ನೇಪಾಳ ರಾಜಕೀಯ ಬಿಕ್ಕಟ್ಟು; ನಾಳೆ ನೂತನ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೇವುಬಾ ಪ್ರಮಾಣ ವಚನ

ನೇಪಾಳ ರಾಜಕೀಯ ಬಿಕ್ಕಟ್ಟು; ನಾಳೆ ನೂತನ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೇವುಬಾ ಪ್ರಮಾಣ ವಚನ

ನವದೆಹಲಿ: ಸುಪ್ರೀಂಕೋರ್ಟ್​ ಮಹತ್ವದ ಆದೇಶದಂತೆಯೇ ಈಗ ನೇಪಾಳದ ಮುಂದಿನ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೇವುಬಾರನ್ನು ನೇಮಕ ಮಾಡಲಾಗಿದೆ. ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರು ನಾಳೆ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮಾಜಿ ಪ್ರಧಾನಿ ಬಾಬುರಾಮ್​​ ಭಟ್ಟರಾಯ್​​​ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಬಾಬುರಾಮ್​ ಭಟ್ಟರಾಯ್​​​.. ಸುಪ್ರೀಂಕೋರ್ಟ್​ ಆದೇಶದಂತೆ ನಾಳೆ ಶೇರ್ ಬಹದ್ದೂರ್ ದೇವುಬಾ ಮತ್ತೊಮ್ಮೆ ನೇಪಾಳದ ಪ್ರಧಾನಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ. ಬಳಿಕ ನೇಪಾಳ ಸರ್ಕಾರದ ಸಂಪುಟ ರಚನೆ ಮಾಡುತ್ತೇವೆ ಎಂದಿದ್ದಾರೆ.

ಈ ಮುನ್ನ ನೇಪಾಳದಲ್ಲಿ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟು ಶುರುವಾಗುವ ಮೊದಲು ಸ್ಥಳೀಯ ಸಂಸತ್​​ನ್ನು ಮರುಸ್ಥಾಪಿಸಿ ಎಂದು ಸುಪ್ರೀಂಕೋರ್ಟ್​ ಆದೇಶಿಸಿತ್ತು. ಹಾಗೆಯೇ ಎರಡು ದಿನಗಳಲ್ಲಿ ನೇಪಾಳದ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೇವುಬಾರನ್ನು ನೇಮಿಸುವಂತೆ ರಾಷ್ಟ್ರಪತಿಗಳಿಗೆ ನಿರ್ದೇಶಿಸಿತ್ತು. ಈ ಆದೇಶದಿಂದ ಹಾಲಿ ಪ್ರಧಾನಿ ಕೆಪಿ ಶರ್ಮಾ ಓಲಿಗೆ ಭಾರೀ ಹಿನ್ನಡೆಯಾಗಿತ್ತು.

ಕೆಪಿ ಶರ್ಮಾ ಓಲಿ ಇತ್ತೀಚೆಗೆ ಬಹುಮತವನ್ನು ಕಳೆದುಕೊಂಡರೂ ಕೂಡ ಪ್ರಧಾನಿಯಾಗಿ ಮುಂದುವರಿದಿದ್ದರು. ಕಳೆದ ಮೇ 22 ರಂದು 275 ಸದಸ್ಯರ ಸಂಸತ್‌ ಅನ್ನು ಕೆಪಿ ಶರ್ಮಾ ಓಲಿ ಶಿಫಾರಸ್ಸು ಮೇರೆಗೆ ವಿಸರ್ಜಿಸಿ ರಾಷ್ಟ್ರಪತಿಗಳು ಆದೇಶಿಸಿದ್ದರು.

blank
ಕೆ.ಪಪಿ. ಶರ್ಮಾ, ಮಾಜಿ ಪ್ರಧಾನಿ, ನೇಪಾಳ

The post ನೇಪಾಳ ರಾಜಕೀಯ ಬಿಕ್ಕಟ್ಟು; ನಾಳೆ ನೂತನ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೇವುಬಾ ಪ್ರಮಾಣ ವಚನ appeared first on News First Kannada.

Source: newsfirstlive.com

Source link