ಯಾವ ಪಕ್ಷ ಸೇರ್ತಾರಂತೆ ಗೊತ್ತಾ ಜಾಕಿ ಚಾನ್​? -ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಯಾವ ಪಕ್ಷ ಸೇರ್ತಾರಂತೆ ಗೊತ್ತಾ ಜಾಕಿ ಚಾನ್​? -ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಇಂದು ಮಂಡ್ಯ ಪ್ರವಾಸ ಮಾಡಲಿರುವ ಸಂಸದೆ ಸುಮಲತಾ

blank
ಮಂಡ್ಯ ಕೆಆರ್​ಎಸ್ ಕದನ ಇನ್ನೂ ಮುಗಿಯುವ ಲಕ್ಷಣ ಕಾಣಿಸ್ತಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿರೋ ಸಂಸದೆ ಸುಮಲತಾ ಅಂಬರೀಶ್ 2 ದಿನಗಳ ಮಂಡ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಜಿಲ್ಲೆಯ ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗ್ತಿದೆ. ಹಾಗೆಯೇ ಕೆಆರ್‌ಎಸ್ ಜಲಾಶಯಕ್ಕೂ ಸುಮಲತಾ ಭೇಟಿ ನೀಡುವ ಸಾಧ್ಯತೆ ಇದೆ. ನಿನ್ನೆಯಷ್ಟೇ ಸಚಿವ ನಿರಾಣಿ ಅವರನ್ನ ಭೇಟಿ ಮಾಡಿ, ಮಂಡ್ಯ ಅಕ್ರಮ ಪ್ರದೇಶ ವೀಕ್ಷಣೆಗೆ ಮಾಡುವಂತೆ ಸುಮಲತಾ ಅಂಬರೀಶ್ ಒತ್ತಾಯ ಮಾಡಿದ್ರು. ಈ ವೇಳೆ ಶುಕ್ರವಾರ ಅಥವಾ ಮುಂದಿನ ದಿನಗಳಲ್ಲಿ ಬರುವುದಾಗಿ ಸಚಿವರು ಹೇಳಿದ್ದಾರೆ ಅಂತ ಹೇಳಲಾಗ್ತಿದೆ.

ಕೊರೊನಾಗೆ ಡೋಂಟ್​​ ಕೇರ್​, ಬರ್ತ್​ಡೇ ಸೆಲಬ್ರೇಷನ್
ಕಾಂಗ್ರೆಸ್​ನ ಮಾಜಿ ಶಾಸಕ ಬರ್ತ್​ಡೇ ಆಚರಣೆಗಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್​ನಲ್ಲಿ ಜಗಳೂರಿಗೆ ತೆರಳಿ ಜನರನ್ನ ಗುಂಪು ಗುಂಪಾಗಿ ಸೇರಿಸಿದ್ದಾರೆ. ಇತ್ತೀಚೆಗಷ್ಟೇ ಕೊರೊನಾದಿಂದ ಗುಣಮುಖರಾಗಿದ್ದ ಮಾಜಿ ಶಾಸಕ ಎಚ್ ಪಿ ರಾಜೇಶ್, ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ರೂ ಸಹ ಈ ರೀತಿ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಬರ್ತ್​ಡೇ ನೆಪದಲ್ಲಿ ಜಗಳೂರಿನ ಖಾಸಗಿ ಹಾಲ್​​ನಲ್ಲಿ ನೂರಾರು ಜನರನ್ನು ಸೇರಿಸಿ, ಕೊರೊನಾ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಇನ್ನು ಹುಟ್ಟುಹಬ್ಬ ಆಚರಣೆ ವೇಳೆ ಜನರು ಯಾವುದೇ ರೀತಿಯ ಸಾಮಾಜಿಕ ಅಂತರವಿಲ್ಲದೇ, ಕೆಲವರು ಮಾಸ್ಕ್​ ಅನ್ನೂ ಧರಿಸದೇ ಇದ್ದದ್ದು ಕಂಡು ಬಂತು

ಈಶಾನ್ಯ ರಾಜ್ಯಗಳ ಸಿಎಂ ಜೊತೆ ಮೋದಿ ಮೀಟಿಂಗ್​

blank
ದೇಶದ ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ ಮಾಡಲಿದ್ದಾರೆ.. ಇಂದು ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ಅಸ್ಸಾಂ, ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೊರೊನಾ ಸ್ಥಿತಿಗತಿ ಕುರಿತ ಚರ್ಚೆಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.. ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ರಾಜ್ಯಗಳಲ್ಲಿನ ಕೊರೊನಾ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿಯವರು ಚರ್ಚಿಸಲಿದ್ದಾರೆ.

ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಸಂವಾದ
ಜಪಾನ್​​ನ ಟೊಕಿಯೋದಲ್ಲಿ ನಡೆಯಲಿರೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಭರ್ಜರಿ ಸಿದ್ಧತೆ ನಡೆಸಿದೆ. ಇದೇ ಹೊತ್ತಲ್ಲೇ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಲು ಭಾರತೀಯ ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕೇಂದ್ರ ರಾಜ್ಯ ಯುವ ವ್ಯವಹಾರ ಮತ್ತು ಕ್ರೀಡೆ ನಿಸಿತ್ ಪ್ರಮಾಣಿಕ್ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ನಡೆದ ಮನ್‌ಕಿ ಬಾತ್ ಕಾರ್ಯಕ್ರಮದಲ್ಲೂ ಕ್ರೀಡಾಪಟುಗಳ  ಸ್ಫೂರ್ತಿದಾಯದ ಪಯಣದ ಬಗ್ಗೆ ಚರ್ಚಿಸಿದ್ರು.

ಉತ್ತರ ಭಾರತದಲ್ಲಿ ಸಿಡಿಲಿನ ಅಬ್ಬರಕ್ಕೆ 75 ಮಂದಿ ಸಾವು

blank
ಉತ್ತರ ಭಾರತದ ವರುಣನ ಅಟ್ಟಹಾಸದಿಂದ ಸಾವನ್ನಪ್ಪಿದವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶ, ರಾಜಸ್ತಾನ, ಮಧ್ಯ ಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆ, ಗುಡುಗು ಹಾಗೂ ಸಿಡಿಲಿನಿಂದ ಸಾವು ನೋವಿನ ಸಂಖ್ಯೆ ಏರಿಕೆಯಾಗ್ತಿದೆ. ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿ ಕನಿಷ್ಠ 41 ಮಂದಿ ಸಾವನ್ನಪ್ಪಿದ್ದು, ರಾಜಸ್ತಾನದ ಹಲವೆಡೆ ಸಿಡಿಲು ಬಡಿದು 20 ಮತ್ತು ಮಧ್ಯ ಪ್ರದೇಶದಲ್ಲಿ 7ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು, ಮೃತಪಟ್ಟವರ ಪೈಕಿ ರಾಜಸ್ತಾನದಲ್ಲಿ ನಾಲ್ಕು ಮಕ್ಕಳು ಸೇರಿ ಜಾನುವಾರುಗಳೂ ಮೃತಪಟ್ಟಿವೆ. ಸಾವು ಸಂಭವಿಸಿರುವ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್​ ತಂತ್ರ

blank
ಜುಲೈ 19ರಿಂದ ಪ್ರಾರಂಭವಾಗುವ ಮಾನ್ಸೂನ್ ಅಧಿವೇಶನ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆ ಕರೆದಿದ್ದಾರೆ. ನಾಳೆ ಪಕ್ಷದ ಸಂಸದೀಯ ಕಾರ್ಯತಂತ್ರ ಸಮೂಹದ ಸಭೆಯು ವರ್ಚ್ಯುವಲ್ ಮೂಲಕ ನಡೆಯಲಿದೆ. ಕೊರೊನಾ ಸಾಂಕ್ರಾಮಿಕ, ವ್ಯಾಕ್ಸಿನೇಷನ್​ ಅಭಿಯಾನ, ಕೋವಿಡ್‌ ಮೂರನೇ ಅಲೆ ತಯಾರಿ, ಹೆಚ್ಚುತ್ತಿರುವ ಇಂಧನ ಬೆಲೆ , ಹಣದುಬ್ಬರ, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ನೀಡುವುದು, ಆರ್ಥಿಕ ಪರಿಸ್ಥಿತಿ ದೇಶ ಮತ್ತು ನಿರುದ್ಯೋಗ ಸಂಬಂಧ ಆಡಳಿತ ಪಕ್ಷವನ್ನು ಕಟ್ಟಿಹಾಕಲು ತಂತ್ರ ಹೆಣೆಯಲು ಕಾಂಗ್ರೆಸ್​​ ಮುಂದಾಗಿದೆ.

‘ಜನಸಂಖ್ಯೆ ಅಸಮತೋಲನಕ್ಕೆ ಅಮೀರ್​​​ರಂತವರೇ ಕಾರಣ’
2ನೇ ಪತ್ನಿಗೂ ಡಿವೋರ್ಸ್​ ನೀಡಿರುವ ಬಾಲಿವುಡ್ ನಟ ಅಮೀರ್ ಖಾನ್​ ವಿರುದ್ಧ ಮಧ್ಯಪ್ರದೇಶದ ಬಿಜೆಪಿ ಸಂಸದ ಸುಧೀರ್ ಗುಪ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸುಧೀರ್, ದೇಶದ ಜನಸಂಖ್ಯೆಯ ಅಸಮತೋಲನಕ್ಕೆ ಅಮೀರ್ ಖಾನ್ ಅವರಂತಹ ಜನ ಹೊಣೆಗಾರರು ಎಂದಿದ್ದಾರೆ. ಅಮೀರ್​ಗೆ ಇಬ್ಬರು ಮಕ್ಕಳು ಇರುವ ಮೊದಲ ಪತ್ನಿ ರೀನಾ ದತ್ತಾರನ್ನು ತೊರೆದರು. ಬಳಿಕ ಒಂದು ಮಗುವಿನೊಂದಿಗೆ ಕಿರಣ್ ರಾವ್ ತೊರೆದರು. ಈಗ ಅಜ್ಜನಾಗುವ ವಯಸ್ಸಿನಲ್ಲಿ ಅವರು ಮೂರನೇ ಪತ್ನಿಯನ್ನು ಹುಡುಕುತ್ತಿದ್ದಾರೆ ಎಂದಿದ್ದಾರೆ ಅಂತ ಹೊಸ ವಿವಾದ ಸೃಷ್ಟಿಸುವಂತಹ ಹೇಳಿಕೆ ನೀಡಿದ್ದಾರೆ..

ಇಂದು ನೇಪಾಳದ ನೂತನ ಪ್ರಧಾನಿ ಪ್ರಮಾಣ ವಚನ
ಸುಪ್ರೀಂಕೋರ್ಟ್​​ ಆದೇಶದಂತೆ ನೇಪಾಳದ ಮುಂದಿನ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೇವುಬಾರನ್ನು ನೇಮಕ ಮಾಡಲಾಗಿದೆ. ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರು ಇಂದು ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಳಿಕ ನೇಪಾಳ ಸರ್ಕಾರದ ಸಂಪುಟ ರಚನೆ ಮಾಡಲಾಗುತ್ತದೆ ಅಂತ ಮಾಜಿ ಪ್ರಧಾನಿ ಬಾಬುರಾಮ್​​ ಭಟ್ಟರಾಯ್​​​ ಹೇಳಿದ್ದಾರೆ.

ಪಾಕಿಸ್ತಾನಿ ನಟಿ ನಯಾಬ್ ನದೀಮ್ ಭೀಕರ ಕೊಲೆ

blank
ಪಾಕಿಸ್ತಾನಿ ನಟಿ ಹಾಗೂ ಮಾಡೆಲ್ ನಯಾಬ್ ನದೀಮ್ ಬರ್ಬರ ಕೊಲೆಯಾಗಿದೆ. ಲಾಹೋರ್ ಹೊರವಲಯದ ಡಿಫೆನ್ಸ್ ಅಕಾಡೆಮಿಯ ಅಪಾರ್ಟಮೆಂಟ್ ಒಂದರಲ್ಲಿ ಅವರ ಶವ ಬೆತ್ತಲೆಯಾಗಿ, ಅರೆಬರೆ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಘಟನೆ ಶನಿವಾರವೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಡೆಲ್ ನಯಾಬ್ ನದೀಮ್ ಅವರನ್ನ ಕತ್ತು ಹಿಸುಕಿ, ಬಳಿಕ ಭೀಕರವಾಗಿ ಕೊಲೆ ಮಾಡಲಾಗಿದೆ ಅಂತ ಲಾಹೋರ್ ಪೊಲೀಸ್ ಅಧಿಕಾರಿ ನಯ್ಯಾರ್ ನಿಸಾರ್ ತಿಳಿಸಿದ್ದಾರೆ.

ಸಿಪಿಸಿ ಸೇರುವ ಇಚ್ಛೆ ವ್ಯಕ್ತಪಡಿಸಿದ ಜಾಕಿ ಚಾನ್​

blank
ಸಮರ ಕಲೆಗಳ ಪ್ರತಿಭೆ ಮತ್ತು ವಿಶ್ವವೇ ಗುರುತಿಸಿದ, ಪ್ರಭಾವಶಾಲಿ ಚಲನಚಿತ್ರ ನಟ ಜಾಕಿ ಚಾನ್ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾಗೆ ಸೇರುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹಿಂದಿನ ಬ್ರಿಟಿಷ್ ವಸಾಹತು ಪ್ರದೇಶದಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳ ಮೇಲೆ ಬೀಜಿಂಗ್ ನಡೆಸಿದ ದಬ್ಬಾಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಜಾಕಿ ಚಾನ್ ಈ ಹಿಂದೆ ತೀವ್ರ ಟೀಕೆಗೆ ಗುರಿಯಾಗಿದ್ದರು. ಸದ್ಯ, ಈಗ ಬೀಜಿಂಗ್‌ನಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಸಿಪಿಸಿಗೆ ಸೇರ್ಪಡೆಗೊಳ್ಳುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ನಾನು ಸಿಪಿಸಿ ಸದಸ್ಯನಾಗಲು ಬಯಸುತ್ತೇನೆ ಎಂದಿರುವ ಅವರು ಚೀನಾ ಪ್ರಜೆ ಆಗಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಐದು-ನಕ್ಷತ್ರಗಳ ಕೆಂಪು ಧ್ವಜವನ್ನು ಜಗತ್ತಿನ ಎಲ್ಲೆಡೆ ಗೌರವಿಸಲಾಗುತ್ತಿದೆ ಎಂದು ತಮ್ಮ ದೇಶವನ್ನು ಕೊಂಡಾಡಿದ್ದಾರೆ.

The post ಯಾವ ಪಕ್ಷ ಸೇರ್ತಾರಂತೆ ಗೊತ್ತಾ ಜಾಕಿ ಚಾನ್​? -ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link