ಖಾರದ ಪುಡಿ ಎರಚಿ ಸರ ಕದ್ದು ಕಳ್ಳ ಪರಾರಿ

ನೆಲಮಂಗಲ: ಬಿಸ್ಕತ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ಕಳ್ಳ ಮಹಿಳೆ ಮೇಲೆ ಖಾರದ ಪುಡಿ ಎರಚಿ, ಸರವನ್ನ ಕ್ಷಣಾರ್ಧದಲ್ಲಿ ಕಸಿದು ನಾಪತ್ತೆಯಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ದಕ್ಷಿಣಕಾಶಿ ಶಿವಗಂಗೆಯಲ್ಲಿನ, ನಂದಿನಿ ಪಾರ್ಲರ್ ಮಾಲಿಕೆ ಮಹಿಳೆಯ ಸರ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಸುಮಾರು 2 ಲಕ್ಷ ಬೆಲೆಬಾಳುವ 60 ಗ್ರಾಂ ತೂಕದ ಚಿನ್ನದ ಸರವಾಗಿದ್ದು, ನಂದಿನಿ ಪಾರ್ಲರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಸಂತ ಕುಮಾರಿ ಎಂಬ ಮಹಿಳೆಯ ಸರ ಕಳವಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ನೆಲಮಂಗಲ ಸಿಪಿಐ ಹರೀಶ್ ಸ್ಥಳ ಭೇಟಿ ನಡೆಸಿ ತನಿಖೆ ಕೈಗಿತ್ತುಕೊಂಡಿದ್ದಾರೆ. ಇದನ್ನೂ ಓದಿ:  ಮಗಳ ಸಾವಿನ ಸುದ್ದಿ ಕೇಳಿ ತಂದೆ ಹೃದಯಾಘಾತದಿಂದ ಸಾವು

ಈ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀ ಕ್ಷೇತ್ರ ಶಿವಗಂಗೆಯಲ್ಲಿ ಪೊಲೀಸರ ಸಂಖ್ಯೆ ಹೆಚ್ಚಿಸಬೇಕು ಹಾಗೂ ಪೊಲೀಸ್ ಗಸ್ತು ಹೆಚ್ಚಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ:  ಹೋರಿಯ ಹುಟ್ಟು ಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ

ಕೆಲವು ದಿನಗಳಿಂದ ಡಾಬಸ್ ಪೇಟೆ ಭಾಗದಲ್ಲಿ ಒಂದಲ್ಲಾ ಒಂದು ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತಿದ್ದು, ಜನರು ಆತಂಕದಿಂದ ಜೀವನ ನಡೆಸುವ ಪರಿ ಎದುರಾಗಿದೆ. ಇತ್ತ ಜನ ನಿಬಿಡ ಪ್ರದೇಶದಲ್ಲಿ ಇಂತಹ ಕೃತ್ಯಗಳು ನಡೆಯುತಿದ್ದು, ಪೊಲೀಸರು ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇತ್ತ ಸರ ಕಳೆದುಕೊಂಡ ಮಹಿಳೆ ವಸಂತ ಕುಮಾರಿ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

The post ಖಾರದ ಪುಡಿ ಎರಚಿ ಸರ ಕದ್ದು ಕಳ್ಳ ಪರಾರಿ appeared first on Public TV.

Source: publictv.in

Source link