ರಾಯಚೂರಿನಲ್ಲಿ ಭೀಕರ ಕಾರು ಅಪಘಾತ; ಓರ್ವ ಸಾವು, ಮೂವರಿಗೆ ತೀವ್ರ ಗಾಯ

ರಾಯಚೂರಿನಲ್ಲಿ ಭೀಕರ ಕಾರು ಅಪಘಾತ; ಓರ್ವ ಸಾವು, ಮೂವರಿಗೆ ತೀವ್ರ ಗಾಯ

ರಾಯಚೂರು: ಚಾಲಕನ ಅತಿಯಾದ ವೇಗದಿಂದ ಕಾರು ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ಮಸ್ಕಿಯಲ್ಲಿ ನಡೆದಿದೆ. ಇಂದು ಮಸ್ಕಿ ತಾಲೂಕಿನ ಮಾರಲದಿನ್ನಿ ಕ್ರಾಸ್ ಬಳಿ ಈ ಅಪಘಾತದ ನಡೆದಿದೆ. ಇದರಿಂದ ಕಾರಿನಲ್ಲಿದ್ದ ಶ್ರೀಕಾಂತ್ (25) ಎಂಬುವರು ಜೀವ ಕಳೆದುಕೊಂಡಿದ್ದಾರೆ. ಜತೆಗೆ ಮೂವರು ಮಂದಿ ಗಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಸ್ಕಿ ತಾಲೂಕಿನ ಆಮ್ದಿಹಾಳದಿಂದ ಮೆದಕಿನಾಳಗೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ. ಹಾಗೆಯೇ ಮೂವರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಈಗ ರಾಯಚೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಮೂವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

The post ರಾಯಚೂರಿನಲ್ಲಿ ಭೀಕರ ಕಾರು ಅಪಘಾತ; ಓರ್ವ ಸಾವು, ಮೂವರಿಗೆ ತೀವ್ರ ಗಾಯ appeared first on News First Kannada.

Source: newsfirstlive.com

Source link