ವಾರದ ಹಿಂದೆ ದುಬೈನಿಂದ ಉಡುಪಿಗೆ ಬಂದಿದ್ದ ಮಹಿಳೆ ನಿಗೂಢ ಸಾವು

ಉಡುಪಿ: ಒಂದು ವಾರದ ಹಿಂದೆ ದುಬೈನಿಂದ ಉಡುಪಿಗೆ ಬಂದಿದ್ದ ಮಹಿಳೆ ನಿಗೂಢವಾಗಿ ಕೊಲೆಯಾಗಿದ್ದಾರೆ. ಬ್ರಹ್ಮಾವರ ಸಮೀಪದ ಕುಂಬ್ರಗೋಡು ಅಪಾರ್ಟ್ ಮೆಂಟ್‍ನಲ್ಲಿ ಮಹಿಳೆಯ ಕುತ್ತಿಗೆಗೆ ವೈರ್ ಬಿಗಿದು, ದಿಂಬಿನಿಂದ ಉಸಿರುಗಟ್ಟಿಸಿ ದೃಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

35 ವರ್ಷದ ವಿಶಾಲ ಗಾಣಿಗ ಪತಿ ರಾಮಕೃಷ್ಣ ಗಾಣಿಗ ಹಾಗೂ ಪುತ್ರಿ ಜೊತೆ ದುಬೈನಲ್ಲಿ ವಾಸವಾಗಿದ್ದರು. ಕಳೆದ ಜೂನ್ 30ರಂದು ಉಡುಪಿಗೆ ಮಗಳ ಜೊತೆ ಆಗಮಿಸಿದ್ದರು. ತಂದೆ ಮನೆಯಲ್ಲಿ ಉಳಿದುಕೊಂಡಿದ್ದ ವಿಶಾಲ ಬ್ರಹ್ಮಾವರದಲ್ಲಿರೋ ಅಪಾರ್ಟ್ ಮೆಂಟ್‍ಗೆ ಹೋಗಿ ಬಳಿಕ ಬ್ಯಾಂಕ್ ಕೆಲಸ ಮುಗಿಸಿಕೊಂಡು ಬರೋದಾಗಿ ಹೇಳಿ ಹೋಗಿದ್ದರು. ಇದನ್ನೂ ಓದಿ: ಬಡ-ಮಧ್ಯಮ ವರ್ಗದವರಿಗೆ ದುಬಾರಿಯಾದ ನಂದಿಬೆಟ್ಟ – ಊಟ, ತಿಂಡಿ, ಕಾಫಿ ಸೇರಿದಂತೆ ಪ್ರವೇಶ ಶುಲ್ಕವೂ ಬಲು ದುಬಾರಿ

ಸಂಜೆಯಾದ್ರೂ ಮನೆಗೆ ಬಾರದ ಮಗಳನ್ನು ಹುಡುಕಿಕೊಂಡು ಬ್ರಹ್ಮಾವರಕ್ಕೆ ತಂದೆ ಬಂದಾಗ ಕೊಲೆ ಪ್ರಕರಣ ಬಯಲಾಗಿದೆ. ಬ್ರಹ್ಮಾವರ ಪೊಲೀಸರು ಪರಿಶೀಲನೆ ನಡೆಸಿದ್ದು ಹಣಕಾಸು ವಿಚಾರಕ್ಕೆ ಕೊಲೆ ಆಗಿರಬಹುದು ಅಂತ ಶಂಕಿಸಿದ್ದಾರೆ. ಅಪಾರ್ಟ್ ಮೆಂಟ್‍ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

blank

The post ವಾರದ ಹಿಂದೆ ದುಬೈನಿಂದ ಉಡುಪಿಗೆ ಬಂದಿದ್ದ ಮಹಿಳೆ ನಿಗೂಢ ಸಾವು appeared first on Public TV.

Source: publictv.in

Source link