‘ನಾನು ಮೈಸೂರು ಸಂಸ್ಥಾನದ ಅರಸರ ಸಂಬಂಧಿ’ ಎನ್ನುತ್ತಿದ್ದ ಈತ ಮಾಡಿದ್ದೆಂತಾ ಮೋಸ ಗೊತ್ತಾ..?

‘ನಾನು ಮೈಸೂರು ಸಂಸ್ಥಾನದ ಅರಸರ ಸಂಬಂಧಿ’ ಎನ್ನುತ್ತಿದ್ದ ಈತ ಮಾಡಿದ್ದೆಂತಾ ಮೋಸ ಗೊತ್ತಾ..?

ಮೈಸೂರು ಅರಸರ ಸಂಬಂಧಿ ಎಂದು ಹೇಳಿಕೊಂಡು ದೋಖಾ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಸಿದ್ದಾರ್ಥ್ ಬಂಧಿತ ಆರೋಪಿ. ಈತ ಮ್ಯಾಟ್ರಿಮೋನಿ ಸೈಟ್​​ನಲ್ಲಿ ಮೋಸ ಮಾಡ್ತಿದ್ದ ಎನ್ನಲಾಗಿದೆ.

ಸಂಗಮ್​ ಮ್ಯಾಟ್ರಿಮೋನಿ ಹಾಗೂ ಕನ್ನಡ ಮ್ಯಾಟ್ರಿಮೋನಿ ವೆಬ್​ಸೈಟ್​​ಗಳಲ್ಲಿ ಪ್ರೊಫೈಲ್ ಸೃಷ್ಟಿಸಿ ನಾನು ಯುಎಸ್​ಎ ನಲ್ಲಿ ಮೈಕ್ರೋಸಾಫ್ಟ್ ಎಂಜಿನಿಯರ್ ಆಗಿದ್ದೇನೆ.. ನಾನು ಮೈಸೂರು ಸಂಸ್ಥಾನದ ರಾಜವಂಶಸ್ಥ.. ನನ್ನ ಹೆಸರು ಸಿದ್ಧಾರ್ಥ್ ಅರಸ್ ಎಂದು ಹೇಳಿಕೊಂಡು ಈತ ಮೋಸ ಮಾಡುತ್ತಿದ್ದನಂತೆ.

ಸಿದ್ದಾರ್ಥ್ ಅರಸ್ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಮ್ಯಾಟ್ರಿಮೋನಿ ವೆಬ್​ಸೈಟ್​​ನಲ್ಲಿ ಹುಡುಗಿಯರ ಜೊತೆ ಚಾಟ್ ಮಾಡ್ತಿದ್ದ.. ರಾಜವಂಶಸ್ಥರ ಜೊತೆ ಇರುವ ಯಾವುದೋ ಚಿಕ್ಕ ಹುಡುಗನ ಫೋಟೋ ಕಳುಹಿಸಿ ಯುಎಸ್​, ಸ್ಪಾನಿಷ್ ಭಾಷೆಯಲ್ಲಿ ಮಾತನಾಡಿ ಹುಡುಗಿಯರ ಬಳಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಳ್ತಿದ್ದನಂತೆ.

ಈತನಿಗೆ ಮೂರು ಹೆಸರು ಸಿದ್ದಾರ್ಥ್ @ ಸ್ಯಾಂಡಿ @ ವಿನಯ್ ಎಂಬ ಮೂರು ಹೆಸರುಗಳಿದ್ದು ಈತನ ವಿರುದ್ಧ ವೈಟ್​ಫೀಲ್ಡ್ ಸೈಬರ್ ಸ್ಟೇಷನ್​ನಲ್ಲಿ ದೂರು ದಾಖಲಾಗಿತ್ತು.. ತನಿಖೆ ನಡೆಸಿ ಮೈಸೂರಿನಲ್ಲಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸಿದ್ದಾರ್ಥ್ ನಿಂದ ಒಂದು ಆ್ಯಪಲ್ ಐ ಫೋನ್.. ಒಂದು ಆ್ಯಪಲ್ ಐ ಪೋನ್ 12 pro max.. ಒಂದು ಸ್ಯಾಮ್ ಸಂಗ್ ನೋಟ್ 9 ಫೋನ್.. ಎಸ್​ಬಿಐ ಬ್ಯಾಂಕ್ ಡೆಬಿಟ್ ಕಾರ್ಡ್.. ಕೊಟಕ್ ಮಹೀಂದ್ರ ಬ್ಯಾಂಕ್​ನ ಡೆಬಿಟ್ ಕಾರ್ಡ್.. 2 ಹೆಚ್ ಡಿಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್.. 2 ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ನಗರದ ಬೇರೆ ಬೇರೆ ಸೈಬರ್ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ ಎನ್ನಲಾಗಿದೆ.

The post ‘ನಾನು ಮೈಸೂರು ಸಂಸ್ಥಾನದ ಅರಸರ ಸಂಬಂಧಿ’ ಎನ್ನುತ್ತಿದ್ದ ಈತ ಮಾಡಿದ್ದೆಂತಾ ಮೋಸ ಗೊತ್ತಾ..? appeared first on News First Kannada.

Source: newsfirstlive.com

Source link