ದರ್ಶನ್ ಕಳಿಸಿದ್ದ ಡಾಕ್ಯುಮೆಂಟ್​ಗಳನ್ನೇ ದುರ್ಬಳಕೆ ಮಾಡಿಕೊಂಡ್ರಾ ಉಮಾಪತಿ..?

ದರ್ಶನ್ ಕಳಿಸಿದ್ದ ಡಾಕ್ಯುಮೆಂಟ್​ಗಳನ್ನೇ ದುರ್ಬಳಕೆ ಮಾಡಿಕೊಂಡ್ರಾ ಉಮಾಪತಿ..?

ದರ್ಶನ್ ಹೆಸರು ಹೇಳಿ ಸ್ನೇಹಿತರಿಗೆ ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಉಮಾಪತಿ ಹಾಗೂ ಆರೋಪಿ ಅರುಣಾ ಕುಮಾರಿ ನಡುವಿನ ವಾಟ್ಸ್​ಆ್ಯಪ್ ಚಾಟ್ ಹೊರಬಿದ್ದಿವೆ. ವಾಟ್ಸ್​ ಆ್ಯಪ್​ ಚಾಟ್ ಪ್ರಕಾರ ಏಪ್ರಿಲ್​ 8 ರಿಂದಲೂ ಅರುಣಾ ಕುಮಾರಿ ಉಮಾಪತಿಗೆ ಏಪ್ರಿಲ್ 8 ರಿಂದಲೂ ಚಾಟ್ ಮಾಡಿದ್ದಾರೆ ಎನ್ನಲಾಗಿದೆ.

ದರ್ಶನ್‌ರ ಆಧಾರ್ ಕಾರ್ಡ್, ಅಡ್ರೆಸ್​​ಗಳನ್ನ ವಾಟ್ಸಾಪ್‌ನಲ್ಲಿ ಉಮಾಪತಿ ಶೇರ್ ಮಾಡಿದ್ದಾರೆ ಎನ್ನಲಾಗಿದೆ. ಸಿನಿಮಾ ಸೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ನಿರ್ಮಾಪಕರಿಗೆ ದರ್ಶನ್ ಆಧಾರ್ ಡಾಕ್ಯುಮೆಂಟ್ ನೀಡಿದ್ದು ಈ ಡಾಕ್ಯುಮೆಂಟ್​ಗಳನ್ನ ಉಮಾಪತಿ ದುರ್ಬಳಕೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ.

blank

ವಾಟ್ಸ್​ ಆ್ಯಪ್​ ಚಾಟ್ ಜೊತೆಗೆ ನಿರ್ಮಾಪಕ ಉಮಾಪತಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ಬಹಿರಂಗವಾಗಿದೆ. ಸದ್ಯ ಹೆಬ್ಬಾಳ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ನಡುವೆ ದರ್ಶನ್ ಸುದ್ದಿಗೋಷ್ಟಿ ನಡೆಸಿ ಉಮಾಪತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ಬಗ್ಗೆ ವಿವರಣೆ ನೀಡಲು ಉಮಾಪತಿಗೆ ದರ್ಶನ್ ಎರಡು ದಿನಗಳ ಡೆಡ್‌ಲೈನ್ ನೀಡಿದ್ದಾರೆ.

blank

The post ದರ್ಶನ್ ಕಳಿಸಿದ್ದ ಡಾಕ್ಯುಮೆಂಟ್​ಗಳನ್ನೇ ದುರ್ಬಳಕೆ ಮಾಡಿಕೊಂಡ್ರಾ ಉಮಾಪತಿ..? appeared first on News First Kannada.

Source: newsfirstlive.com

Source link