ಬಿಜೆಪಿ, ಆರ್​ಎಸ್​ಎಸ್​ ನಾಯಕರ ಜೊತೆ ಕಾಣಿಸಿಕೊಂಡ ಹೊರಟ್ಟಿ.. ಕುತೂಹಲ ಕೆರಳಿಸಿತು ಭೇಟಿ

ಬಿಜೆಪಿ, ಆರ್​ಎಸ್​ಎಸ್​ ನಾಯಕರ ಜೊತೆ ಕಾಣಿಸಿಕೊಂಡ ಹೊರಟ್ಟಿ.. ಕುತೂಹಲ ಕೆರಳಿಸಿತು ಭೇಟಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಭಾವಿ ಜೆಡಿಎಸ್​ನ ನಾಯಕ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಿನ್ನೆ ಸಂಜೆ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದಾರೆ.. ಕೇವಲ ಕಾಣಿಸಿಕೊಂಡಿದ್ದು ಮಾತ್ರವಲ್ಲ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಆರ್​ಎಸ್​ಎಸ್ ನ ಕೇಂದ್ರ ಕಚೇರಿ ಕೇಶವ ಕುಂಜಕ್ಕೆ ಭೇಟಿ ನೀಡುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ.

ಕೇವಲ ಬಿಜೆಪಿ ನಾಯಕರಲ್ಲದೆ ಆರ್​ಎಸ್​ಎಸ್​ನ ಕೆಲ ಮುಖಂಡರು ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವ ಪರಿಷತ್ ಸಭಾಪತಿಗಳ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

blank

ನಿನ್ನೆ ಹುಬ್ಬಳ್ಳಿ ಧಾರವಾಡಕ್ಕೆ ಡಿಸಿಎಂ ಅಶ್ವಥ್ ನಾರಾಯಣ ಭೇಟಿ ನೀಡಿದ್ರು..ಈ ವೇಳೆ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು..ಅದರಲ್ಲಿ ವಿಧಾನ ಪರಿಷತ್ ಸಭಾಪತಿಗಳೂ ಸಹ ಭಾಗಿಯಾಗಿದ್ರು, ಹುಬ್ಬಳ್ಳಿ ಧಾರವಾಡದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಷ್ಟೇ ಅಲ್ಲದೆ ಬಿಜೆಪಿಯ ಕೆಲ ಎಂ ಎಲ್ ಎ ಗಳು ಮತ್ತು ಕೆಲ ನಾಯಕರ ಜೊತೆ ಆರ್ ಎಸ್ ಎಸ್ ನ ಕಚೇರಿಗೆ ತೆರಳಿ ಉತ್ತರ ಪ್ರಾಂತ್ಯದ ಕಾರ್ಯವಾಹ ಶ್ರೀಧರ್ ನಾಡಿಗೇರ ಮತ್ತು ನಗರ ಕಾರ್ಯವಾಹ ಗೋವಿಂದಪ್ಪ ಗೌಡಪ್ಪಗೋಳ ಜೊತೆ ಕೆಲ ಕಾಲ ಚರ್ಚೆ ಮಾಡಿದ್ದಾರೆ

The post ಬಿಜೆಪಿ, ಆರ್​ಎಸ್​ಎಸ್​ ನಾಯಕರ ಜೊತೆ ಕಾಣಿಸಿಕೊಂಡ ಹೊರಟ್ಟಿ.. ಕುತೂಹಲ ಕೆರಳಿಸಿತು ಭೇಟಿ appeared first on News First Kannada.

Source: newsfirstlive.com

Source link