ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ದಿಟ್ಟ ಹೋರಾಟ; ನಿರಾಣಿ ಕೊನೆಗೂ ಮಾತು ಕೊಟ್ರಾ?

ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ದಿಟ್ಟ ಹೋರಾಟ; ನಿರಾಣಿ ಕೊನೆಗೂ ಮಾತು ಕೊಟ್ರಾ?

ಬೆಂಗಳೂರು: ಕೆಆರ್​ಎಸ್​​ ಅಕ್ರಮ ಗಣಿಗಾರಿಕೆ ಕುರಿತು ಮಂಡ್ಯ ಸಂಸದೆ ಬಂದು ಭೇಟಿಯಾದ ಬಳಿಕ ಸಚಿವ ಮುರುಗೇಶ್​​ ನಿರಾಣಿ ಮಾಧ್ಯಮದೊಂದಿಗೆ ಮಾತಾಡಿದ್ದಾರೆ. ನಗರದಲ್ಲಿಂದು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡಿದ ಮರುಗೇಶ್​​ ನಿರಾಣಿ, ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುವ ಬಗ್ಗೆ ವರದಿಗಳು ಬರುತ್ತಿವೆ. ನಾನು ಈ ಹಿಂದೆ ಭೇಟಿ ನೀಡಿದ್ದಾಗ ಎಲ್ಲಿನ ಎಲ್ಲಾ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದೆ. ಅಂದಿನ ಸಭೆಯಲ್ಲಿ ವರದಿ ಬರುವವರೆಗೆ ಕೆಆರ್‌ಎಸ್​​ನ 15 ಕಿಲೋ ಮೀಟರ್​​​ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯದಂತೆ ಸೂಚನೆ ಕೊಟ್ಟಿದ್ದೆ ಎಂದರು.

ಕಳೆದ ಮೂರು ತಿಂಗಳಿನಿಂದ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ. ಆದರೂ ಸುಮಲತಾ ಅವರು ಅಕ್ರಮ ಗಣಿಗಾರಿಕೆ ತಡೆಯುವಂತೆ ಒತ್ತಾಯಿಸಿದ್ದಾರೆ. ಆ ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯಕ್ಕೆ ಧಕ್ಕೆ ಆಗಬಾರದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ತೇವೆ ಎಂದು ಭರವಸೆ ನೀಡಿದರು.

blank

ಹೀಗೆ ಮುಂದುವರಿದ ಮರುಗೇಶ್​ ನಿರಾಣಿ, ಪ್ರಾಯೋಗಿಕ ಸ್ಫೋಟ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಎಷ್ಟು ದೂರದವರೆಗೆ ಸ್ಫೋಟದ ತೀವ್ರತೆ ಇರಲಿದೆ ಎಂಬುದು ಗೊತ್ತಾಗಲಿದೆ. ಇದೇ ವಾರ ಮಂಡ್ಯ ಜಿಲ್ಲೆಗೆ ಭೇಟಿ ಕೊಡುತ್ತೇನೆ. ಮಾಧ್ಯಮಗಳೊಂದಿಗೆ ಬೇಬಿ ಬೆಟ್ಟಕ್ಕೆ ಭೇಟಿ ಕೊಡುತ್ತೇನೆ. ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

ಮೂರು ತಿಂಗಳಿನಿಂದ ಗಣಿಗಾರಿಕೆಯಿಲ್ಲ

ಕೆಆರ್​ಎಸ್​ ಡ್ಯಾಂ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಿದ್ದೇವೆ. ಒಟ್ಟು 38 ಗಣಿಗಾರಿಕೆ ನಿಲ್ಲಿಸಿದ್ದೇವೆ. ಕಳೆದ ಮೂರು ತಿಂಗಳಿನಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಮಂಡ್ಯ ಸಂದದೆ ಸುಮತಾ ತಿಳಿಸಿದ್ದಾರೆ. ಬೇಬಿ ಬೆಟ್ಟಕ್ಕೆ ಕಳುಹಿಸಿ ವರದಿ ತರಿಸಿಕೊಂಡಿದ್ದೇವೆ. ಅಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ವರದಿಯಲ್ಲಿದೆ. ಅಕ್ರಮ ಗಣಿಗಾರಿಕೆ ಇವತ್ತು ‌ನಿನ್ನೆಯದಲ್ಲ ಎಂದು ಮಾಹಿತಿ ನೀಡಿದರು.

ಲೀಗಲ್​​ ಮೈನಿಂಗ್​​ಗೆ ಅವಕಾಶ

ಕರ್ನಾಟಕದ ರಾಜ್ಯಾದ್ಯಂತ‌ ಕಳೆದ ಐವತ್ತು ವರ್ಷದಿಂದ ಮೈನಿಂಗ್ ‌ನಡೆಯುತ್ತಿದೆ. ಕೆಲವು ಕಡೆ ಅಕ್ರಮವಾಗಿ ಮೈನಿಂಗ್ ನಡೆಯುತ್ತಿರುವುದು ನಿಜ ಇದೆ. ಇವತ್ತು ಲೀಗಲ್‌ ಮಾಡಿಕೊಳ್ಳಲು ‌ಸಮಯ‌ ನೀಡಿ ಸರಿ ಮಾಡುತ್ತಿದ್ದೇವೆ. ನಾಲ್ಕು ತಿಂಗಳ ಹಿಂದೆ ಮಂಡ್ಯ ಜಿಲ್ಲೆಗೆ ಭೇಟಿ‌ಕೊಟ್ಟಾಗ ಸಂಸದರು, ಎಮ್‌ಎಲ್ಎ ಸೇರಿದಂತೆ ಪಾರಿಸ್ಟ್ ಹೋಮು, ಎಕಾಲಜಿ ಇಲಾಖೆ ‌ಜೊತೆಗೆ ಸಭೆ ಮಾಡಿದ್ದೆ ಎಂದೇಳಿದರು.

The post ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ದಿಟ್ಟ ಹೋರಾಟ; ನಿರಾಣಿ ಕೊನೆಗೂ ಮಾತು ಕೊಟ್ರಾ? appeared first on News First Kannada.

Source: newsfirstlive.com

Source link