ಫೀಲ್ಡ್​ನಲ್ಲಿ ಕೊಹ್ಲಿ ಅತಿರೇಕದ ವರ್ತನೆ ಮಕ್ಕಳ ಮೇಲೆ ಪರಿಣಾಮ -ಮಾಜಿ ಕ್ರಿಕೆಟಿಗ ಕಿಡಿ

ಫೀಲ್ಡ್​ನಲ್ಲಿ ಕೊಹ್ಲಿ ಅತಿರೇಕದ ವರ್ತನೆ ಮಕ್ಕಳ ಮೇಲೆ ಪರಿಣಾಮ -ಮಾಜಿ ಕ್ರಿಕೆಟಿಗ ಕಿಡಿ

ಆಫ್​​ ದ ಫೀಲ್ಡ್​ನಲ್ಲಿ ಜಾಲಿ ಮೂಡ್​ನಲ್ಲಿರೋ ವಿರಾಟ್​​ ಕೊಹ್ಲಿ ಮೈದಾನಕ್ಕಿಳಿದರೆ ಸಾಕು ಅಗ್ರೆಸ್ಸೀವ್​ ಮೂಡ್​ಗೆ ಟ್ಯೂನ್​ ಆಗ್ತಾರೆ. ಕೊಹ್ಲಿಯ ಆನ್​ ಫೀಲ್ಡ್​​ ವರ್ತನೆಗಳು ತಂಡದ ಎನರ್ಜಿ ಬೂಸ್ಟರ್​​ ಎಂದು ಹಲವರು ಹೇಳಿದ್ರೆ, ಇದು ಕೆಟ್ಟ ಸಂಪ್ರದಾಯ ಎಂದೇ ಹೇಳಿದ್ದಾರೆ. ಇದೀಗ ಈ ಕುರಿತು ವಿಶ್ಲೇಷಕ ದೀಪ್​ ದಾಸ್​ ಗುಪ್ತಾ ಹೇಳಿರುವ ಒಂದು ಮಾತು ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ಟೀಮ್​ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಆಫ್​ ದ ಪೀಲ್ಡ್​ನಲ್ಲಿ ಇರೋದಕ್ಕೂ ಅನ್​ ಪೀಲ್ಡ್​ ಇರೋದಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ಕೊಹ್ಲಿ ಮೈದಾನಕ್ಕಿಳಿದ ಕೂಡಲೇ ಅಗ್ರೆಸ್ಸೀವ್​ ಮೂಡ್​ಗೆ ಟ್ಯೂನ್​ ಆಗಿ ಬಿಡ್ತಾರೆ. ಪ್ರತಿ ವಿಕೆಟ್​ ಬಿದ್ದಾಗಲೂ ವಿಶೇಷವಾಗಿ ಸೆಲಬ್ರೇಷನ್​ ಮಾಡೋ ಕೊಹ್ಲಿ, ತಮ್ಮ ಪ್ಲಾನ್​ ಉಲ್ಟಾ ಆದಾಗ ನಿರಾಶಾ ಭಾವವನ್ನ ತೋರಿದ ಉದಾಹರಣೆಗಳೂ ಇವೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲೂ ಗಮನ ಸೆಳೆದ ವಿಚಾರ ಇದೇ.

ಮೈದಾನದಲ್ಲಿ ಕೊಹ್ಲಿ ತೋರೋ ವರ್ತನೆಗಳು ಈಗಾಗಲೇ ಹಲವು ಬಾರಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 2018ರಲ್ಲಿ ಈ ಬಗ್ಗೆ ತಮ್ಮ ಪೇಸ್​ ಬುಕ್​ನಲ್ಲಿ ಬರೆದುಕೊಂಡಿದ್ದ ನಾಸಿರುದ್ದೀನ್​ ಷಾ ಕೊಹ್ಲಿ ಒಬ್ಬ ವಿಶ್ವದ ಬೆಸ್ಟ್​ ಬ್ಯಾಟ್ಸ್​ಮನ್​ ಜೊತೆಗೆ ವಿಶ್ವದ ಕೆಟ್ಟ ವರ್ತನೆಯ ಆಟಗಾರ ಕೂಡ ಎಂದು ಹೇಳಿದ್ರು. ನಾಸಿರುದ್ದೀನ್​ ಶಾ ಮಾತ್ರವಲ್ಲ, ಇನ್ನೂ ಹಲವರು ವಿಶ್ವ ಕ್ರಿಕೆಟ್​​ ಲೋಕದಲ್ಲಿ ಭಾರತದ ಪ್ರತಿನಿಧಿಯಾಗಿ ಅತಿರೇಕದಲ್ಲಿ ಕೊಹ್ಲಿ ವರ್ತಿಸೋದು ಸರಿಯಲ್ಲ ಎಂದೇ ಹೇಳಿದ್ದಾರೆ.

‘ವಿಶ್ವದ ಕೆಟ್ಟ ವರ್ತನೆಯ ಆಟಗಾರ ವಿರಾಟ್​’
‘ವಿರಾಟ್​ ಕೇವಲ ವಿಶ್ವದ ಶ್ರೇಷ್ಠ ಬ್ಯಾಟ್ಸ್​​​​ಮನ್​ ಮಾತ್ರವಲ್ಲ, ವಿಶ್ವದ ಕೆಟ್ಟ ವರ್ತನೆಯ ಆಟಗಾರ ಕೂಡಾ’
ನಾಸೀರುದ್ದೀನ್​ ಷಾ, ನಟ

ಇದೀಗ ಕೊಹ್ಲಿಯ ವರ್ತನೆಗಳು ಮಕ್ಕಳ ಬಗ್ಗೆ ಬಿರುವ ಪರಿಣಾಮದ ಬಗ್ಗೆ ಮಾಜಿ ಕ್ರಿಕೆಟಿಗ, ಹಾಲಿ ವಿಶ್ಲೇಷಕ ದೀಪ್​ ದಾಸ್​ ಗುಪ್ತಾ ಮಾತನಾಡಿದ್ದಾರೆ. ಇದು ಹೊಸ ಚರ್ಚೆಗಳಿಗೆ ನಾಂದಿ ಹಾಡಿದೆ. ಕೊಹ್ಲಿ ಅಗ್ರೆಸ್ಸೀವ್​ ನೆಸ್​ ಮೈದಾನದಲ್ಲಿ ಇಡೀ ತಂಡ ಆ್ಯಕ್ಟೀವ್​​ ಆಗಿರಲು ಸಹಾಯ ಮಾಡುತ್ತೇ ಎಂದಿರುವ ದೀಪ್​, ಇದು ಪಂದ್ಯವನ್ನ ನೋಡ್ತಾ ಇರೋ ಮಕ್ಕಳ ಮೇಲೂ ದುಷ್ಪರಿಣಾಮ ಬೀರುತ್ತೆ ಎಂದಿದ್ದಾರೆ. ಕೊಹ್ಲಿಯನ್ನ ಅನುಸರಿಸುವ ಅಸಂಖ್ಯ ಅಭಿಮಾನಿಗಳಿದ್ದಾರೆ. ಅದರಲ್ಲೂ ಮುಖ್ಯವಾಗಿ ಪಂದ್ಯವನ್ನ ನೋಡುತ್ತಿರುವ ಮಕ್ಕಳನ್ನ ಇದು ಪರಿಣಾಮ ಮಾಡಲಿದೆ ಅನ್ನೋದು ದೀಪ್​ ಅಭಿಪ್ರಾಯವಾಗಿದೆ.

‘ವರ್ತನೆ ಪರಿಣಾಮ ಬೀರುತ್ತದೆ’
‘ಮಕ್ಕಳು ಕೊಹ್ಲಿಯ ಆಟವನ್ನ ನೋಡುತ್ತಿರುತ್ತಾರೆ. ಅವರು ಹಲವು ಮಕ್ಕಳ ರೋಲ್​ ಮಾಡೆಲ್​ ಕೂಡ ಹೌದು. ವರ್ತನೆ ಪರಿಣಾಮ ಬೀರುತ್ತೆ’
ದೀಪ್​ದಾಸ್​ ಗುಪ್ತ, ಮಾಜಿ ಕ್ರಿಕೆಟಿಗ

ಕೊಹ್ಲಿ ಟೀಮ್​ ಇಂಡಿಯಾಗೆ ಪದಾರ್ಪಣೆ ಮಾಡಿದ ದಿನದಿಂದಲೂ ವಿರಾಟ್​ ವರ್ತನೆ ಹಲವು ಭಾರಿ ಚರ್ಚೆಗೆ ಕಾರಣವಾಗಿದೆ. ಹಲವರು ಇದನ್ನ ತಂಡಕ್ಕೆ ಎನರ್ಜಿ ಬೂಸ್ಟರ್​ ಎಂದಿದ್ರೆ, ಇನ್ನು ಕೆಲವರು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ನಡೆ ಎಂದಿದ್ದಾರೆ. ಆದ್ರೆ, ವಿರಾಟ್​​ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸಾಧನೆಯನ್ನ ಮಾಡುತ್ತಲೇ ಇದ್ದಾರೆ.

The post ಫೀಲ್ಡ್​ನಲ್ಲಿ ಕೊಹ್ಲಿ ಅತಿರೇಕದ ವರ್ತನೆ ಮಕ್ಕಳ ಮೇಲೆ ಪರಿಣಾಮ -ಮಾಜಿ ಕ್ರಿಕೆಟಿಗ ಕಿಡಿ appeared first on News First Kannada.

Source: newsfirstlive.com

Source link