2023 ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್​ ಈಗಿನಿಂದಲೇ ಭಾರೀ ಸರ್ಕಸ್​ ನಡೆಸುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್​ನತ್ತ ಮಹಿಳೆಯರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​, ಇಂದು ಸ್ತ್ರೀ ಶಕ್ತಿ ಸಂಘಟನಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ.

ಸ್ತ್ರೀ ಶಕ್ತಿ ಸಂಘಟನಾ ಸಮಿತಿಯೊಂದಿಗೆ ಡಿ.ಕೆ ಶಿವಕುಮಾರ್​ ನಡೆಸಿದ ಮ್ಯಾರಥಾನ್​ ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​​, ಸೌಮ್ಯ ರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಹಲವು ಮಹಿಳಾ ನಾಯಕರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್​ನತ್ತ ಮಹಿಳೆಯರನ್ನು ಹೇಗೆ ಸಳೆಯಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ.

blank

ಮ್ಯಾರಥಾನ್​ ಸಭೆಯನ್ನುದ್ದೇಶಿಸಿ ಮಾತಾಡಿದ ಡಿ.ಕೆ ಶಿವಕುಮಾರ್​​, ಮಹಿಳಾ ಕಾಂಗ್ರೆಸ್​ನಿಂದ ಸೈಕಲ್‌ ರ್‍ಯಾಲಿ ಆಯೊಜಿಸಿದ್ದೇವೆ. ಇದುವರೆಗೂ 4,700 ಕಡೆ 100 ನಾಟ್​​ ಔಟ್​​ ಪ್ರತಿಭಟನೆಗಳು ಮಾಡಿದ್ದೇವೆ. ನಮ್ಮ ಈ ಆಲ್​ ಇಂಡಿಯಾ ಕಾಂಗ್ರೆಸ್​ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಮೂಲಕ ಮಹಿಳೆಯರು ಯಾರಿಗೂ ಕಡಿಮೆ ಇಲ್ಲ ಎಂದು ಸಾಬೀತಾಗಿದೆ ಎಂದರು.

blank

ಮಹಿಳೆಯರಿಗೆ ಅವಕಾಶ ನೀಡಿದ ಕಾಂಗ್ರೆಸ್​

ಮುಂದುವರಿದ ಡಿ.ಕೆ ಶಿವಕುಮಾರ್​​, ಮಹಿಳೆಯರಿಗೆ ಅವಕಾಶ ಬೇಕಿತ್ತು. ಕಾಂಗ್ರೆಸ್​ ನಿಮಗೆ ಅವಕಾಶ ನೀಡಿದೆ. ವ್ಯಾಕ್ಸಿನ್​ ವಿಚಾರದಲ್ಲಿ ನಾವು ತೆಗೆದುಕೊಂಡ ನಿರ್ಧಾರ ಇಡೀ ದೇಶದಲ್ಲಿ ಜಾರಿಯಾಗಿದೆ. ಕೊರೋನಾ ಸಂದರ್ಭದಲ್ಲಿ ರೈತರಿಂದ ತರಕಾರಿ ಖರೀದಿಸಿ ಜನರಿಗೆ ನೀಡಿದೆವು. ಇದರಿದಂದ ಎಲ್ಲರಿಗೂ ಅನುಕೂಲವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್​ ಮಾದರಿ ಕಾರ್ಯ

ಕೊರೋನಾ ಕಷ್ಟ ಕಾದಲ್ಲಿ ಎಷ್ಟೋ ಕುಟುಂಬಗಳಿಗೆ ಕಾಂಗ್ರೆಸ್​ ನೆರವಾಗಿದೆ. ಮೊದಲು ಫುಡ್​​ ಪ್ಯಾಕೇಟ್ಸ್​ ನೀಡಿದೆವು. ನಂತರ ಫುಡ್ ಕಿಟ್ಸ್​ ಜೊತೆಗೆ ರೇಷನ್​ ಕೊಟ್ಟೆವು. ಇದು ಕಾಂಗ್ರೆಸ್​ನ ಮಾದರಿ ಕಾರ್ಯ ಎಂದು ಶ್ಲಾಘಿಸಿದರು.

The post ಕಾಂಗ್ರೆಸ್​ನತ್ತ ಮಹಿಳೆಯರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಮಾಸ್ಟರ್​ ಪ್ಲಾನ್​​ appeared first on News First Kannada.

Source: newsfirstlive.com

Source link