ಮತ್ತೊಂದು ಬಾರಿ ಪ್ರೆಗ್ನೆಂಟ್​ ಆದ್ರಾ ಕರೀನಾ? ಗರ್ಭ ಧರಿಸಿದ ಫೋಟೋ ಹಂಚಿಕೊಂಡ ಬೆಬೊ

ಮತ್ತೊಂದು ಬಾರಿ ಪ್ರೆಗ್ನೆಂಟ್​ ಆದ್ರಾ ಕರೀನಾ? ಗರ್ಭ ಧರಿಸಿದ ಫೋಟೋ ಹಂಚಿಕೊಂಡ ಬೆಬೊ

ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಮ್ಯಾಟರ್ನಿಟಿ ಫೋಟೋ ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಕರೀನಾ ಮತ್ತೆ ಪ್ರೆಗ್ನೆಂಟ್​ ಅಲ್ಲ ಬದಲಾಗಿ ಅದು ಅವರ ಹಳೆಯ ಫೋಟೋ!

ಕರೀನಾ ಕಪೂರ್​ ಖಾನ್ 2021ರ ಫೆಬ್ರವರಿಯಲ್ಲಿ ಎರಡನೇ ಪುತ್ರನಿಗೆ ಜನ್ಮ ನೀಡಿದ್ದು, ‘ಜೆಹ್’ ಎಂದು ಹೆಸರು ಇಟ್ಟಿದ್ದಾರೆ. ಇದೀಗ ಕರೀನಾ, ಅವರು ಪ್ರೆಗ್ನೆಂಟ್​ ಆಗಿದ್ದ ದಿನವನ್ನ ಸ್ಮರಿಸಿಕೊಂಡು ಫೋಟೋವನ್ನು ಹಂಚಿಕೊಂಡಿದ್ದಾರೆ. ಕರೀನಾ ಅವರು ಇತ್ತೀಚೆಗೆ ‘ಕರೀನಾ ಕಪೂರ್​ ಖಾನ್ಸ್​ ಪ್ರೆಗ್ನೆನ್ಸಿ ಬೈಬಲ್​​’ ಅನ್ನೋ ಪುಸ್ತಕವನ್ನು ಸಹ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಎರಡನೇ ಪುತ್ರನಿಗೆ ‘ಜೆಹ್’​​ ಎಂದು ಹೆಸರಿಟ್ಟ ಕರೀನಾ-ಸೈಫ್ ದಂಪತಿ

ಕರೀನಾ ಕಪೂರ್ ಇತ್ತೀಚೆಗೆ ಒಂದೆಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಸಿನಿಮಾವೊಂದರಲ್ಲಿ ಸೀತೆ ಪಾತ್ರ ಮಾಡಲು 12 ಕೋಟಿ ರೂಪಾಯಿ ಸಂಭಾವನೆ ಕೇಳ್ತಿದ್ದಾರೆ ಅಂತಾ ಹರಿದಾಡಿತ್ತು. ಸೈಫ್​ ಅಲಿ ಖಾನ್ ಜೊತೆ ಮದ್ವೆ ಆಗಿರುವ ಕರೀನಾ ಸೀತೆ ಪಾತ್ರ ಮಾಡಿದ್ರೆ ಹಿಂದುಗಳ ಭಾವನೆಗೆ ಧಕ್ಕೆ ಆಗುತ್ತದೆ ಅನ್ನೋದು ಹಲವರ ವಿರೋಧಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ನಾವಿಲ್ಲಿ ಕೊರೊನಾ.. ಕರೀನಾ ಇಬ್ಬರ ಜೊತೆಗೂ ಹೋರಾಡುತ್ತಿದ್ದೇವೆ- ಕಾಲೆಳೆದ ಆಮಿರ್

ಇದನ್ನೂ ಓದಿ: ಮತ್ತೆ ಗಂಡು ಮಗವಿಗೆ ತಾಯಿಯಾದ ಬಾಲಿವುಡ್ ಬೆಬೋ ಕರೀನಾ ಕಪೂರ್​ ಖಾನ್​

 

The post ಮತ್ತೊಂದು ಬಾರಿ ಪ್ರೆಗ್ನೆಂಟ್​ ಆದ್ರಾ ಕರೀನಾ? ಗರ್ಭ ಧರಿಸಿದ ಫೋಟೋ ಹಂಚಿಕೊಂಡ ಬೆಬೊ appeared first on News First Kannada.

Source: newsfirstlive.com

Source link