7 ವರ್ಷದಲ್ಲಿ 326 ಬಾರಿ.. ಎರಡೇ ತಿಂಗಳಲ್ಲಿ 38 ಬಾರಿ ಪೆಟ್ರೋಲ್-​ಡೀಸೆಲ್​​ ಬೆಲೆ ಏರಿಕೆ; ಖರ್ಗೆ ಕಿಡಿ

7 ವರ್ಷದಲ್ಲಿ 326 ಬಾರಿ.. ಎರಡೇ ತಿಂಗಳಲ್ಲಿ 38 ಬಾರಿ ಪೆಟ್ರೋಲ್-​ಡೀಸೆಲ್​​ ಬೆಲೆ ಏರಿಕೆ; ಖರ್ಗೆ ಕಿಡಿ

ನವದೆಹಲಿ: ಭಾರತದಲ್ಲಿ ಮುಂದುವರಿದ ತೈಲ ಬೆಲೆ ಏರಿಕೆ ನಾಗಾಲೋಟದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಈ ಸಂಬಂಧ ಮಾತಾಡಿರುವ ಮಲ್ಲಿಕಾರ್ಜುನ್​​ ಖರ್ಗೆ.. 2014 ರಿಂದ ಸುಮಾರು 326 ಬಾರಿ ಪೆಟ್ರೋಲ್​​ ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಖಂಡನೀಯ ಎಂದಿದ್ದಾರೆ.

ಮುಂದುವರೆದು.. ಕಳೆದ ಎರಡು ತಿಂಗಳಿನಲ್ಲ್ಲೇ ಪೆಟ್ರೋಲ್​-ಡೀಸೆಲ್​​ ದರವನ್ನ 38 ಬಾರಿ ಏರಿಸಲಾಗಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾದ ಕಾರಣ ಭಾರತದಲ್ಲೂ ಪೆಟ್ರೋಲ್​ ಡೀಸೆಲ್​​​ ದರ ಏರಿಕೆಯಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

blank

ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದರಿಂದಲೇ ಹೀಗೆ ಬೆಲೆ ಏರಿಕೆಯಾಗುತ್ತಿದೆ. ಒಂದು ಇಂಧನದ ಮೇಲಿನ ಸುಂಕ ಇಳಿಸಿದ್ದರೆ, ಇಂದು ಪೆಟ್ರೋಲ್​-ಡೀಸೆಲ್​​ ಬೆಲೆ ಏರಿಕೆಯಾಗುತ್ತಿರಲಿಲ್ಲ. ಕೇಂದ್ರ ಸರ್ಕಾರವೀಗ ಸುಂಕದೊಂದಿಗೆ ಸೆಸ್​​ ಕೂಡ ವಿಧಿಸಿದೆ. ಯಾವುದೇ ರಾಜ್ಯಕ್ಕೂ ಈ ಸೆಸ್​ ಹಣ ಬರುವುದಿಲ್ಲ, ನೇರ ಕೇಂದ್ರದ ಖಾತೆಗೆ ಹೋಗುತ್ತಿದೆ ಎಂದು ಹೇಳಿದರು.

The post 7 ವರ್ಷದಲ್ಲಿ 326 ಬಾರಿ.. ಎರಡೇ ತಿಂಗಳಲ್ಲಿ 38 ಬಾರಿ ಪೆಟ್ರೋಲ್-​ಡೀಸೆಲ್​​ ಬೆಲೆ ಏರಿಕೆ; ಖರ್ಗೆ ಕಿಡಿ appeared first on News First Kannada.

Source: newsfirstlive.com

Source link