ಕರುನಾಡ ಚಕ್ರವರ್ತಿಗೆ ಬರ್ತ್​ಡೇ ಗಿಫ್ಟ್; ನೂತನ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಕರುನಾಡ ಚಕ್ರವರ್ತಿಗೆ ಬರ್ತ್​ಡೇ ಗಿಫ್ಟ್; ನೂತನ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್​ ಕುಮಾರ್ ಹುಟ್ಟುಹಬ್ಬದಂದು A r k ಪ್ರೊಡಕ್ಷನ್ಸ್ ಲಾಂಛನದಲ್ಲಿ ಚೌಧರಿ ಅವರು ನಿರ್ಮಿಸುತ್ತಿರುವ, ನೂತನ ಚಿತ್ರದ ಮೋಷನ್ ಪೋಸ್ಟರ್ A2 music ಮೂಲಕ ಬಿಡುಗಡೆಯಾಗಿದೆ.

ಶಿವರಾಜಕುಮಾರ್ ನಾಯಕರಾಗಿ ಅಭಿನಯಿಸಲಿರುವ ಈ ಚಿತ್ರವನ್ನು ಕೊಟ್ರೇಶ್ ಚಪ್ಪರದಹಳ್ಳಿ ನಿರ್ದೇಶಿಸುತ್ತಿದ್ದಾರೆ. ಎ.ಹರ್ಷ, ಯೋಗಿ
ಜಿ ರಾಜ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಕೊಟ್ರೇಶ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ನನ್ನಂತಹ ಹೊಸ ನಿರ್ದೇಶಕನ ಚಿತ್ರದಲ್ಲಿ ಶಿವಣ್ಣನಂತಹ ಮೇರು ನಟ ಅಭಿನಯಿಸಲು ಒಪ್ಪಿರುವುದು ನಿಜಕ್ಕೂ ಸಂತಸ ತಂದಿದೆ ಎನ್ನುತ್ತಾರೆ ಕೊಟ್ರೇಶ್ ಚಪ್ಪರದಹಳ್ಳಿ. ಶಿವರಾಜಕುಮಾರ್ ಅವರ ಹುಟ್ಟುಹಬ್ಬದಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ನೂತನ ಚಿತ್ರದ ಚಟುವಟಿಕೆಗಳಿಗೆ ಚಾಲನೆ ನೀಡಿದ್ದೀವಿ.‌ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ನೀಡುವುದಾಗಿ ಕೊಟ್ರೇಶ್ ತಿಳಿಸಿದ್ದಾರೆ.

The post ಕರುನಾಡ ಚಕ್ರವರ್ತಿಗೆ ಬರ್ತ್​ಡೇ ಗಿಫ್ಟ್; ನೂತನ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ appeared first on News First Kannada.

Source: newsfirstlive.com

Source link