ಇದು ಅಂತಿಂಥ ಬರ್ಗರ್​ ಅಲ್ಲ.. ಲೇಟೆಸ್ಟ್ ಆಗಿ ಮಾರಾಟವಾಯ್ತು 4.5 ಲಕ್ಷ ರೂಪಾಯಿಗೆ

ಇದು ಅಂತಿಂಥ ಬರ್ಗರ್​ ಅಲ್ಲ.. ಲೇಟೆಸ್ಟ್ ಆಗಿ ಮಾರಾಟವಾಯ್ತು 4.5 ಲಕ್ಷ ರೂಪಾಯಿಗೆ

ನೆದರ್​ಲ್ಯಾಂಡ್ಸ್​: ತಿನ್ನೋ ಐಟಂ ಅಂದ್ರೆ ಜನರ ಕಿವಿ ಸ್ವಲ್ಪ ನೆಟ್ಟಿಗೆ ಆಗುತ್ತೆ. ಹೊಸ ಹೊಸ ಐಟಂಸ್​​ ತಿನ್ನೋದಕ್ಕೆ ಜನ ತುಂಬಾ ಇಷ್ಟ ಪಡ್ತಾರೆ. ಅದ್ರಲ್ಲೂ, ಈಗಿನ ಕಾಲದ ಮಕ್ಕಳಿಗೆ, ಪಿಜ್ಜಾ, ಬರ್ಗರ್​, ಫ್ರೆಂಚ್​ ಫ್ರೈಸ್​ ಈ ರೀತಿಯ ತಿನಿಸುಗಳು ಅಂದ್ರೆ, ‘ಹ್ಮ್​’ ಅಂತ ಶಬ್ಧ ಮಾಡ್ಕೊಂಡ್ ತಿಂತಾರೆ. ಅದ್ರಲ್ಲೂ ಫುಡ್​ ಬ್ಲಾಗರ್ಸ್​ ಮಾಡೋ ವಿಡಿಯೋಗಳನ್ನ ನೋಡ್ತಿದ್ರೆ, ಆ ಜಾಗಕ್ಕೆ ನಾವು ಹೋಗ್ಬೇಕು ಅಂತ ಅನ್ಸಿರುತ್ತೆ. ಇದೀಗ, ಅಂಥ ‘ಲಿಸ್ಟ್​’ಗಳಿಗೆ, ಜಗತ್ತಿನ ಅತ್ಯಂತ ದುಬಾರಿ ಬರ್ಗ​ರ್​ನ ಕೂಡ ಸೇರಿಸಿಕೊಳ್ಳಿ..

ಒಂದ್​ ಬರ್ಗರ್​ಗೆ 4ವರೆ ಲಕ್ಷ!
ಹೌದು ನೆದರ್​ಲ್ಯಾಂಡ್ಸ್​ನಲ್ಲಿ, ರಾಬರ್ಟ್​ ಜಾನ್​ ಡೇ ವೀನ್​ ಅನ್ನೋ ಚೆಫ್​, ಈ ‘ಗೋಲ್ಡನ್​ ಬಾಯ್​’ ಅನ್ನೋ ಬರ್ಗರ್​ನ ರೆಡಿ ಮಾಡಿದ್ದಾರೆ. ಈ ಬರ್ಗರ್​ನ ಬೆಲುಗಾ ಕ್ಯಾವಿಯರ್​, ಕಿಂಗ್​ ಕ್ರ್ಯಾಬ್​, ಸ್ಪಾನಿಶ್​ ಪಲೇಟಾ, ಚೀಸ್​, ಶಾಂಪೇಯನ್​ ಸೇರಿ ಇನ್ನು ಮುಂತಾದವನ್ನ ಹಾಕಿ ರೆಡಿ ಮಾಡಿದ್ದಾರೆ. ಅಲ್ಲದೇ, ಈ ಬರ್ಗರ್​ನ ಬೆಲೆ 5,000 ಯೂರೋ ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ 4.5 ಲಕ್ಷ ರೂಪಾಯಿ.

The post ಇದು ಅಂತಿಂಥ ಬರ್ಗರ್​ ಅಲ್ಲ.. ಲೇಟೆಸ್ಟ್ ಆಗಿ ಮಾರಾಟವಾಯ್ತು 4.5 ಲಕ್ಷ ರೂಪಾಯಿಗೆ appeared first on News First Kannada.

Source: newsfirstlive.com

Source link