ಕಲಬುರಗಿಯಲ್ಲಿ ಮಳೆಯ ಆರ್ಭಟ; ಸಂಕಷ್ಟದಲ್ಲಿ ಸಿಲುಕಿದ್ದ ಕುರಿಗಳ ರೋಚಕ ರಕ್ಷಣೆ

ಕಲಬುರಗಿಯಲ್ಲಿ ಮಳೆಯ ಆರ್ಭಟ; ಸಂಕಷ್ಟದಲ್ಲಿ ಸಿಲುಕಿದ್ದ ಕುರಿಗಳ ರೋಚಕ ರಕ್ಷಣೆ

ಕಲಬುರಗಿ: ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಚಿಂಚೋಳಿ ತಾಲೂಕಿನ ಧರ್ಮಸಾಗರ ತಾಂಡಾದಲ್ಲಿರುವ ಹಳ್ಳ ತುಂಬಿ ಹರಿದ್ದರಿಂದ ಅಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ ಪ್ರಸಂಗ ನಡೆಯಿತು.

blank

ಧರ್ಮಸಾಗರದ ಬಳಿಯಿರುವ ಹಳ್ಳವು ನಿನ್ನೆ ಸುರಿದ ಭರ್ಜರಿ ಮಳೆಯಿಂದಾಗಿ ತುಂಬಿ ಹರಿದಿದೆ. ಇದರಿಂದ ತಾಂಡಾದ ಜನ ಹಳ್ಳ ದಾಟಲು ಹರಸಾಹಸ ಪಟ್ಟಿದ್ದಾರೆ. ಇನ್ನು ಮೇಕೆ ಮೇಯಿಸಲು ಹೋಗಿದ್ದ ಕುರಿಗಾಹಿಗಳು ತಮ್ಮ ಮೇಕೆಯನ್ನ ಕಾಪಾಡಿಕೊಳ್ಳಲು ಪರದಾಟ ನಡೆಸಿದರು.

blank

ತಾಂಡಾ ನಿವಾಸಿಗಳ ಸಹಾಯದಿಂದ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮೇಕೆಗಳನ್ನು ಎತ್ತಿಕೊಂಡೇ ಸಾಗಿಸಿದ್ದಾರೆ. ವರುಣನ ಭರ್ಜರಿ ಆರ್ಭಟಕ್ಕೆ ತತ್ತರಿಸಿರುವ ಜನ ಮನೆಯಿಂದ ಹೊರ ಬಾರದಂತಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

The post ಕಲಬುರಗಿಯಲ್ಲಿ ಮಳೆಯ ಆರ್ಭಟ; ಸಂಕಷ್ಟದಲ್ಲಿ ಸಿಲುಕಿದ್ದ ಕುರಿಗಳ ರೋಚಕ ರಕ್ಷಣೆ appeared first on News First Kannada.

Source: newsfirstlive.com

Source link