ಗ್ರಾಹಕರ ಜಗಳ ಬಿಡಿಸಲು ಹೋದ ಡಾಬಾ ಮಾಲೀಕನ ಕೊಲೆಯೇ ನಡೆದೋಯ್ತು

ಗ್ರಾಹಕರ ಜಗಳ ಬಿಡಿಸಲು ಹೋದ ಡಾಬಾ ಮಾಲೀಕನ ಕೊಲೆಯೇ ನಡೆದೋಯ್ತು

ಬೆಳಗಾವಿ: ಕೇವಲ 1,500 ರೂಪಾಯಿ ಹಣಕ್ಕಾಗಿ ಕಿತ್ತಾಡುತ್ತಿದ್ದ ಇಬ್ಬರು ಗ್ರಾಹಕರನ್ನು ಬಿಡಿಸಲು ಹೋದ ಡಾಬಾ ಮಾಲೀಕನ ಹತ್ಯೆ ನಡೆದಿದೆ. ಭಾನುವಾರ ತಡರಾತ್ರಿ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪಂಚವಟಿ ಡಾಬಾದ ಮಾಲೀಕ ಪ್ರಕಾಶ್ ನಾಗನೂರ(38) ಎಂಬುವರು ಹತ್ಯೆಗೀಡಾದ ವ್ಯಕ್ತಿ.

ತನ್ನ ಡಾಬಾದಲ್ಲಿ ಮಂಜುನಾಥ್ ಮತ್ತು ಅಜೀಜ್ ಎಂಬ ಇಬ್ಬರು ಗ್ರಾಹಕರ ನಡುವೆ 1,500 ರೂಪಾಯಿಗಾಗಿ ಜಗಳ ನಡೆದಿದೆ. ಈ ವೇಳೆ ಇಬ್ಬರು ಗ್ರಾಹಕರ ಜಗಳ ಬಿಡಿಸಲು ಹೋದ ಪ್ರಕಾಶ್​​ ಮೇಲೆಯೇ ತೀವ್ರ ಹಲ್ಲೆ ನಡೆದಿದೆ ಎನ್ನಲಾಗಿದೆ. ಗ್ರಾಹಕ ಅಜೀಜ್​​​ ಮತ್ತು ಆತನ 7 ಜನ ಸ್ನೇಹಿತರು ಪ್ರಕಾಶ್​​ ಮೇಲೆ ತೀವ್ರ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಇನ್ನು, ತೀವ್ರ ಹಲ್ಲೆಗೊಳಗಾಗಿದ್ದ ಪ್ರಕಾಶ್ ನಾಗನೂರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಸಾಗಿಸಲಾಗುತ್ತಿತ್ತು. ಈ ವೇಳೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಪ್ರಕಾಶ್​​ ಕೊನೆಯುಸಿರು ಎಳೆದಿದ್ದಾರೆ. ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಗ್ರಾಹಕರ ಜಗಳ ಬಿಡಿಸಲು ಹೋದ ಡಾಬಾ ಮಾಲೀಕನ ಕೊಲೆಯೇ ನಡೆದೋಯ್ತು appeared first on News First Kannada.

Source: newsfirstlive.com

Source link