ಹೋರಿಯ ಹುಟ್ಟು ಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಸದಾ ಒಂದಲ್ಲ ಎಂದು ವಿಚಾರದಲ್ಲಿ ಸುದ್ದಿಯಾಗುತ್ತಿರುವ ರೇಣುಕಾಚಾರ್ಯ ಈಗ ದಾವಣಗೆರೆಯಲ್ಲಿ ಹೋರಿ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕವಾಗಿ ಮತ್ತೆ ಸುದ್ದಿಯಾಗಿದ್ದಾರೆ.

ಹೋರಿ ಮಾಲೀಕನೋರ್ವ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಹೋರಿ ಹುಟ್ಟುಹಬ್ಬವನ್ನು ಆಚರಿಸಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಹೊನ್ನಾಳಿ ಹೋರಿ ರೇಣುಕಾಚಾರ್ಯಗೆ ಡಿಚ್ಚಿ ಹೊಡೆದ ರಿಯಲ್ ಹೋರಿ

ಹೋರಿ ಹುಟ್ಟುಹಬ್ಬ ಆಚರಿಸಿದ ಎಂ.ಪಿ ರೇಣುಕಾಚಾರ್ಯ ತೀರ್ಥಗಿರಿ ಡಾನ್ ಎಂಬ ಕೊಬ್ಬರಿ ಹೋರಿಯ ಮಾಲೀಕ ಮಂಜುನಾಥ್, ಕೇಕ್ ಕತ್ತರಿಸಿ ತಮ್ಮ ಪ್ರೀತಿಯ ಹೋರಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದೇ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸಹ ಖುದ್ದಾಗಿ ಕೇಕ್ ಕತ್ತರಿಸಿ ಹೋರಿ ಹುಟ್ಟುಹಬ್ಬಕ್ಕೆ ಸಂತಸ ವ್ಯಕ್ತಪಡಿಸಿದರು.ಇದನ್ನೂ ಓದಿ: ಮತ್ತೊಮ್ಮೆ ಹೋರಿಯಿಂದ ತಪ್ಪಿಸಿಕೊಂಡ ರೇಣುಕಾಚಾರ್ಯ

ಕಳೆದ 14ವರ್ಷಗಳಿಂದ ಯಾರ ಕೈಗೂ ಕೊಬ್ಬರಿ ಕೀಳಲು ಸಿಗದೆ ತೀರ್ಥಗಿರಿ ಡಾನ್ ತನ್ನ ಮಾಲೀಕನಿಗೆ ಸಾಕಷ್ಟು ಬಹುಮಾನ ತಂದು ಕೊಟ್ಟಿದೆ. ಹೀಗಾಗಿ ಬಲಿಷ್ಠ ಹೋರಿ ಹುಟ್ಟುಹಬ್ಬವನ್ನು ಶಾಸಕ ರೇಣುಕಾಚಾರ್ಯ ಕೈಯಲ್ಲಿ ಕೇಕ್ ಕತ್ತರಿಸುವ ಮೂಲಕ ಮಂಜುನಾಥ್ ವಿಶೇಷವಾಗಿ ಆಚರಿಸಿದ್ದಾರೆ.

The post ಹೋರಿಯ ಹುಟ್ಟು ಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ appeared first on Public TV.

Source: publictv.in

Source link