NEET ಪರೀಕ್ಷೆಗೆ ಫಿಕ್ಸ್ ಆಯ್ತು ಡೇಟ್.. 198 ನಗರಗಳಲ್ಲಿ ನಡೆಯಲಿದೆ ಎಕ್ಸಾಂ

NEET ಪರೀಕ್ಷೆಗೆ ಫಿಕ್ಸ್ ಆಯ್ತು ಡೇಟ್.. 198 ನಗರಗಳಲ್ಲಿ ನಡೆಯಲಿದೆ ಎಕ್ಸಾಂ

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET) 2021 ಇದೇ ಸೆಪ್ಟೆಂಬರ್ 12 ರಂದು ನಡೆಯಲಿದೆ.. ಪರೀಕ್ಷೆ ವೇಳೆ ಕೊರೊನಾ ನಿಯಮಗಳನ್ನು ಪಾಲಿಸಲಾಗುವುದು ಎಂದು ಕೇಂದ್ರದ ನೂತನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಅಲ್ಲದೇ ನಾಳೆ ಅಂದ್ರೆ 13 ರ ಜುಲೈ ಸಂಜೆ 5 ರಿಂದ ಈ ಪರೀಕ್ಷೆಗೆ NTA ವೆಬ್​ಸೈಟ್​ ಮೂಲಕ ಅರ್ಜಿ ಆಹ್ವಾನ ಪ್ರಕ್ರಿಯೆ ನಡೆಯಲಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಅಲ್ಲದೇ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಹೆಚ್ಚಿಸುವುದನ್ನ ಗಮನದಲ್ಲಿರಿಸಿಕೊಂಡು ಈ ಬಾರಿ ಪರೀಕ್ಷೆ ನಡೆಯುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಏರಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದ್ದು 3,862 ಕೇಂದ್ರಗಳ ಬದಲಿಗೆ ಈಬಾರಿ 2020 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದಿದ್ದಾರೆ.

ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಫೇಸ್​ ಮಾಸ್ಕ್​​ಗಳನ್ನು ಎಲ್ಲಾ ಅಭ್ಯರ್ಥಿಗಳಿಗೆ ನೀಡಲಾಗುವುದು. ಸಂಪರ್ಕ ರಹಿತ ನೋಂದಣಿ, ಸ್ಯಾನಿಟೇಷನ್, ಆಸನ ವ್ಯವಸ್ಥೆ ಮತ್ತು ಸೋಷಿಯಲ್ ಡಿಸ್ಟೆನ್ಸ್​​ ಕಾಪಾಡಲಾಗುವುದು ಎಂದು ಹೇಳಿದ್ದಾರೆ.

The post NEET ಪರೀಕ್ಷೆಗೆ ಫಿಕ್ಸ್ ಆಯ್ತು ಡೇಟ್.. 198 ನಗರಗಳಲ್ಲಿ ನಡೆಯಲಿದೆ ಎಕ್ಸಾಂ appeared first on News First Kannada.

Source: newsfirstlive.com

Source link