ಭಾರತ-ಶ್ರೀಲಂಕಾ ಹಣಾಹಣಿಗೆ ಮುಹೂರ್ತ ಫಿಕ್ಸ್; ಹೇಗಿದೆ ವೇಳಾಪಟ್ಟಿ?

ಭಾರತ-ಶ್ರೀಲಂಕಾ ಹಣಾಹಣಿಗೆ ಮುಹೂರ್ತ ಫಿಕ್ಸ್; ಹೇಗಿದೆ ವೇಳಾಪಟ್ಟಿ?

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಟಿ-20 ಹಾಗೂ ಏಕದಿನ ಪಂದ್ಯಾವಳಿಗಳ ನೂತನ ವೇಳಾಪಟ್ಟಿಯನ್ನು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಬಿಡುಗಡೆ ಮಾಡಿದೆ.

ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್​ ಬೋರ್ಡ್ ತನ್ನ ಅಧಿಕೃತ ಟ್ವಟರ್​ನಲ್ಲಿ ಪೋಸ್ಟ್​ ಮಾಡಿ ಮಾಹಿತಿ ನೀಡಿದೆ. ಉಭಯ ತಂಡಗಳ ನಡುವಿನ 3 ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 18, 20 ಹಾಗೂ 23 ರಂದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ.

ಇನ್ನುಳಿದ 3 ಟಿ-20 ಪಂದ್ಯಾವಳಿಗಳು ಜುಲೈ 25, 27 ಹಾಗೂ 29 ರಂದು ರಾತ್ರಿ 8 ಗಂಟೆಗೆ ನಡೆಯಲಿವೆ ಅಂತಾ ತಿಳಿಸಲಾಗಿದೆ. ಶ್ರೀಲಂಕಾ ತಂಡದ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜುಲೈ 18ಕ್ಕೆ ಮುಂದೂಡಲಾಗಿತ್ತು.

The post ಭಾರತ-ಶ್ರೀಲಂಕಾ ಹಣಾಹಣಿಗೆ ಮುಹೂರ್ತ ಫಿಕ್ಸ್; ಹೇಗಿದೆ ವೇಳಾಪಟ್ಟಿ? appeared first on News First Kannada.

Source: newsfirstlive.com

Source link