ಕೊರೊನಾ ಪಾಸಿಟಿವ್​ ಬಂತೆಂದು ಎಸ್ಕೇಪ್​ ಆಗಿದ್ದ 96,000 ಜನರು ಪತ್ತೆ.. 400 ಮಂದಿ ಈಗಲೂ ಮಿಸ್ಸಿಂಗ್

ಕೊರೊನಾ ಪಾಸಿಟಿವ್​ ಬಂತೆಂದು ಎಸ್ಕೇಪ್​ ಆಗಿದ್ದ 96,000 ಜನರು ಪತ್ತೆ.. 400 ಮಂದಿ ಈಗಲೂ ಮಿಸ್ಸಿಂಗ್

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ರೆ, ಮತ್ತೊಂದೆಡೆ ಸೋಂಕಿತರು ನಾಪತ್ತೆಯಾಗ್ತಿದ್ರು. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲೇ ಹೆಚ್ಚು ಮಂದಿ ನಾಪತ್ತೆ‌ಯಾಗಿದ್ದರು. ಈ ನಡುವೆ ಪೊಲೀಸ್ರಿಗೆ ಸಿಕ್ಕವರು ಎಷ್ಟು ಮಂದಿ ಗೊತ್ತಾ?

ಕೊರೊನಾ.. ಹೆಸ್ರು ಕೇಳಿದ್ರೆನೆ ಒಂದು ಸಮಯದಲ್ಲಿ ಎಲ್ಲರೂ ಬೆಚ್ಚಿ ಬೀಳ್ತಿದ್ರು. ಇನ್ನು ತಮಗೆ ಹೆಮ್ಮಾರಿ ತಗುಲಿದೆ ಅಂದಾಕ್ಷಣ ಅದೆಷ್ಟೋ ಸೋಂಕಿತರು ಹೆದರಿ ಹೇಳದೆ ಕೇಳದೆ ನಾಪತ್ತೆಯಾಗ್ಬಿಟ್ಟಿದ್ರು. ತಪ್ಪಿಸಿಕೊಂಡವರ ಬೆನ್ನತ್ತಿದ್ದ ಕೇಂದ್ರ ವಿಭಾಗದ ಪೊಲೀಸರು ಬಹುತೇಕ ಸೋಂಕಿತರನ್ನ ಪತ್ತೆ ಹಚ್ಚಿದ್ದಾರೆ.

ಕೊರೊನಾ ಬಂದಿದೆ ಅಂದ ತಕ್ಷಣ ಯಾರಿಗೂ ಸಿಗದಂತೆ ಹಲವು ಸೋಂಕಿತರು ತಪ್ಪಿಸಿಕೊಂಡು ಹೋಗಿದ್ರು. ಅದ್ರಲ್ಲೂ ಮೊದಲ ಅಲೆಗಿಂತ ಎರಡನೇ ಅಲೆಯಲ್ಲೇ ಸೋಂಕಿತರು ಕಣ್ತಪ್ಪಿಸಿಕೊಂಡಿದ್ರು. ಈ ವೇಳೆ ಸೋಂಕಿತರನ್ನ ಹುಡುಕೋ ಟಾರ್ಗೆಟ್ನ್ನ​ ಬಿಬಿಎಂಪಿ ಪೊಲೀಸರಿಗೆ ನೀಡಿತ್ತು. ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ನೀಡಿದ ಪಟ್ಟಿ ಮೇರೆಗೆ ಕಾರ್ಯಾಚರಣೆ ಮಾಡಿದ್ದರು. ಸದ್ಯ ಪೊಲೀಸರು ನಾಪತ್ತೆಯಾಗಿದ್ದ 96 ಸಾವಿರ ಜನರನ್ನ ಪತ್ತೆ ಹಚ್ಚಿದ್ದಾರೆ.

ನಾಪತ್ತೆಯಾಗಿದ್ದ ಸೋಂಕಿತರು
ಒಟ್ಟು ನಾಪತ್ತೆಯಾದವರು- 96,400
ಮೊದಲ ಅಲೆಯಲ್ಲಿ- 31,088
ಎರಡನೇ ಅಲೆಯಲ್ಲಿ- 65, 312
ಪತ್ತೆಯಾದವರು- 96,000
ಪತ್ತೆಯಾಗದವರು- 400

ಟೆಸ್ಟಿಂಗ್​ ವೇಳೆ ಕೆಲ ಸೋಂಕಿತರು ತಪ್ಪು ನಂಬರ್​ ನೀಡಿದ್ದರು. ಕೆಲವರು ನಂಬರ್​ ಕೊಟ್ರೂ, ಮೆಸೇಜ್​ ಬಂದ ಕೊಡಲೇ ಸ್ವೀಚ್​ ಆಫ್​ ಮಾಡ್ಕೊಂಡಿದ್ರು. ವಿಳಾಸವನ್ನೇ ಬಿಟ್ಟು ಬೇರೆಡೆ ಹೋಗಿರೋದು ಕೂಡ ಬೆಳಕಿಗೆ ಬಂದಿತ್ತು. ಫೋನ್ ಸಿಡಿಆರ್, ಲೊಕೇಶನ್ ಆಧಾರದ ಮೇಲೆ ಹುಡುಕಾಟ ಆರಂಭಿಸಲಾಗಿತ್ತು. ಪೊಲೀಸರು ಟೆಸ್ಟ್ ವೇಳೆ ನೀಡಿದ್ದ ನಂಬರ್ ಟ್ರೆಸಿಂಗ್ ಮಾಡಿದ್ದರು. ಸ್ವಿಚ್ ಆಫ್ ಅಗಿದ್ರಿಂದ ರೋಗಿ ನೀಡಿದ್ದ ವಿಳಾಸದಲ್ಲಿ ಹುಡುಕಾಟ ನಡೆಸಿದ್ದರು. ಏರಿಯಾ ಹಾಗೂ ಮನೆಗಳಲ್ಲಿ ಹುಡುಕಾಟ ನಡೆಸಿದ್ದರು.

ಈಗಾಗಲೇ 96 ಸಾವಿರ ಸೋಂಕಿತರನ್ನ ಪೊಲೀಸರು ಪತ್ತೆ ಮಾಡಿದ್ದು, ಸದ್ಯ 400 ಮಂದಿ ಸೊಂಕಿತರ ಬಗ್ಗೆ ಪೊಲೀಸರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ನಾಪತ್ತೆಯಾಗಿರೋ ನಾನೂರು ಮಂದಿ ಸೋಂಕಿತರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

The post ಕೊರೊನಾ ಪಾಸಿಟಿವ್​ ಬಂತೆಂದು ಎಸ್ಕೇಪ್​ ಆಗಿದ್ದ 96,000 ಜನರು ಪತ್ತೆ.. 400 ಮಂದಿ ಈಗಲೂ ಮಿಸ್ಸಿಂಗ್ appeared first on News First Kannada.

Source: newsfirstlive.com

Source link