‘ಕುಮಾರಸ್ವಾಮಿ ಮನೆಯಲ್ಲೂ ಹೆಂಗಸರಿದ್ದಾರೆ’ ಸುಮಲತಾ ಪರ ಕಾಂಗ್ರೆಸ್ ನಾಯಕಿ ಬ್ಯಾಟಿಂಗ್

‘ಕುಮಾರಸ್ವಾಮಿ ಮನೆಯಲ್ಲೂ ಹೆಂಗಸರಿದ್ದಾರೆ’ ಸುಮಲತಾ ಪರ ಕಾಂಗ್ರೆಸ್ ನಾಯಕಿ ಬ್ಯಾಟಿಂಗ್

ಸುಮಲತಾ ಅಂಬರೀಶ್ ಹಾಗೂ ಕುಮಾರಸ್ವಾಮಿ ವಾಕ್ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವೆ ಮೋಟಮ್ಮ ಸುಮಲತಾ ಅಂಬರೀಶ್ ಪರ ಬ್ಯಾಟ್ ಬೀಸಿದ್ದಾರೆ.

ಸುಮಲತಾ ಎತ್ತಿರುವ ವಿಚಾರ ಯಾವುದೇ ಇರಲಿ.. ಕುಮಾರಸ್ವಾಮಿ ಅವರು ಓರ್ವ ಹೆಣ್ಣುಮಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದು ಸರಿಯಲ್ಲ. ಕುಮಾರಸ್ವಾಮಿ ಅವರ‌ ಮನೆಯಲ್ಲೂ ಹೆಂಗಸರಿದ್ದಾರೆ, ಕುಮಾರಸ್ವಾಮಿ ಅವರ ಪತ್ನಿಯೇ ಶಾಸಕಿಯಾಗಿದ್ದಾರೆ, ಅವರು ಹೆಂಗಸರ ಬಗ್ಗೆ ಹೀಗೆ ಮಾತಾಡಿದರೆ ಅವರಿಗೇ ಸರಿ ಅನ್ನಿಸುತ್ತಾ..? ಎಂದು ಮೋಟಮ್ಮ ಪ್ರಶ್ನಿಸಿದ್ದಾರೆ.

blank
ಮೋಟಮ್ಮ, ಮಾಜಿ ಸಚಿವೆ

ಕುಮಾರಸ್ವಾಮಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು.. ಹೆಣ್ಣುಮಕ್ಕಳ ಬಗ್ಗೆ ಯಾರೂ ಈ ರೀತಿ ಮಾತನಾಡಬಾರದು. ಸುಮಲತಾ ಅಂಬರೀಶ್ ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ.. ಜವಾಬ್ದಾರಿಯುತವಾಗಿಯೇ ಹೇಳಿಕೆ ನೀಡಿದ್ದಾರೆ. ಅಣೆಕಟ್ಟು ಬಗ್ಗೆ ಅವರು ಆತಂಕ ವ್ಯಕ್ತಪಡಿಸಿರಬಹುದು, ಅದನ್ನ ಸರ್ಕಾರ ಪರಿಶೀಲಿಸಬೇಕು. ಆದರೆ ಕುಮಾರಸ್ವಾಮಿ ಈ ರೀತಿ ಹೇಳಿಕೆ‌ ನೀಡಿದ್ದು ಸರಿಯಲ್ಲ ಎಂದು ಅವರು ಒತ್ತಾಯಿಸಿದ್ದಾರೆ.

The post ‘ಕುಮಾರಸ್ವಾಮಿ ಮನೆಯಲ್ಲೂ ಹೆಂಗಸರಿದ್ದಾರೆ’ ಸುಮಲತಾ ಪರ ಕಾಂಗ್ರೆಸ್ ನಾಯಕಿ ಬ್ಯಾಟಿಂಗ್ appeared first on News First Kannada.

Source: newsfirstlive.com

Source link