ಮುಂದುವರಿದ ಸಿಡಿಲಿನ ರೌದ್ರಾವತಾರ.. ಉತ್ತರ ಭಾರತದಲ್ಲಿ ಮೃತರ ಸಂಖ್ಯೆ 76ಕ್ಕೆ ಏರಿಕೆ

ಮುಂದುವರಿದ ಸಿಡಿಲಿನ ರೌದ್ರಾವತಾರ.. ಉತ್ತರ ಭಾರತದಲ್ಲಿ ಮೃತರ ಸಂಖ್ಯೆ 76ಕ್ಕೆ ಏರಿಕೆ

ನವದೆಹಲಿ: ಉತ್ತರ ಭಾರತದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.

ಉತ್ತರ ಪ್ರದೇಶ, ರಾಜಸ್ತಾನ, ಮಧ್ಯ ಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆ, ಗುಡುಗು ಹಾಗೂ ಸಿಡಿಲಿನಿಂದ ಸಾವು ನೋವಿನ ಸಂಖ್ಯೆ ಏರಿಕೆಯಾಗ್ತಿದೆ. ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿ ಕನಿಷ್ಠ 42 ಮಂದಿ ಸಾವನ್ನಪ್ಪಿದ್ದು, ರಾಜಸ್ತಾನದ ಹಲವೆಡೆ ಸಿಡಿಲು ಬಡಿದು 20 ಮತ್ತು ಮಧ್ಯ ಪ್ರದೇಶದಲ್ಲಿ 7ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಅಂತಾ ವರದಿಯಾಗಿದೆ.

ಮೃತಪಟ್ಟವರ ಪೈಕಿ ರಾಜಸ್ತಾನದಲ್ಲಿ ನಾಲ್ಕು ಮಕ್ಕಳು ಸೇರಿ ಜಾನುವಾರುಗಳೂ ಮೃತಪಟ್ಟಿವೆ. ರಾಜಸ್ತಾನದ ಜೈಪುರ್​ನಲ್ಲಿ​ 11, ಧೌಲ್​ಪುರ್​ನಲ್ಲಿ 3, ಕೋಟಾದಲ್ಲಿ 4 ಸಾವನ್ನಪ್ಪಿದ್ದಾರೆ. ಝಾಲವಾಡ್, ಬಾರಾನಲ್ಲಿ ತಲಾ ಒಬ್ಬ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸಿಡಿಲಿಗೆ ಮೃತಪಟ್ಟ 20 ಜನರ ಪೈಕಿ ಏಳು ಜನ ಮಕ್ಕಳಿದ್ದಾರೆ ಅಂತಾ ವರದಿಯಾಗಿದೆ.

The post ಮುಂದುವರಿದ ಸಿಡಿಲಿನ ರೌದ್ರಾವತಾರ.. ಉತ್ತರ ಭಾರತದಲ್ಲಿ ಮೃತರ ಸಂಖ್ಯೆ 76ಕ್ಕೆ ಏರಿಕೆ appeared first on News First Kannada.

Source: newsfirstlive.com

Source link