ಪಾಕಿಸ್ತಾನಲ್ಲಿ ಮತ್ತೊಬ್ಬ ನಟಿಯ ಬರ್ಬರ ಕೊಲೆ; ಅರೆಬರೆ ಸುಟ್ಟ ರೀತಿಯಲ್ಲಿ ಮೃತದೇಹ ಪತ್ತೆ

ಪಾಕಿಸ್ತಾನಲ್ಲಿ ಮತ್ತೊಬ್ಬ ನಟಿಯ ಬರ್ಬರ ಕೊಲೆ; ಅರೆಬರೆ ಸುಟ್ಟ ರೀತಿಯಲ್ಲಿ ಮೃತದೇಹ ಪತ್ತೆ

ಪಾಕಿಸ್ತಾನಿ ನಟಿ ಹಾಗೂ ಮಾಡೆಲ್ ನಯಾಬ್ ನದೀಮ್ (29) ಅವರ ಬರ್ಬರ ಕೊಲೆಯಾಗಿದೆ ಅಂತಾ ವರದಿಯಾಗಿದೆ.

ಲಾಹೋರ್ ಹೊರವಲಯದ ಡಿಫೆನ್ಸ್ ಅಕಾಡೆಮಿಯ ಅಪಾರ್ಟಮೆಂಟ್ ಒಂದರಲ್ಲಿ ಅವರ ಶವ ಬೆತ್ತಲೆಯಾಗಿ, ಅರೆಬರೆ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಘಟನೆ ಶನಿವಾರವೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಾಡೆಲ್ ನಯಾಬ್ ನದೀಮ್ ಅವರನ್ನ ಕತ್ತು ಹಿಸುಕಿ, ಬಳಿಕ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಲಾಹೋರ್ ಪೊಲೀಸ್ ಅಧಿಕಾರಿ ನಯ್ಯಾರ್ ನಿಸಾರ್ ತಿಳಿಸಿದ್ದಾರೆ. 29 ವರ್ಷದ ನದೀಮ್ ಅವರು ಮದುವೆ ಆಗಿರಲಿಲ್ಲ, ಮನೆಯಲ್ಲಿ ಒಬ್ಬರೇ ವಾಸವಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣವನ್ನ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನ ಮಂದುವರಿಸಿದ್ದಾರೆ.

The post ಪಾಕಿಸ್ತಾನಲ್ಲಿ ಮತ್ತೊಬ್ಬ ನಟಿಯ ಬರ್ಬರ ಕೊಲೆ; ಅರೆಬರೆ ಸುಟ್ಟ ರೀತಿಯಲ್ಲಿ ಮೃತದೇಹ ಪತ್ತೆ appeared first on News First Kannada.

Source: newsfirstlive.com

Source link